Advertisement

ವಿಚಾರಗಳ ಹುಡುಕಾಟದಿಂದ ಸಮಸ್ಯೆ ಪರಿಹಾರ

01:08 PM Mar 04, 2017 | Team Udayavani |

ದಾವಣಗೆರೆ: ಸಮಸ್ಯೆಗಳು ಎದುರಾದಾಗ ಚಿಂತಿಸುವ ಬದಲು ವಿಚಾರ ಮಾಡುವ ಪರಿಪಾಠ ಬೆಳೆಸಿಕೊಂಡರೆ ನೆಮ್ಮದಿ, ಯಶಸ್ಸಿನ ಜೀವನ ಕಟ್ಟಿಕೊಳ್ಳಬಹುದು ಎಂದು ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಪ್ರತಿಪಾದಿಸಿದ್ದಾರೆ. ಶುಕ್ರವಾರ ಶಿವಯೋಗಾಶ್ರಮದಲ್ಲಿ ಏರ್ಪಡಿಸಿದ ಶರಣ ಸಂಗಮದಲ್ಲಿ ವಿಚಾರ ನೂತನ- ಬದುಕು ವಿನೂತನ ವಿಷಯ ಕುರಿತು ಮಾತನಾಡಿದರು

Advertisement

ಮನುಷ್ಯ ಸಮಸ್ಯೆ ಎದುರಾದಾಗ ಚಿಂತೆಗೆ ಈಡಾಗುತ್ತಾನೆ. ಹಾಗೆ ಮಾಡುವುದರೆ ಸಮಸ್ಯೆ  ಪರಿಹಾರ ಆಗದು. ಅದರ ಬದಲು ಚಿಂತನೆ ಮಾಡಬೇಕು. ಹೊಸ ವಿಚಾರಗಳ ಹುಡುಕಾಟ  ಮಾಡಬೇಕು ಆಗ ಸಮಸ್ಯೆಗೆ ಪರಿಹಾರ ತಾನಾಗಿಯೇ ಸಿಗುತ್ತದೆ ಎಂದರು. ನಾವು ನಮ್ಮ ದೇಹಾರೋಗ್ಯದಂತೆ ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳಬೇಕು. ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳುವುದು ಅಂದರೆ ತಲೆಯಲ್ಲಿರುವ ಮೆದುಳನ್ನು ಸಕ್ರಿಯ ಮಾಡುವುದಾಗಿದೆ.

ಆಂತೆ ಮಾಡಿದರೆ ಮೆದುಳು ನಿಷ್ಕಿಯ ಆಗಿ ಹೋಗುತ್ತದೆ. ವಿಚಾರವಂತಿಕೆ ಬೆಳೆಸಿಕೊಂಡರೆ ಮನಸ್ಸು ಸಕ್ರಿಯವಾಗಿ, ಕ್ರಿಯಾಶೀಲವಾಗಿ ಕೆಲಸ ಮಾಡುತ್ತದೆ ಎಂದು ಅವರು ತಿಳಿಸಿದರು. ಜಗತ್ತಿನಲ್ಲಿ ಹೆಚ್ಚು ಆಸೆಗೆ ಒಳಗಾಗುವವರು ದೊಡ್ಡ ಮನುಷ್ಯರಾಗಲು ಸಾಧ್ಯವಿಲ್ಲ. ಅವರು ಕಿರಿಯರಾಗುತ್ತಾ ಸಾಗುತ್ತಾರೆ. ದೊಡ್ಡವರೆನ್ನಿಸಿಕೊಳ್ಳಬೇಕಾದರೆ ದೊಡ್ಡಮಟ್ಟದಲ್ಲಿ ಆಲೋಚಿಸುವ, ಆಸೆಯಿಂದ ದೂರವಿರುವುದನ್ನು ಕಲಿಯಬೇಕು.

ಸಂಕಷ್ಟಕ್ಕೆ ಒಳಗಾದವರ ಬಗ್ಗೆ ದಯೆತೋರಬೇಕು. ದಯೆ ತೋರಿದಾಗ ಮಾತ್ರ ಧರ್ಮ ಪಾಲನೆ ಮಾಡಿದಂತೆ. ಧರ್ಮ ಪಾಲನೆ ಮಾಡಿದರೆ ನೆಮ್ಮದಿ ಜೀವನ ತಾನಾಗಿಯೇ ಬರುತ್ತದೆ ಎಂದು ಅವರು ಹೇಳಿದರು. ಇಂದಿನ ಸಮಾಜ ದುಡ್ಡಿನ ಹಿಂದೆ ಬಿದ್ದಿದೆ. ಆರೋಗ್ಯಕ್ಕಿಂತ ಹೆಚ್ಚು ದುಡ್ಡಿಗಾಗಿ ಹೋರಾಟ ಮಾಡುವ ಮನಸ್ಸುಗಳು ಹೆಚ್ಚುತ್ತಿವೆ. ಒಬ್ಬ ವ್ಯಕ್ತಿ ದೊಡ್ಡವನಾಗಬೇಕಾದರೆ ಆತನ ಬ್ಯಾಂಕ್‌ ಖಾತೆಯಲ್ಲಿ ಎಷ್ಟು ಹಣ ಇದೆ ಎಂಬುದರ ಮೇಲೆ ಅವಲಂಬನೆ ಆಗುತ್ತದೆ.

ಆದರೆ, ಇದು ಭೌತಿಕ ಶ್ರೀಮಂತಿಕೆ, ದೊಡ್ಡಸ್ತಿಕೆ ಆಗಿದೆ. ಆಂತರಿಕ ದೊಡ್ಡಸ್ತಿಕೆ, ಶ್ರೀಮಂತಿಕೆ ವಿಚಾರಗಳನ್ನು ಆಧರಿಸಿದ್ದಾಗಿರುತ್ತದೆ ಎಂದು ಅವರು ತಿಳಿಸಿದರು. ಮಾಜಿ ಶಾಸಕ ಯಜಮಾನ್‌ ಮೋತಿ ವೀರಣ್ಣ ಮಾತನಾಡಿ, ಶರಣ ಸಂಗಮದಲ್ಲಿ ಪ್ರತೀ ತಿಂಗಳು ಒಂದೊಂದು ಹೊಸ ವಿಷಯ ಕುರಿತು ಚರ್ಚಿಸಲಾಗುತ್ತದೆ. ಹಾಗೆ ಚರ್ಚೆ ಮಾಡುವುದರಿಂದ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಬಹುದಾಗಿದೆ ಎಂದರು. 

Advertisement

ಚಿತ್ರದುರ್ಗ ಮುರುಘಾ ಮಠದ ಎಸ್‌ ಜೆಎಂ ವಿದ್ಯಾಪೀಠದ ನಿರ್ದೇಶಕ ಚಿಗಟೇರಿ ಜಯಪ್ರಕಾಶ್‌ ವೇದಿಕೆಯಲ್ಲಿದ್ದರು. ಚಳ್ಳಕೆರೆಯ ಕರ್ನಾಟಕ ಅಕಾಡೆಮಿ ಆಫ್‌ ಮ್ಯಾಥಮೆಟಿಕ್ಸ್‌ಧಿನ ಎಚ್‌. ಮಂಜುನಾಥ ಉಪನ್ಯಾಸ,   ಪವಾಡ ಬಯಲು ಕಾರ್ಯಕ್ರಮ ನಡೆಸಿಕೊಟ್ಟರು. ಗೌರಮ್ಮ ಹನಗೋಡಿಮಠ ಪ್ರಾಥಮಿಕ ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬಸವ ಕಲಾ ಲೋಕದ ಕಲಾವಿದರು ವಚನ ಗಾಯನ ನಡೆಸಿಕೊಟ್ಟರು.   

Advertisement

Udayavani is now on Telegram. Click here to join our channel and stay updated with the latest news.

Next