ಕೋಟ: ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಸ್ಥಳೀಯ ವಾಣಿಜ್ಯ ವಾಹನಗಳಿಗೆ ಜಾರಿಯಲ್ಲಿದ್ದ ಶುಲ್ಕ ವಿನಾಯಿತಿ ಶುಕ್ರವಾರದಿಂದ ರದ್ದು ಪಡಿಸಿದ್ದನ್ನು ಖಂಡಿಸಿ ಸ್ಥಳೀಯ ವಾಹನ ಚಾಲಕ- ಮಾಲಕರಿಂದ ಪ್ರತಿಭ ಟನೆ ನಡೆಯಿತು.
ಈ ಹಿಂದೆ 2017ರಲ್ಲಿ ಟೋಲ್ ಆರಂಭಿಸುವಾಗ ಸ್ಥಳೀಯ ವಾಣಿಜ್ಯ- ವಾಣಿಜ್ಯೇತರ ವಾಹನಗಳಿಗೆ ಸುಂಕ ವಸೂಲಿಗೆ ಪ್ರಯತ್ನಿಸಲಾಗಿತ್ತು. ಸ್ಥಳೀಯರ ಹೋರಾಟದ ಬಳಿಕ 7 ವರ್ಷಗಳಿಂದ ಕೋಟ ಜಿ. ಪಂ. ಭಾಗದ ಎಲ್ಲ ವಾಹನಗಳಿಗೆ ವಿನಾಯಿತಿ ಇತ್ತು. ಇದೀಗ ಅದನ್ನು ರದ್ದುಪಡಿಸಿದ್ದು, ಶುಕ್ರವಾರ ಬೆಳಗ್ಗೆ 10ರಿಂದ ಹಳದಿ ಬಣ್ಣದ ನಂಬರ್ ಪ್ಲೇಟ್‌ನ ಸ್ಥಳೀಯ ವಾಣಿಜ್ಯ ವಾಹನಗಳಿಂದಲೂ ಶುಲ್ಕ ಪಡೆಯಲು ಆರಂಭಿಸಲಾಗಿತ್ತು,ಶುಲ್ಕ ವಿಧಿಸುತ್ತಿರವ ಬಗ್ಗೆ ಅಪರಾಹ್ನದ ವೇಳೆಗೆ ಸ್ಥಳೀಯ ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳೀಯ ರಿಗೆ ಮೀಸಲಿದ್ದ ಎರಡೂ ಕಡೆಯ ಗೇಟ್‌ಗಳಲ್ಲಿ ವಾಹನಗಳನ್ನು ನಿಲ್ಲಿಸಿ 2 ಗಂಟೆ ಪ್ರತಿಭಟನೆ ನಡೆಸಿದರು. ವಿನಾಯಿ ತಿಯಿಂದ ಇಲಾಖೆಗೆ ನಷ್ಟವಾಗುತ್ತಿದ್ದು, ನಿರ್ಧಾರದಲ್ಲಿ ಸಡಿಲಿಕೆ ಇಲ್ಲ ಎಂದರು ಟೋಲ್‌ನ ಮುಖ್ಯಸ್ಥರು. ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿತು. ತರು ವಾಯ ಟೋಲ್‌ನವರು ಒಂದುದಿನದ ಕಾಲಾವಕಾಶ ನೀಡುವುದಾಗಿ ತಿಳಿಸಿದಾಗ ಪ್ರತಿಭಟನೆ ಸ್ಥಗಿತಗೊಳಿಸ ಲಾಯಿತು.
ಸಂಸದರೊಂದಿಗೆ ಮಾತುಕತೆಯಾವುದೇ ಕಾರಣಕ್ಕೆ ಸ್ಥಳೀಯರಿಗೆ ಟೋಲ್ ವಿಧಿಸುವುದು ಸರಿಯಲ್ಲ ಹಾಗೂ ಹಿಂದಿನಂತೆ ರಿಯಾಯಿತಿ ಮುಂದುವರಿಯಬೇಕು. ಈ ಬಗ್ಗೆ ವಾಹನ ಚಾಲಕ, ಮಾಲಕರು, ಸ್ಥಳೀಯರು ಜತೆಯಾಗಿ ಸಂಸದರೊಂ ದಿಗೆ ಚರ್ಚಿಸುವರು. ಒಂದು ವೇಳೆ ಟೋಲ್ ಪ್ಲಾಜಾದವರು ನಿರ್ಧಾರ ಬದಲಿಸದಿದ್ದರೆ ಹೋರಾಟ ಅನಿವಾರ್ಯ ಎಂದು ಹೇಳಿದರು.
ಸಂಘಟಿತ ಹೋರಾಟ ನಡೆಸಬೇ ಕಾದ ಅನಿವಾರ್ಯತೆ ಇದೆ ಎಂದು ಪ್ರತಿಭಟನಾ ನಿರತರು ತಿಳಿಸಿದರು. ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ದಿವಾಕರ್, ಕೋಟ ಠಾಣಾಧಿಕಾರಿ ರಾಘವೇಂದ್ರ, ಕ್ರೈಂ ವಿಭಾಗದ ಸುಧಾ ಪ್ರಭು ಇದ್ದರು.