Advertisement

Jagjit Singh Dallewal: ರೈತ ನಾಯಕನನ್ನು ಆಸ್ಪತ್ರೆಗೆ ದಾಖಲಿಸಲು ಡಿ.31ರ ಗಡುವು

11:15 PM Dec 28, 2024 | Team Udayavani |

ನವದೆಹಲಿ: ಎಂಎಸ್‌ಪಿಗೆ ಕಾನೂನು ಖಾತ್ರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದೊಂದು ತಿಂಗಳಿಂದ ಉಪವಾಸ ಕುಳಿತಿರುವ ರೈತ ಮುಖಂಡ ಜಗಜಿತ್‌ ಸಿಂಗ್‌ ದಲ್ಲೇವಾಲ್‌ರನ್ನು ಆಸ್ಪತ್ರೆಗೆ ದಾಖಲಾಗುವಂತೆ ಮನವೊಲಿಸಲು ಪಂಜಾಬ್‌ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಡಿ.31ರ ಗಡುವು ನೀಡಿದೆ.

Advertisement

ಪ್ರಕರಣದ ವಿಚಾರಣೆಗಾಗಿ ಶನಿವಾರ ವಿಶೇಷ ಕಲಾಪ ನಡೆಸಿದ ರಜಾ ಕಾಲದ ವಿಶೇಷ ನ್ಯಾಯಪೀಠ, ದಲ್ಲೇವಾಲ್‌ರನ್ನು ಆಸ್ಪತ್ರೆಗೆ ದಾಖಲಿಸಿ ಎಂದು ಈ ಹಿಂದೆ ನೀಡಲಾಗಿದ್ದ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಸರ್ಕಾರವು ಅಸಹಾಯಕತೆ ತೋಡಿಕೊಂಡಾಗ, ಅಗತ್ಯವಿದ್ದಲ್ಲಿ ಕೇಂದ್ರ ಸರ್ಕಾರದ ನೆರವು ಪಡೆಯಿರಿ ಎಂದೂ ನ್ಯಾಯಪೀಠ ನಿರ್ದೇಶಿಸಿತು.

Advertisement

Udayavani is now on Telegram. Click here to join our channel and stay updated with the latest news.

Next