Advertisement

Kundapura: “ಅವರು ಪ್ರತೀ ದಿನ ಫೋನ್‌ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’

01:58 AM Dec 27, 2024 | Team Udayavani |

ಕುಂದಾಪುರ: ನಿತ್ಯವೂ ಫೋನ್‌ ಮಾಡುತ್ತಿದ್ದವರು, ಇನ್ನೆಲ್ಲಿ ಫೋನ್‌ ಮಾಡಿಯಾರು? ಇಂಥದೊಂದು ಪ್ರಶ್ನೆಯೊಂದಿಗೆ ಯೋಧ ಅನೂಪ್‌ ಅವರ ಪತ್ನಿ ತಮ್ಮ ಆತಂಕವನ್ನು ನೆನಪಿಸಿಕೊಂಡರು.

Advertisement

“ಮೊನ್ನೆ ಅವರ ಕರೆ ಬಂದಿರಲಿಲ್ಲ. ಕೆಲಸದ ಬ್ಯುಸಿ, ಬರಲಿಲ್ಲ ಎಂದು ಕಾಯುತ್ತಿದ್ದೆ. ಅಷ್ಟು ಕಾದರೂ ಫೋನ್‌ ಬಾರದಿದ್ದಾಗ ಆತಂಕ ಆರಂಭವಾ ಯಿತು. ಅಷ್ಟರಲ್ಲಿ ಕಾಶ್ಮೀರದ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗ ತೊಡಗಿತ್ತು. ನಾನು ಫೋನ್‌ ಮಾಡು ವಾಗ ರಿಂಗ್‌ ಆಯಿತು, ಕೆಲ ಕ್ಷಣಗಳ ಬಳಿಕ ಇವರ ಫೋನ್‌ ಸ್ವಿಚ್‌ ಆಫ್‌ ಆಯಿತು. ಮಿಲಿಟರಿ ವಾಹನ ಬಿದ್ದಿ ರುವ ಮಾಹಿತಿಯೂ ತಿಳಿಯಿತು. ದಿನ ಪೂರ್ತಿ ಆತಂಕದಲ್ಲೇ ಕಳೆದೆ. ಆಮೇಲೆ ಬೆಳಗ್ಗೆ ಮಾಹಿತಿ ಸಿಕ್ಕಿತು’ ಎನ್ನುತ್ತಾ ಕಣ್ಣೀರಾದರು ಪತ್ನಿ ಮಂಜುಶ್ರೀ.

ಜಮ್ಮು ಕಾಶ್ಮೀರದಲ್ಲಿ ಎರಡು ವರ್ಷ ಸೇವೆ ಮಾಡಿದ್ದರು. ಪೂಂಛ… ದಾಳಿ ಅನಂತರ ಅಲ್ಲಿಗೆ ನೇಮಕವಾಗಿದ್ದರು. ಅಲ್ಲಿಯೂ ಒಂದೂವರೆ ವರ್ಷ ಸೇವೆ ಮಾಡಿದ್ದರು. ಇನ್ನು ಆರು ತಿಂಗಳಲ್ಲಿ ಗುಜರಾತ್‌ಗೆ ಹೋಗಬೇಕಾಗಿತ್ತು. ಅಲ್ಲಿಗೆ ಹೋದ ಅನಂತರ ನನ್ನನ್ನು ಕರೆಸಿ ಕೊಳ್ಳುವೆ ಎಂದಿದ್ದರು. ಅಷ್ಟರಲ್ಲಿ ಹೀಗಾಗಿದೆ. ಸೇನೆಗೆ ಸೇರಿ 13 ವರ್ಷ ಆಗಿದೆ. ಇನ್ನು 4 ವರ್ಷ ಸೇವೆ ಮಾಡುವುದಾಗಿ ಹೇಳುತ್ತಿದ್ದವರು ಈಗ ಇಲ್ಲ ಎಂದು ರೋದಿಸಿದರು ಮಂಜುಶ್ರೀ.

ಪ್ರೇಮ ವಿವಾಹ
ಅನೂಪ್‌ ಹಾಗೂ ಮಂಜುಶ್ರೀ ಅವರದು ಪ್ರೇಮ ವಿವಾಹ. ಅಕ್ಕಂದಿರಿಗೆ ಮದುವೆ ಮಾಡಿಸಿದ ಬಳಿಕ ಅನೂಪ್‌ ಮನೆಯವರನ್ನು ಒಪ್ಪಿಸಿ ಪೆರ್ಡೂರಿನ ಮಂಜುಶ್ರೀ ಅವರನ್ನು 3 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಒಂದೂವರೆ ವರ್ಷದ ಇಶಾನಿ ಎಂಬ ಪುತ್ರಿಯಿದ್ದಾಳೆ.

ಸರಕಾರಿ ಕೆಲಸ ಕೊಡಿಸಿ
ತಮ್ಮನನ್ನು ಕಳೆದುಕೊಂಡ ನಮ್ಮ ಕುಟುಂಬ ಅನಾಥವಾಗಿದೆ. ತಮ್ಮನ ಪತ್ನಿ ಮಂಜುಶ್ರೀಗೆ ಸರಕಾರಿ ಕೆಲಸ ಕೊಡಬೇಕು. ಆಕೆಗೆ ಚಿಕ್ಕ ಮಗುವಿದೆ ಎನ್ನುವುದಾಗಿ ಅಳಲು ತೋಡಿಕೊಂಡ ವರು ಅನೂಪ್‌ ಸಹೋದರಿ ಶಾರದಾ. ನಮಗೆ ಸ್ವಂತ ಮನೆಯೂ ಇರಲಿಲ್ಲ. ದೊಡ್ಡಮ್ಮನ ಮನೆಯಲ್ಲಿ ಬೆಳೆದವರು ನಾವು. ಕಷ್ಟದಲ್ಲಿ ಬೆಳೆದ ತಮ್ಮ, ಅಕ್ಕಂದಿ ರಿಬ್ಬರ ಮದುವೆ ಮಾಡಲು ಸೇನೆ ಸೇರಿದ. ಜೀವನದಲ್ಲಿ ಸುಖವನ್ನೇ ನೋಡಿಲ್ಲ. ನನ್ನ ಅಮ್ಮನಿಗೆ ಒಬ್ಬನೇ ಮಗ. ದಯವಿಟ್ಟು ನಾದಿನಿಗೆ ಕೆಲಸ ಕೊಡಿಸಿ ಎಂದು ಮನವಿ ಮಾಡಿದ್ದಾರೆ.

Advertisement

ಅನೂಪ್‌ ಸ್ಮಾರಕ
ಬೀಜಾಡಿಯ ಕಡಲ ತಡಿಯಲ್ಲಿ ಮಣ್ಣಾದ ವೀರ ಯೋಧ ಅನೂಪ್‌ ಅವರ ಸ್ಮಾರಕವನ್ನು ನಿರ್ಮಿಸುವ ತೀರ್ಮಾನವನ್ನು ಈಗಾಗಲೇ ಕೈಗೊಳ್ಳ ಲಾಗಿದೆ. ನಮ್ಮ ಕುಂದಾಪುರ ಭಾಗದಿಂದ ಹೆಚ್ಚೆಚ್ಚು ಯುವಕರು ಸೇನೆಗೆ ಸೇರಬೇಕು ಅನ್ನುವ ಅಭಿಲಾಷೆಯನ್ನು ಇತ್ತೀಚೆಗಿನ ಕಾರ್ಯಕ್ರಮವೊಂದರಲ್ಲಿ ಅನೂಪ್‌ ವ್ಯಕ್ತಪಡಿಸಿದ್ದರು. ಅವರ ಕೊನೆಯ ಆಸೆಯೆಂದೇ ಭಾವಿಸಿ, ಸೇನಾ ತರಬೇತಿ, ಶಿಬಿರಗಳನ್ನು ಅವರ ಹೆಸರಲ್ಲಿ ಆರಂಭಿಸುವುದಾಗಿ ಹೇಳಿದ ವರು ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ.

Advertisement

Udayavani is now on Telegram. Click here to join our channel and stay updated with the latest news.

Next