Advertisement
ದೊಡ್ಡ ಪತ್ರೆಯಲ್ಲಿ ವಿಟಮಿನ್ ಸಿ, ಫೈಬರ್ ಮತ್ತು ಕ್ಯಾಲ್ಸಿಯಂ ಗುಣ ಹೇರಳವಾಗಿದ್ದು, ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸಲು ಸಹಾಯ ಮಾಡುತ್ತದೆ. ದೊಡ್ಡ ಪತ್ರೆ ಎಲೆ ಉತ್ತಮ ಮನೆ ಮದ್ದಾಗಿದ್ದು, ತಲೆನೋವು, ಶೀತದಂತ ರೋಗಗಳಿಗೆ ಸೂಕ್ತವಾದ ಮದ್ದು ಅಂದರೆ ದೊಡ್ಡಪತ್ರೆಯ ಕಷಾಯ.
Related Articles
Advertisement
ದೊಡ್ಡಪತ್ರೆ ಎಲೆ ಚಟ್ನಿಬೇಕಾಗುವ ಸಾಮಗ್ರಿಗಳು
ದೊಡ್ಡಪತ್ರೆ ಎಲೆ-1ಕಪ್,ತೆಂಗಿನ ತುರಿ-ಅರ್ಧ ಕಪ್, ಒಣಮೆಣಸು-3, ಹುಣಸೇ ಹುಳಿ-ಸ್ವಲ್ಪ, ಜೀರಿಗೆ-1ಚಮಚ, ಕಡ್ಲೆಬೇಳೆ-2ಚಮಚ,ಬೆಲ್ಲ-ನಿಂಬೆ ಗಾತ್ರದಷ್ಟು, ಉದ್ದಿನಬೇಳೆ-1ಚಮಚ, ಬೆಳ್ಳುಳ್ಳಿ-6ಎಸಳು, ರುಚಿಗೆ ತಕ್ಕಷ್ಟು-ಉಪ್ಪು.
ಒಗ್ಗರಣೆಗೆ: ಸಾಸಿವೆ,ಕಡ್ಲೆಬೇಳೆ,ಕರಿಬೇವಿನ ಎಲೆ,ಒಣಮೆಣಸು-1,ಇಂಗು.
ಮೊದಲಿಗೆ ದೊಡ್ಡಪತ್ರೆ ಎಲೆಯನ್ನು ಚೆನ್ನಾಗಿ ತೊಳೆಯಿರಿ.ನಂತರ ಒಂದು ಬಾಣಲೆಗೆ ಎರಡು ಚಮಚದಷ್ಟು ಎಣ್ಣೆಯನ್ನು ಹಾಕಿ,ಅದಕ್ಕೆ ದೊಡ್ಡಪತ್ರೆ ಎಲೆಯನ್ನು ಹಾಕಿ ಹುರಿಯಿರಿ (ಎಲೆಯಲ್ಲಿರುವ ನೀರಿನಾಂಶ ಹಾಗೂ ಎಲೆಯ ಹಸಿ ವಾಸನೆ ಹೋಗುವ ತನಕ).ನಂತರ ಹಸಿಮೆಣಸು,ಬೆಳ್ಳುಳ್ಳಿ,ತೆಂಗಿನ ತುರಿ, ಉದ್ದಿನಬೇಳೆ,ಕಡ್ಲೆಬೇಳೆ ಮತ್ತು ಜೀರಿಗೆ ಹಾಕಿ ಪುನಃ ಚೆನ್ನಾಗಿ ಹುರಿಯಿರಿ.ತದನಂತರ ಒಂದು ಮಿಕ್ಸಿಜಾರಿಗೆ ಹುರಿದಿಟ್ಟ ಮಸಾಲಯನ್ನು ಹಾಕಿ ಸ್ವಲ್ಪ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಆಬಳಿಕ ಒಂದು ಬಾಣಲೆಗೆ 2ಚಮಚದಷ್ಟು ಎಣ್ಣೆಯನ್ನು ಹಾಕಿ ಕಾದಮೇಲೆ ಸಾಸಿವೆ, ಕಡ್ಲೆಬೇಳೆ,ಕರಿಬೇವಿನ ಎಲೆ,ಒಣಮೆಣಸು ಹಾಗೂ ಇಂಗು ಹಾಕಿ,ನಂತರ ರುಬ್ಬಿಟ್ಟ ದೊಡ್ಡಪತ್ರೆ ಮಸಾಲೆಯನ್ನು ಒಗ್ಗರಣೆಗೆ ಸೇರಿಸಿ ನಿಂಬೆ ಗಾತ್ರದಷ್ಟು ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ 5ನಿಮಿಷಗಳವರೆಗೆ ಫ್ರೈ ಮಾಡಿದರೆ ಆರೋಗ್ಯಕರವಾದ ದೊಡ್ಡಪತ್ರೆ ಎಲೆಯ ಚಟ್ನಿ ಸವಿಯಲು ಸಿದ್ಧ. ದೊಡ್ಡಪತ್ರೆ ತಂಬುಳಿ
ಬೇಕಾಗುವ ಸಾಮಗ್ರಿಗಳು
ದೊಡ್ಡಪತ್ರೆ ಎಲೆ-8ರಿಂದ10,ಮೊಸರು-ಅರ್ಧ ಕಪ್, ಜೀರಿಗೆ-1ಚಮಚ, ಹಸಿಮೆಣಸು-3,ತೆಂಗಿನ ತುರಿ-5ಚಮಚ, ತುಪ್ಪ-4ಚಮಚ, ಸಾಸಿವೆ-ಸ್ವಲ್ಪ, ಕರಿಬೇವು,ಇಂಗು,ರುಚಿಗೆ ತಕ್ಕಷ್ಟು ಉಪ್ಪು.
ಮೊದಲಿಗೆ ದೊಡ್ಡಪತ್ರೆ ಎಲೆಗಳನ್ನು ಚೆನ್ನಾಗಿ ತೊಳೆದಿಟ್ಟುಕೊಳ್ಳಿ.ನಂತರ ಒಂದು ಪ್ಯಾನ್ಗೆ ಒಂದು ಚಮಚದಷ್ಟು ತುಪ್ಪವನ್ನು ಹಾಕಿ ಅದಕ್ಕೆ ದೊಡ್ಡಪತ್ರೆ ಎಲೆಗಳನ್ನು ಹಾಕಿ (ಎಲೆಯಲ್ಲಿರುವ ನೀರಿನಾಂಶ ಹಾಗೂ ಹಸಿವಾಸನೆ ಹೋಗುವ ತನಕ)ಹುರಿದು ಒಂದು ಬೌಲ್ಗೆ ಹಾಕಿ.ನಂತರ ಅದೇ ಪ್ಯಾನ್ ಒಂದು ಚಮಚದಷ್ಟು ತುಪ್ಪವನ್ನು ಹಾಕಿ,ಜೀರಿಗೆ ಮತ್ತು ಹಸಿಮೆಣಸು ಸೇರಿಸಿ ಹುರಿಯಿರಿ.ತದನಂತರ ಒಂದು ಮಿಕ್ಸಿಜಾರಿಗೆ ತೆಂಗಿನ ತುರಿ,ಹುರಿದಿಟ್ಟ ದೊಡ್ಡಪತ್ರೆ ಹಾಗೂ ಜೀರಿಗೆ -ಹಸಿಮೆಣಸಿನವನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಒಂದು ಬೌಲ್ ಗೆ ಒಂದು ಕಪ್ ನಷ್ಟು ಮೊಸರನ್ನು ಹಾಕಿ,ಅದಕ್ಕೆ ರುಬ್ಬಿಟ್ಟ ದೊಡ್ಡಪತ್ರೆ ಮಿಶ್ರಣ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.ನಂತರ ಒಂದು ಬಾಣಲೆಗೆ ಎರಡು ಚಮಚದಷ್ಟು ತುಪ್ಪ ಹಾಕಿ ಸಾಸಿವೆ,ಜೀರಿಗೆ,ಕರಿಬೇವು ಹಾಗೂ ಇಂಗು ಸೇರಿಸಿ ಒಗ್ಗರಣೆ ಹಾಕಿದರೆ ದೊಡ್ಡಪತ್ರೆ ತಂಬುಳಿ ಸವಿಯಲು ಸಿದ್ಧ. ಇದು ಅನ್ನದ ಜೊತೆ ಸವಿಯಲು ತುಂಬಾನೇ ಚೆನ್ನಾಗಿರುತ್ತೆ. -ಶ್ರೀರಾಮ್ ಜಿ .ನಾಯಕ್