Advertisement
ನಮ್ಮಲ್ಲಿ ಎಷ್ಟೋ ಮಂದಿ ಶುಷ್ಕ ಬದುಕನ್ನು ಬದುಕುತ್ತಾರೆ. ಜೀವನದ ಬಗ್ಗೆ ಆನಂದವೇ ಇರುವುದಿಲ್ಲ. ಜೀವನದ ಬಗ್ಗೆ ಉತ್ಸಾಹವೇ ಇರುವುದಿಲ್ಲ. ಒಂದಿನಿತು ನಂಬಿಕೆ ಇಲ್ಲದಂತೆ ಬದುಕುತ್ತಾರೆ. ಅದು ಆತ್ಮ ಗೌರವವಿಲ್ಲದಿರುವುದನ್ನು ಸೂಚಿಸುತ್ತದೆ.
Related Articles
Advertisement
ನಿಮ್ಮ ಸಮಸ್ಯೆಗಳನ್ನು ಬೇರೆಯವರ ಸಹಾಯವಿಲ್ಲದೆ ಪರಿಷ್ಕರಿಸಿಕೊಳ್ಳುವುದು ಉತ್ತಮ. ಹಾಗಂತ ಬೇರೆಯವರ ಸಹಾಯ ಪಡೆಯುವುದರಲ್ಲಿ ತಪ್ಪಿದೆ ಅಂತರ್ಥವಲ್ಲ. ನನ್ನಿಂದ ಸಾಧ್ಯವಿಲ್ಲ ಎನ್ನುವ ನಿಮ್ಮ ಭಾವನೆ ನಿಮ್ಮನ್ನು ಮತ್ತಷ್ಟು ಕುಗ್ಗಿಸುತ್ತದೆ. ಹಾಗಾಗಿ ನಿಮ್ಮ ಸಮಸ್ಯೆಗಳನ್ನು ಆದಷ್ಟು ನೀವಾಗಿಯೇ ಬಗೆಹರಿಸಿಕೊಳ್ಳಲು ಪ್ರಯತ್ನಿಸಿರಿ. ಅದು ನಿಮ್ಮನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ.
ನೀವು ಯಾರಿಗೂ ಕಡಿಮೆ ಇಲ್ಲ ಎನ್ನುವ ಧೋರಣೆ ನಿಮ್ಮಲ್ಲಿರಲಿ. ಆದರೇ ಅತಿಯಾದ ಆತ್ಮ ವಿಶ್ವಾಸ ಬೇಡ. ವಿಶ್ವಾಸ ಮತ್ತು ಧೈರ್ಯ ನಿಮ್ಮನ್ನು ಮುನ್ನಡೆಸುತ್ತದೆ.
ಓದಿ : ಗ್ರಾಹಕರೇ ಗಮನಿಸಿ: Bank ಕೆಲಸ ಇಂದೇ(ಮಾ.12) ಮುಗಿಸಿ;ವಾರಾಂತ್ಯಕ್ಕೆ ಹಣ ತೆಗೆದಿಟ್ಟುಕೊಳ್ಳಿ!
ಆಗಾಗ ನಿಮ್ಮಲ್ಲಿ ಧನಾತ್ಮಕ ಹಾಗೂ ಋಣಾತ್ಮಕ ಭಾವನೆ ಒಳ್ಳೆಯದು. ಅದು ನಿಮ್ಮ ಬಗ್ಗೆ ತಿಳಿಸಿಕೊಡುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
ಎಲ್ಲರೂ ಸಮ್ಮತಿಸುವಂತೆ ಬದುಕುವುದು ಕಷ್ಟ ಸಾಧ್ಯ, ಆದರೂ ಸಾಧ್ಯವಾದಷ್ಟು ಎಲ್ಲರೂ ಒಪ್ಪಿಕೊಳ್ಳುವ ಹಾಗೆ ಬದುಕುವುದನ್ನು ರೂಢಿಸಿಕೊಳ್ಳಿ. ಇನ್ನೊಬ್ಬರು ನಿಮ್ಮ ಮೇಲೆ ಇಡುವ ವಿಶ್ವಾಸ, ಪ್ರೀತಿ ಅಥವಾ ಸಣ್ಣದೊಂದು ಒಳ್ಳೆಯ ಭಾವನೆ ನಿಮಗೆ ಏನೋ ವಿಶೇಷವಾಗಿರುವುದರಿಂದ ನಿಮ್ಮ ಆತ್ಮ ಗೌರವ ಹೆಚ್ಚಾಗುವುದಕ್ಕೆ ಕಾರಣವಾಗಬಹುದು.
ನಮ್ಮ ಬದುಕನ್ನು ನಿರ್ಧರಿಸುವು ನಾವೇ ಹೊರತು ಮೂರನೇ ವ್ಯಕ್ತಿ ಅಲ್ಲ. ನಮ್ಮ ಬದುಕು ಹೀಗಿರಬೇಕು ಅಂದುಕೊಳ್ಳುವವರು ನಾವಾದ ಮೇಲೆ ನಮ್ಮ ಬದುಕು ನಾವಂದುಕೊಂಡ ಹಾಗೆ ಇರಬೇಕು. ಪದೆ ಪದೆ ನಮ್ಮನ್ನು ಋಣಾತ್ಮಕವಾಗಿ ವಿಮರ್ಶಿಸಿಕೊಳ್ಳುವುದರಿಂದ ನಮ್ಮ ಏಳ್ಗೆಗೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ನಮ್ಮನ್ನು ನಾವು ಪರಿಶೀಲಿಸಿಕೊಳ್ಳುವುದೆಂದರೇ, ಆತ್ಮ ವಿಶ್ವಾಸವನ್ನು ಸಾಯಿಸಿಕೊಳ್ಳುವುದಲ್ಲ. ಹೈಪರ್ ಸೆನ್ಸಿಟಿವ್ ಆಗಿ ಆಲೋಚಿಸುವುದರಿಂದ ನಾವು ಏನೂ ಇಲ್ಲದ ಶೂನ್ಯವಾಗಿ ಬಿಡುತ್ತೇವೆ. ಹಾಗಾಗಿ ನಮ್ಮ ಚಿತ್ತ ಎಂದಿಗೂ ಒಳ್ಳೆಯದ ಬಗ್ಗೆಯೇ ಚಿಂತಿಸುತ್ತರಬೇಕು.
ನ್ಯೂರೋಟಿಕ್ ಸೈನ್ಸ್ ಆಫ್ ಗಿಲ್ಟ್, ಅಂದರೆ ಏನೋ ದೊಡ್ಡ ತಪ್ಪು ಮಾಡಿದ್ದೇವೆ ಎಂದು ಭಾವಿಸುವುದು ನಮ್ಮನ್ನು ಸಂಪೂರ್ಣವಾಗಿ ಖಿನ್ನತೆಗೆ ಒಳಗಾಗಿಸುತ್ತದೆ ಎನ್ನುವುದರಲ್ಲಿ ಅನುಮಾನ ಬೇಕಾಗಿಲ್ಲ. ಹಾಗಾಗಿ ಅಪರಾಧ ಭಾವನೆ ಬರುವ ಕ್ಷಣಗಳಿಗೆ ಹಿತವಲ್ಲ. ತಪ್ಪು ಈ ಭೂಮಿಯಲ್ಲಿ ಮನುಷ್ಯನಾಗಿ ಹುಟ್ಟಿದವರೆಲ್ಲರೂ ಮಾಡಿರುತ್ತಾರೆ. ತಿದ್ದಿ ನಡೆಯುವವ ಗೆಲ್ಲುತ್ತಾನೆ. ಆ ಅನವಶ್ಯಕ ಮತ್ತೆ ಮತ್ತೆ ನೆನಪಿಸಿಕೊಳ್ಳುವುದರಿಂದ ನಮ್ಮ ಬದುಕು ಭಾರ ಅನ್ನಿಸುತ್ತದೆ. ಹಾಗಾಗಿ ಬದುಕು ಭಾರ ಅನ್ನಿಸುವ ಹಾಗೆ ಮಾಡಿಕೊಳ್ಳಬೇಡಿ. ಕೊರಗು ಇರುವುದು ಸಹಜ, ಕೊರಗಷ್ಟೇ ನಮ್ಮಬದುಕಲ್ಲ. ಅದರಾಚೆಗೂ ಒಂದು ಬದುಕಿದೆ. ಧನಾತ್ಮಕ ಚಿಂತನೆಗಳು ಸದಾ ನಿಮ್ಮಲ್ಲಿರಲಿ.
ಎಲ್ಲವನ್ನೂ ಅದುಮಿಟ್ಟುಕೊಳ್ಳುವುದು ಮೆಚ್ಯುರಿಟಿ ಅಲ್ಲ. ನಮ್ಮ ಪೂರ್ಣ ಬದುಕು ಅದಕ್ಕೆ ಮೀಸಲಿಡಬಾರದು ಎನ್ನವುದನ್ನು ನೆನಪಿನಲ್ಲಿಡಿ.
–ಶ್ರೀರಾಜ್ ವಕ್ವಾಡಿ
ಓದಿ : ಬ್ರಿಟನ್ ನ ಮಹಿಳೆಯರು ವ್ಯವಸ್ಥೆಯ ಮೇಲೆಯೇ ನಂಬಿಕೆ ಕಳೆದುಕೊಂಡಿರುವುದ್ಯಾಕೆ..?