Advertisement

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

01:01 AM Nov 22, 2024 | Team Udayavani |

ಹೊಸದಿಲ್ಲಿ: ಅಪಹರಣ ಮತ್ತು ಕೊಲೆ ಕೇಸಿಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕತಾ ವಾದಿ ನಾಯಕ ಯಾಸಿನ್‌ ಮಲಿಕ್‌ ವಿಚಾರಣೆಗೆ ತಿಹಾರ್‌ ಜೈಲಿನಲ್ಲಿ ಪ್ರತ್ಯೇಕ ಕೋರ್ಟ್‌ ರೂಂ ಸ್ಥಾಪಿಸಬಹುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ, ಭದ್ರತೆಯ ಕಾರಣಕ್ಕೆ ಮಲಿಕ್‌ನನ್ನು ಜಮ್ಮು ಕೋರ್ಟ್‌ಗೆ ಹಾಜರುಪಡಿಸಲು ಸಾಧ್ಯವಿಲ್ಲ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಸುಪ್ರೀಂಗೆ ತಿಳಿಸಿದರು. ನಮ್ಮ ದೇಶದಲ್ಲಿ ಉಗ್ರ ಅಜ್ಮಲ್‌ ಕಸಬ್‌ಗೂ ನ್ಯಾಯಸಮ್ಮತ ವಿಚಾರಣೆಗೆ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ, ಮಲಿಕ್‌ ಭೌತಿಕ ಹಾಜರು ಇಲ್ಲದೇ ಪಾಟಿ ಸವಾಲಿಗೆ ಒಳಪಡಿಸುವುದು ಹೇಗೆ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್‌, ತಿಹಾರ್‌ ಜೈಲಿನಲ್ಲಿ ಪ್ರತ್ಯೇಕ ಕೋರ್ಟ್‌ ರೂಂ ಸ್ಥಾಪಿಸಬಹುದು ಎಂದು ಹೇಳಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next