Advertisement
ನಗುತ್ತಿರುವಾಗ ಒಬ್ಬ ವ್ಯಕ್ತಿಯ ಹೃದಯದ ಬಡಿತ ನಿಮಿಷಕ್ಕೆ 120 ತಲುಪುತ್ತದೆ. ನಗುವಿನಿಂದ ನಮ್ಮ ರಕ್ತದ ಒತ್ತಡ ಕಡಿಮೆ ಆಗಿ ರಕ್ತ ಪರಿಚಲನೆ ಹೆಚ್ಚುತ್ತದೆ. ನಗುವಿನಿಂದ ಮಾಂಸಖಂಡ ಕುತ್ತಿಗೆಯ ನರಗಳ ಬಿಗಿತ ಕಡಿಮೆಯಾಗುತ್ತದೆ. ನಗು ಶಾಸ್ವಕೋಶವನ್ನು ಹಿಗ್ಗಿಸಿ ರಕ್ತದಲ್ಲಿ ಆಮ್ಲಜನಕ ವೃದ್ಧಿಯಾಗುವಂತೇ ಮಾಡುತ್ತದೆ. ಹಾಗೆಯೇ ಶ್ವಾಸನಾಳಗಳನ್ನು ಸ್ವತ್ಛಗೊಳಿಸುತ್ತದೆ. ನಗುವುದರಿಂದ ನಮ್ಮ ಮಿದುಳಿನಲ್ಲಿ ಎಂಡಾರ್ಫಿನ್ ಗಳೆಂಬ ನರವಾಹಗಳು ಬಿಡುಗಡೆಯಾಗುತ್ತದೆ. ಎಂಡಾರ್ಫಿನ್‌ಗಳು ಯಾವುದೇ ಅಡ್ಡ ಪರಿಣಾಮ ಉಂಟು ಮಾಡದೇ ನಮ್ಮನ್ನು ನಿದ್ರಾಸ್ಥಿತಿಗೆ ಒಯ್ಯತ್ತವೆ. ನಗು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಮನಸ್ಸಿಗೆ ಸಮಾಧಾನ ನೀಡುತ್ತದೆ. ನಗುವಿನಲ್ಲಿ ಏನೋ ಒಂದು ರೀತಿಯ ಶಕ್ತಿ ಇದೆ. ನಗುವನ್ನು ಚಿಕಿತ್ಸೆಯಾಗಿ ಬಳಸಬಹುದು ಎಂದು ಪ್ರೊಫೆಸರ್‌ಮಾರ್ಕೊ ಸಫಿ ಸಲಹೆ ನೀಡಿದ್ದಾರೆ. ‘ಹೃದಯ ಕಾಯಿಲೆ ಇರುವ ಜನರನ್ನು ಹಾಸ್ಯ ಸಂಜೆಗಳಿಗೆ ಆಹ್ವಾನಿಸಬಹುದು ಅಥವಾ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮೋಜಿನ ಸಂಜೆಗಳನ್ನು ಆನಂದಿಸಲು ಪ್ರೋತ್ಸಾಹಿಸಬಹುದು’ ಎಂದು ಅವರು ಹೇಳುತ್ತಾರೆ.ಡಾ| ಆನೆಟ್ ಗುಡ್‌ಹಾರ್ಟ್ ಅವರ ಪುಸ್ತಕ, ‘ಲಾಫ್ಟರ್‌ಥೆರಪಿ’ನಲ್ಲಿ, ಇಡೀ ಅಧ್ಯಾಯವು ನಗುವಿನ ಭೌತಿಕ ಪ್ರಯೋಜನಗಳಿಗೆ ಸಮರ್ಪಿಸಲಾಗಿದೆ, ಏಕೆಂದರೆ ಇದು ದೇಹದಲ್ಲಿನ ಪ್ರತಿಯೊಂದು ಪ್ರಮುಖ ವ್ಯವಸ್ಥೆಯನ್ನು ತೊಡಗಿಸುತ್ತದೆ.
Advertisement
UV Fusion: ನಗುವಿನಿಂದ ಆರೋಗ್ಯ
02:04 PM Nov 03, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.