Advertisement

ಪ್ರತ್ಯೇಕತವಾದಿ ನಾಯಕ ಯಾಸಿನ್ ಜಮ್ಮು ಜೈಲಿಗೆ ಶಿಫ್ಟ್

08:43 AM Mar 07, 2019 | Karthik A |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ (ಜೆ.ಕೆ.ಎಲ್.ಎಫ್.) ಮುಖ್ಯಸ್ಥ ಯಾಸಿನ್ ಮಲಿಕ್ ಅವರನ್ನು ಸಾರ್ವಜನಿಕ ರಕ್ಷಣಾ ಕಾಯ್ದೆಯಡಿಯಲ್ಲಿ (PSA) ಬಂಧಿಸಲಾಗಿದೆ. ಯಾಸಿನ್ ಅವರನ್ನು ಜಮ್ಮುವಿನಲ್ಲಿರುವ ಕೋಟ್ ಬಲ್ವಾಲ ಸೆರೆಮನೆಯಲ್ಲಿರಿಸಲಾಗಿದೆ. ಕಾಶ್ಮೀರ ಪ್ರತ್ಯೇಕಾದಿ ನಾಯಕರಲ್ಲಿ ಪ್ರಮುಖರಾಗಿರುವ ಯಾಸಿನ್ ಅವರನ್ನು ಫೆಬ್ರವರಿ 22ರಂದು ಬಂಧಿಸಲಾಗಿತ್ತು ಮತ್ತು ಅವರನ್ನು ಶ್ರೀನಗರದಲ್ಲಿರುವ ಕೋಥಿಯಾಬಾಗ್ ಪೊಲೀಸ್ ಠಾಣೆಯಲ್ಲಿರಿಸಲಾಗಿತ್ತು.

Advertisement

1990ರಲ್ಲಿ ಶ್ರೀನಗರದಲ್ಲಿ ಭಾರತೀಯ ವಾಯುಪಡೆಯ ನಾಲ್ವರು ನಿಶ್ಯಸ್ತ್ರಧಾರಿ ಅಧಿಕಾರಿಗಳನ್ನು ಕೊಂದ ಪ್ರಕರಣ ಹಾಗೂ ಮುಫ್ತಿ ಮುಹಮ್ಮದ್ ಸಯೀದ್ ಅವರ ಮಗಳು ರುಬಿಯಾ ಸಯೀದ್ ಅವರನ್ನು ಅಪಹಣಕ್ಕೆ ಸಂಬಂಧಿಸಿದಂತೆ ಯಾಸಿನ್ ಮಲಿಕ್ ವಿರುದ್ಧ 30 ವರ್ಷಗಳ ಹಿಂದೆ ದಾಖಲಾಗಿದ್ದ ಪ್ರಕರಣವೊಂದನ್ನು ಮರು ತನಿಖೆಗೆ ಒಳಪಡಿಸಲು ಅನುಮತಿ ನೀಡುವಂತೆ ಸಿ.ಬಿ.ಐ. ಜಮ್ಮು ಮತ್ತು ಕಾಶ್ಮೀರ ಉಚ್ಛನ್ಯಾಯಾಲಯದಲ್ಲಿ ವರ್ಗಾವಣೆ ಅರ್ಜಿಯೊಂದನ್ನು ಸಲ್ಲಿಸಿದ್ದರು. ಸಿ.ಬಿ.ಐ. ಸಲ್ಲಿಸಿದ್ದ ಈ ಅರ್ಜಿಗೆ ಪ್ರತಿಕ್ರಿಯಿಸುವಂತೆ ಉಚ್ಛನ್ಯಾಯಾಲಯದ ಮುಖ್ಯನ್ಯಾಯಮೂರ್ತಿ ಗೀತಾ ಮಿತ್ತಲ್ ಅವರು ಯಾಸಿನ್ ಅವರಿಗೆ ಸೂಚಿಸಿದ್ದರು.

ಸಾರ್ವಜನಿಕ ರಕ್ಷಣಾ ಕಾಯ್ದೆಯಡಿಯಲ್ಲಿ ಯಾವುದೇ ನ್ಯಾಯಾಂಗ ಹಸ್ತಕ್ಷೇಪರಹಿತವಾಗಿ ಎರಡು ವರ್ಷಗಳವರೆಗೆ ಬಂಧನದಲ್ಲಿಡಬಹುದಾಗಿರುತ್ತದೆ. ಜಮ್ಮು ಮತ್ತು ಕಾಶ್ಮೀರದ ಪ್ರಜೆಗಳಿಗೆ ವಿಶೇಷ ಹಕ್ಕುಗಳು ಮತ್ತು ಸವಲತ್ತುಗಳನ್ನು ಒದಗಿಸುವ ಆರ್ಟಿಕಲ್ 35ಎ ರದ್ಧತಿಗೆ ಸಂಬಂಧಿಸಿದ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಪ್ರಾರಂಭವಾಗಲಿರುವ ಹಿನ್ನಲೆಯಲ್ಲಿ ಫೆಬ್ರವರಿ 22ರಂದು ಯಾಸಿನ್ ಮಲಿಕ್ ಸಹಿತ 150 ಪ್ರತ್ಯೇಕತಾವಾದಿ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next