Advertisement

ಸೇವಾ ಭಾರತಿ ಕಾರ್ಯ ಮಾದರಿ: ಗುರುಪಾದ ಶ್ರೀ

04:52 PM Dec 04, 2021 | Team Udayavani |

ಶಹಾಪುರ: ಪ್ರತಿಯೊಬ್ಬರು ತಮ್ಮ ವೃತ್ತಿ ಜೀವನದ ಜೊತೆಗೆ ಸುತ್ತಲಿನವರ ಸಮಸ್ಯೆಗಳಿಗೆ ಸ್ಪಂದಿಸುವ ಕೈಲಾದ ಸಹಾಯ, ಸಹಕಾರ ನೀಡುವ ಗುಣ ಸ್ಫೂರ್ತಿದಾಯಕವಾದದು. ಅಂತಹ ಗುಣ ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಇಲ್ಲಿ ಸೇವಾ ಭಾರತಿ ಆಶ್ರಯದಲ್ಲಿ ಯುವಶಕ್ತಿ ಬೆಂಕಿಗಾಹುತಿಯಾದ ಮನೆಯೊಂದರ ಕುಟುಂಬಸ್ಥರಿಗೆ ನೂತನ ಮನೆ ನಿರ್ಮಿಸಿ ಕೊಡುವ ಮೂಲಕ ಮಾದರಿಯಾಗಿದ್ದಾರೆ ಎಂದು ಫಕೀರೇಶ್ವರ ಮಠದ ಗುರುಪಾದ ಸ್ವಾಮೀಜಿ ತಿಳಿಸಿದರು.

Advertisement

ಇಲ್ಲಿನ ಗಂಗಾನಗರದ ಹಳಪೇಟೆಯಲ್ಲಿ ಬಡ ಕುಟುಂಬವೊಂದಕ್ಕೆ ಸಮಾಜದ ಸರ್ವರ ಸಹಕಾರದೊಂದಿಗೆ ಸೇವಾ ಭಾರತಿ ಆಶ್ರಯದಲ್ಲಿ ನಿರ್ಮಿಸಿದ ನೂತನ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕವಿತಾ ಸೋಮನಾಥ ಮತ್ತು ಅವರ ಚಿಕ್ಕಮಕ್ಕಳು ವಾಸಿಸುವ ಮನೆ ಕಳೆದ ಏಪ್ರಿಲ್‌ ತಿಂಗಳಲ್ಲಿ ಆಕಸ್ಮಿಕ ಬೆಂಕಿಗೆ ಆಹುತಿಯಾಗಿತ್ತು. ಇದನ್ನು ಕಂಡ ಸೇವಾ ಭಾರತಿ ಯುವಕರ ತಂಡ ತಕ್ಷಣ ಸ್ಪಂದಿಸಿ ಸಮಾಜಮುಖೀಯಾಗಿ ಸರ್ವರ ಸಹಕಾರದೊಂದಿಗೆ ಮನೆ ನಿರ್ಮಿಸಿ ಕೊಟ್ಟಿದ್ದು ಪ್ರೇರಣೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡ ಸು ಧೀರ ಚಿಂಚೋಳಿ, ಸೇವಾ ಭಾರತಿಯ ಪ್ರಮುಖ ವೀರೇಶ ಉಳ್ಳಿ, ಅನಿಲ್‌ ಗುಡಗುಂಟಿ, ಅರವಿಂದ ಉಪ್ಪಿನ್‌, ಅಬ್ದುಲ್‌ ಹಾದಿಮನಿ, ಮರೆಪ್ಪ ದೊಡ್ಡಮನಿ, ಅನಿಲ್‌ ಬಿರೆದಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next