Advertisement

ನುಡಿ ನಮನ: ಸಾಮಾಜಿಕ ಚಿಂತಕ, ಎಲ್ಲರ ಮನಗೆದ್ದ ಶ್ರೇಷ್ಠ ಪ್ರಾಧ್ಯಾಪಕ ಪ್ರೊ.ಅಸ್ಸಾದಿ

06:32 PM Jan 04, 2025 | Team Udayavani |

ಬೆಳಗ್ಗೆ (ಜ4) ಒಂದು ನೇೂವಿನ ಸುದ್ದಿ ಕೇಳಿದೆ.ನಮ್ಮೆಲ್ಲರ ಆತ್ಮೀಯ ಸ್ನೇಹಿತ ಶ್ರೇಷ್ಠ ಪ್ರಾಧ್ಯಾಪಕ ರಾಜಕೀಯ ಶಾಸ್ತ್ರದಲ್ಲಿ ಪರಿಣಿತ ಚಿಂತಕ ಮಾತ್ರವಲ್ಲ ಪ್ರಸ್ತುತ ರಾಜಕೀಯ ಆಗು ಹೇೂಗುಗಳ ವಿಶ್ಲೇಷಕರಾಗಿ ವಿಶೇಷವಾಗಿ ನಾಡಿನಲ್ಲಿ ಗುರುತಿಸಿ ಕೊಂಡ ಪ್ರೊ. ಮುಜಾಫರ್ ಅಸ್ಸಾದಿ(63) ಇನ್ನಿಲ್ಲ ಎನ್ನುವ ಸುದ್ದಿ.

Advertisement

ನನಗೂ ನಮ್ಮ ಅಸ್ಸಾದಿಗೂ ಸುಮಾರು 40 ವರ್ಷಗಳ ಹಿಂದಿನ ಸ್ನೇಹ ಸಂಬಂಧ.ನಾನು ಮಂಗಳೂರು ವಿ.ವಿ.ಯಲ್ಲಿ ರಾಜ್ಯ ಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಮಾಡುವ ಸಂದರ್ಭದಲ್ಲಿ ಅಸ್ಸಾದಿಯವರು ನಮ್ಮ ಜೂನಿಯರ್ ವಿದ್ಯಾರ್ಥಿಯಾಗಿ ಇದೇ ವಿಭಾಗಕ್ಕೆ ಸೇರಿಕೊಂಡವರು.ಅತ್ಯಂತ ಮುಗ್ಧ ಮೆಲು ಧ್ವನಿಯಲ್ಲಿ ಕರೆದು ಆತ್ಮೀಯವಾಗಿ ಮಾತನಾಡಿಸುವ ಸಹಪಾಠಿಯಾಗಿದ್ದ ಅಸ್ಸಾದಿ.ಇದೇ ರಾಜ್ಯ ಶಾಸ್ತ್ರದಲ್ಲಿ ಇನ್ನಷ್ಟು ವಿಶೇಷ ಅಧ್ಯಯನವನ್ನು ದೆಹಲಿ ಜೆ ಎನ್.ಯು. ನಲ್ಲಿ ಮುಂದುವರಿಸಿ ಎಂ.ಪಿಲ್.;ಪಿಎಚ್.ಡಿ.ಪದವಿ ಪಡೆದು ಮೈಸೂರು ವಿ.ವಿಯಲ್ಲಿ ಅಧ್ಯಾಪನ ವೃತ್ತಿಯನ್ನು ಸ್ವೀಕರಿಸಿದವರು.ಅನಂತರದಲ್ಲಿ ವಿವಿಧ ಹುದ್ದೆಗಳನ್ನು ಸ್ವೀಕರಿಸಿದ ಅಸ್ಸಾದಿಯವರು ಹಂಗಾಮಿ ಕುಲಪತಿಗಳಾಗಿ ಸ್ವಲ್ಪ ಕಾಲ ಸೇವೆ ಸಲ್ಲಿಸಿದರು.ತಾನುಕಲಿತ ಮಂಗಳೂರು ವಿ.ವಿ.ಯಲ್ಲಿ ಕೂಡ ಕುಲಪತಿಗಳಾಗಿ ಸೇವೆ ಸಲ್ಲಿಸ ಬೇಕೆಂಬ ಮನದಾಳದ ಆಸೆಯೊಂದಿತ್ತು.ಅದು ಈಡೇರಲಿಲ್ಲ..ಇದು ಬೇರೆ ವಿಚಾರ.ಅದೇನೆ ಆಗಲಿ ಅಸ್ಸಾದಿ ಒಬ್ಬ ಸ್ನೇಹಿತನಾಗಿ ಎಲ್ಲರ ಮನಸ್ಸು ಗೆದ್ದ ಶ್ರೇಷ್ಠ ಒಬ್ಬ ಪ್ರಾಧ್ಯಾಪಕ ಅನ್ನುವುದು ನಮಗೆ ಅಷ್ಟೇ ಮುಖ್ಯ.

ಅಸ್ಸಾದಿಯವರನ್ನು ಒಮ್ಮೆ ನಾನು ಎಂಜಿಎಂ.ಕಾಲೇಜಿಗೆ ಸ್ನೇಹಿತನಾಗಿ ಬರ ಮಾಡಿಕೊಂಡು ನಮ್ಮ ವಿದ್ಯಾರ್ಥಿಗಳಿಗೆ ಪಾಠ ಮಾಡಿಸಿದ್ದು ನೆನಪಿದೆ.ಆಗ ಆವರು ಹೇಳಿದ ಮಾತೊಂದು ಇನ್ನೂ ನನ್ನನ್ನು ನೆನಪಿಸುತ್ತದೆ .”ನನಗೆ ಎಂಜಿಎಂ.ನಲ್ಲಿ ಪದವಿಗೆ ಸೇರ ಬೇಕೆಂಬ ಆಸೆ ಇತ್ತು ..ಆದರೆ ಅಂದು ನನಗೆ ಈ ಕಾಲೇಜಿನಲ್ಲಿ ಸೀಟೇ ಕೊಡಲಿಲ್ಲ..ಮತ್ತೆ ನಾನು ಶಿವ೯ದ ಕಾಲೇಜು ಸೇರಿಕೊಂಡೆ” ಅನ್ನುವ ನೆನಪನ್ನು ವಿದ್ಯಾರ್ಥಿಗಳ ಮುಂದೆ ಹಂಚಿಕೊಂಡರು.

ಇಂತಹ ಒಬ್ಬ ಆತ್ಮೀಯ ಸ್ನೇಹಿತನನ್ನು ಇಂದು ಬೆಳಗ್ಗೆ ನಾವು ಕಳೆದುಕೊಂಡಿದ್ದೇವೆ ಅನ್ನುವ ಅತೀವ ಬೇಸರ ನಮಗಿದೆ.ಅಗಲಿದ ಅಸ್ಸಾದಿಯವರ ಮಹಾನ್ ಚೇತನಕ್ಕೆ ಅಸಂಖ್ಯಾತ ಸ್ನೇಹಿತರ ಪರವಾಗಿ ನುಡಿ ನಮನ ಸಲ್ಲಿಸುತ್ತೇನೆ.

ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ
(ನಿವೃತ್ತ ರಾಜ್ಯ ಶಾಸ್ತ್ರ ಮುಖ್ಯಸ್ಥ.ಎಂಜಿಎಂ.ಕಾಲೇಜು ಉಡುಪಿ)

Advertisement
Advertisement

Udayavani is now on Telegram. Click here to join our channel and stay updated with the latest news.

Next