Advertisement

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

12:39 AM Dec 24, 2024 | Team Udayavani |

ಶ್ರೀನಗರ: ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗೆ ಆಯ್ಕೆಯಾಗಿರುವ ನೂತನ ಶಾಸಕರಿಗೆ ಇನ್ನೂ ಮೊದಲ ವೇತನವೇ ಲಭ್ಯವಾಗಿಲ್ಲ. ಈಗಾಗಲೇ ಇಲ್ಲಿ ಚುನಾವಣೆ ನಡೆದು 2 ತಿಂಗಳಿಗಿಂತಲೂ ಹೆಚ್ಚು ಸಮಯವಾಗಿದೆ.

Advertisement

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದಾದ ಬಳಿಕವೂ ಆಡಳಿತಾತ್ಮಕ ಕೆಲಸಗಳು ಸಂಪೂರ್ಣವಾಗಿಲ್ಲದ ಕಾರಣ, ವೇತನ ನೀಡಿಕೆ ಸಮಸ್ಯೆ ಪರಿಹಾರ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಸ್ಪೀಕರ್‌ ಅಬ್ದುಲ್‌ ರಹೀಮ್‌ ರಾಥರ್‌ ಗಮನ ಸೆಳೆದಿದ್ದು, ಇಷ್ಟು ದಿನವಾದರೂ ಶಾಸಕರಿಗೆ ಏಕೆ ವೇತನ ನೀಡಲಾಗಿಲ್ಲ. ಸಮಸ್ಯೆಯೇನು ಎಂಬುದರ ವಿವರ ಕೊಡಿ ಎಂದು ಸರಕಾರಕ್ಕೆ ಪತ್ರ ಬರೆದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next