Advertisement

ಶಾಹೀನ್ ಬಾಗ್‌ನಲ್ಲಿ ಅತಿಕ್ರಮಣ ವಿರೋಧಿ ಕಾರ್ಯಾಚರಣೆ: ಪ್ರತಿಭಟನೆಯ ಮೂಲಕ ತಡೆ

03:27 PM May 09, 2022 | Team Udayavani |

ನವದೆಹಲಿ : ದೆಹಲಿಯ ಶಾಹೀನ್ ಬಾಗ್‌ನಲ್ಲಿ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಸೋಮವಾರ ನಡೆಸುತ್ತಿದ್ದ ಅತಿಕ್ರಮಣ ವಿರೋಧಿ ಅಭಿಯಾನದ ವಿರುದ್ಧ ಸ್ಥಳೀಯರು ಭಾರಿ ಪ್ರತಿಭಟನೇ ನಡೆಸಿದರು. ಆಪ್ ಶಾಸಕ ಅಮಾನತುಲ್ಲಾ ಖಾನ್ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

Advertisement

ಇಂದು ದೆಹಲಿಯ ಶಾಹೀನ್ ಬಾಗ್‌ನಲ್ಲಿ ಡೆಮಾಲಿಷನ್ ಡ್ರೈವ್ ಅನ್ನು ಪ್ರಾರಂಭಿಸಿತು, ಆದರೆ ಭಾರಿ ಪ್ರತಿಭಟನೆಯ ಹಿನ್ನಲೆಯಲ್ಲಿ ಸ್ವಲ್ಪ ಸಮಯದ ನಂತರ ನಿಲ್ಲಿಸಿತು.

ಸ್ಥಳೀಯರು ಶಾಹೀನ್ ಬಾಗ್ ಪ್ರದೇಶದ ರಸ್ತೆಗಳ ಮೇಲೆ ಕುಳಿತು ಅತಿಕ್ರಮಣ ವಿರೋಧಿ ಅಭಿಯಾನಕ್ಕಾಗಿ ತಂದ ಬುಲ್ಡೋಜರ್‌ಗಳನ್ನು ನಿಲ್ಲಿಸಿದ್ದಾರೆ.

ಪ್ರತಿಭಟನೆಯಲ್ಲಿ ಭಾಗಿಯಾದ ಎಎಪಿ ಶಾಸಕ ಅಮಾನತುಲ್ಲಾ ಖಾನ್, ಎಂಸಿಡಿ ಅತಿಕ್ರಮಣ ವಿರೋಧಿ ಅಭಿಯಾನದೊಂದಿಗೆ ಬಿಜೆಪಿ ಶಾಂತಿಯನ್ನು ಕದಡುತ್ತಿದೆ ಎಂದು ಆರೋಪಿಸಿದ್ದಾರೆ.

ನನ್ನ ಕೋರಿಕೆಯ ಮೇರೆಗೆ ಜನರು ಈಗಾಗಲೇ ಅತಿಕ್ರಮಣಗಳನ್ನು ತೆಗೆದುಹಾಕಿದ್ದಾರೆ. ಇಲ್ಲಿನ ಮಸೀದಿಯ ಹೊರಗಿರುವ ‘ವಾಝು ಖಾನಾ’ ಮತ್ತು ಶೌಚಾಲಯಗಳನ್ನು ಈ ಹಿಂದೆ ಪೊಲೀಸರ ಸಮ್ಮುಖದಲ್ಲಿ ತೆಗೆಯಲಾಗಿತ್ತು. ಅತಿಕ್ರಮಣವೇ ಇಲ್ಲದಿರುವಾಗ ಇಲ್ಲಿಗೆ ಏಕೆ ಬಂದಿದ್ದಾರೆ? ಕೇವಲ ರಾಜಕೀಯ ಮಾಡಲು. ಬಿಜೆಪಿ ಮತ್ತು ಪೌರಕಾರ್ಮಿಕರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Advertisement

ಇಂದು ಎಎಪಿ ಮತ್ತು ಕಾಂಗ್ರೆಸ್ ನಾಯಕರು ಬುಲ್ಡೋಜರ್‌ಗಳ ಮುಂದೆ ಬಂದರು. ಅವರು ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳನ್ನು ಬೆಂಬಲಿಸಲು ಬಂದಿದ್ದಾರೆ. ಇದಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ಈ ತುಷ್ಟೀಕರಣ ರಾಜಕಾರಣ ಕೆಲಸ ಮಾಡುವುದಿಲ್ಲ ಎಂದು ಬಿಜೆಪಿ ನಾಯಕ ಆದೇಶ್ ಗುಪ್ತಾ ಹೇಳಿದ್ದಾರೆ.

“ಅದು ಶಾಹೀನ್ ಬಾಗ್ ಅಥವಾ ಜಹಾಂಗೀರ್ ಪುರಿ ಅಥವಾ ಸೀಮಾಪುರಿ ಆಗಿರಬಹುದು, ಇವೆಲ್ಲವೂ ಅಕ್ರಮ ವ್ಯವಹಾರಗಳು, ಅಕ್ರಮ ನಿರ್ಮಾಣಗಳು ಮತ್ತು ಅಕ್ರಮ ನುಸುಳುಕೋರರಿಗೆ ಆಧಾರವಾಗಿದೆ. ಬುಲ್ಡೋಜರ್, ಪೊಲೀಸ್, ಕಾನೂನು ಪ್ರವೇಶಕ್ಕೆ ನಿಷೇಧವಿದೆ. ಇವುಗಳು ಚಿಕ್ಕ ಮಿನಿ ಪಾಕಿಸ್ತಾನದಂತಿವೆ, ಅಲ್ಲಿ ಭಾರತದ ಸಂವಿಧಾನವನ್ನು ಜಾರಿಗೆ ತರುವುದು ಅಸಾಧ್ಯವಾಗುತ್ತಿದೆ, ”ಎಂದು ಬಿಜೆಪಿಯ ಕಪಿಲ್ ಮಿಶ್ರಾ ಟ್ವೀಟ್‌ನಲ್ಲಿ ಕಿಡಿ ಕಾರಿದ್ದಾರೆ.

ಕಟ್ಟಡಗಳ ಧ್ವಂಸವನ್ನು ವಿರೋಧಿಸಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಅರ್ಜಿಯನ್ನು ಸಲ್ಲಿಸಿದ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ, ರಾಜಕೀಯ ಪಕ್ಷದ ಉದಾಹರಣೆಯಲ್ಲಿ ಅತಿಕ್ರಮಣ ವಿರೋಧಿ ಕಾರ್ಯಾಚರಣೆಯಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next