ಮಂಡ್ಯ: ಜೀವನದಲ್ಲಿ ಪ್ರತಿಯೊಬ್ಬರಿಗೂ ಸ್ವಂತ ಮನೆ ಅದರಲ್ಲೂ ಪರಿಸರ ಸ್ನೇಹಿ ಮನೆ ನಿರ್ಮಿಸಬೇಕು ಎಂಬ ಕನಸಿರುತ್ತೆ. ಅದಕ್ಕೆ ಮಾದರಿಯಾಗಿ ಸಕ್ಕರೆ ನಾಡಿನ ಅಕ್ಷರ ಜಾತ್ರೆಯಲ್ಲೊಂದು ವಿನೂತನ ಮಾದರಿ ಮನೆ ನಿರ್ಮಿಸಲಾಗಿದೆ. ಅದು ಅಂತಿಥ ಮನೆಯಲ್ಲ ರೈತ ಸ್ನೇಹಿಯಾಗಿರೋ “ತೊಟ್ಟಿ” ಮನೆ . ಮನೆಯ ಮಧ್ಯ ಭಾಗದ ಸುತ್ತಲು ಆಕಾಶ , ಮಳೆ ನೀರು ಬೀಳಲು ಜಾಗವಿದೆ. ಅಂಗಳದ ಸುತ್ತಲೂ ಕೋಣೆಗಳು ನೈಸರ್ಗಿಕ, ಗಾಳಿ, ಬೆಳಕು, ಮನೆಯ ಹಿತ್ತಲಿನಲ್ಲೇ ದಿನಪಯೋಗಿ ಸೊಪ್ಪಿನ ಗಿಡಗಳು, ಮತ್ತು ನೀರು ಸೇದುವ ಬಾವಿ ಇರುವಂತಹ ಇದು ಈ ಬಾರಿಯ ಮಂಡ್ಯ ಸಾಹಿತ್ಯ ಸಮ್ಮೇಳನದ ವಿಶೇಷವಾಗಿ ನೋಡುಗರ ಗಮನ ಸೆಳೆಯುತ್ತಿದೆ.
Advertisement
ಪುರಾತನ ಕಾಲದಲ್ಲಿ ಮನೆಗೆ ಮುಕ್ತವಾಗಿ ಹೆಚ್ಚು ಗಾಳಿ ಬೆಳಕು ಸಾರಾಗವಾಗಿ ಬರಲಿ ಎಂಬ ಉದ್ದೇಶದಿಂದ ವೈಜ್ಞಾನಿಕವಾಗಿ ನಿರ್ಮಿಸುತ್ತಿದ್ದ ತೊಟ್ಟಿ ಮನೆಗಳು ಈಗ ನರನ್ನುಆಕರ್ಷಿಸುವಂತೆ ಮಾಡಿದ್ದು ಆಧುನಿಕ ಶೈಲಿಯ ಮನೆಗಳನ್ನೇ ಬದಲಿಸಿ ಹಳೇ ಶೈಲಿಗೆ ಮರುಕಳಿಸುವಂತೆ ಮಾಡುತ್ತಿದೆ. ಇನ್ನು ಸಾಹಿತ್ಯ ಸಮ್ಮೇಳನದ ಅಂಗವಾಗಿ ನಿರ್ಮಿಸಿರುವ ಈ ತೊಟ್ಟಿ ಮನೆ ರೈತ ಸ್ನೇಹಿಯಾಗಿ ಹಲವು ವಿಶೇಷತೆಗಳನ್ನು ಹೊಂದಿದೆ.
Related Articles
Advertisement
ಮನೆಯ ಮುಂಭಾಗದಲ್ಲಿ ಮತ್ತು ಒಳಾಂಗಣದಲ್ಲಿ ಒಕ್ಕಣೆ ಮಾಡಲು ಹಿಂಗಾರು ಮತ್ತು ಮುಂಗಾರಿಗೆ ಬಿತ್ತನೆ ಬೀಜಗಳಾದ ರಾಗಿ, ಭತ್ತ, ಅವರೆ, ಸೋರೆಕಾಯಿ, ಮೊದಲಾದ ಧಾನ್ಯಗಳನ್ನು ಪ್ರದರ್ಶಿಸಿದರು. ತೊಟ್ಟಿ ಮನೆ ಮುಂಭಾಗದಲ್ಲಿ ಲಕ್ಷಾಂತರ ರೂ. ಬೆಲೆಬಾಳುವ ಹಳ್ಳಿಕಾರ್ತಳಿಯ ಜೋಡೆತ್ತುಗಳನ್ನು ಕಟ್ಟಿ ರಾಜ್ಯದಲ್ಲಿ ಮುಂಚೂಣಿಯಲ್ಲಿರುವ ರಾಸುಗಳ ಬಗ್ಗೆಪರಿಚಯಿಸಿದರು, ಗ್ರಾಮೀಣ ಪ್ರದೇಶದ ರೈತರಿಗೆ ಸಾಹಿತ್ಯಾ ಸದಭಿರುಚಿಯ ಜೊತೆಗೆ ಕೃಷಿ ಮತ್ತು ಗ್ರಾಮಾಂತರ ಜೀವನದ ಬಗ್ಗೆ ಸಮ್ಮೇಳನದಲ್ಲಿ ತೊಟ್ಟಿ ಮನೆ ಮೂಲಕ ಗಮನ ಸೆಳೆಯಲಾಯಿತು.
●ಮಹಾದೇವಸ್ವಾಮಿ, ಮಂಡ್ಯ ■ ರಘು ಕೆ.ಜಿ.