Advertisement
ಮೀನುಗಾರರು ಸಾಮೂಹಿಕವಾಗಿ ಬೆಳಗ್ಗೆ ವಡಭಾಂಡ ಬಲರಾಮ ಮತ್ತು ಬೊಬ್ಬರ್ಯ ದೇವ ರಿಗೆ ವಿಶೇಷ ಪೂಜೆ ಸಲ್ಲಿಸಿ, ಶೋಭಾ ಯಾತ್ರೆಯಲ್ಲಿ ಸಮುದ್ರ ಕಿನಾರೆಗೆ ಬಂದು ಉತ್ತರಕಾಶಿ ಕಪಿಲಾಶ್ರಮದ ರಾಮಚಂದ್ರ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಿದರು. ಮುಂಬರುವ ದಿನಗಳಲ್ಲಿ ಮೀನುಗಾರಿಕೆ ಯಾವುದೇ ಅಡ್ಡಿ ಆತಂಕಗಳು ಇಲ್ಲದೆ, ಹೇರಳ ಮತ್ಸé ಸಂಪತ್ತು ಲಭಿಸುವಂತಾಗಲಿ ಎಂದು ಪ್ರಾರ್ಥಿಸಿ ಸೀಯಾಳ, ಫಲಪುಷ್ಪ, ಕ್ಷೀರವನ್ನು ಗಂಗಾ ಮಾತೆಗೆ ಅರ್ಪಿಸಿದರು.
ಸಮುದ್ರ ಪೂಜೆಯಲ್ಲಿ ಪಾಲ್ಗೊಂಡ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಅವರು ಮಾತನಾಡಿ, ನಾರಿಯಲ್ ಪೂರ್ಣಿಮೆಯ ದಿನ ಸಮುದ್ರ ಪೂಜೆ ನಡೆಸಿ ಮೀನುಗಾರಿಕೆ ಪ್ರಾರಂಭಿಸುವ ಹಿಂದಿನ ಪರಿಪಾಠದಂತೆ ಮೀನುಗಾರರು ಸಮುದ್ರರಾಜನಿಗೆ ಹಾಲು ಪುಷ್ಪಗಳನ್ನು ಅರ್ಪಿಸಿದರು. ಪಶ್ಚಿಮ ಕರಾವಳಿಯ ಎಲ್ಲ ರಾಜ್ಯಗಳಲ್ಲಿ ಒಂದೇ ದಿನ ಸಮುದ್ರಪೂಜೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಯಾವುದೇ ಪ್ರಾಣಾಪಾಯ ಇಲ್ಲದೆ ಸಮೃದ್ಧ ಮೀನುಗಾರಿಕೆ ಆಗುವಂತೆ ಗಂಗಾಮಾತೆ ಅನುಗ್ರಹಿಸಲಿ ಎಂದು ಹಾರೈಸಿದರು. ಜಲ ಮೀನುಗಾರರ ಸೊತ್ತು
ಕಪಿಲಾಶ್ರಮದ ರಾಮಚಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ರಾಷ್ಟ್ರ, ಧರ್ಮ ಸಂಸ್ಕೃತಿಯನ್ನು ಎತ್ತಿ ತೋರಿಸಿದ, ಜಾತಿ ಮತ ಭೇದದ ವೈಷಮ್ಯ ವನ್ನು ಇಟ್ಟುಕೊಳ್ಳದ ಮೀನುಗಾರರು ದೇಶದ ಬೆನ್ನೆಲುಬಾಗಿದ್ದಾರೆ. ಅರಣ್ಯ ಆದಿವಾಸಿಗಳ ಸೊತ್ತಾದರೆ, ಜಲ ಮೀನುಗಾರರ ಸೊತ್ತು ಮತ್ತು ಹಕ್ಕು ಆಗಿದೆ. ಈ ವರ್ಷ ಹೇರಳ ಮತ್ಸ éಸಂಪತ್ತು ಲಭಿಸಿ ಕರಾವಳಿ ಸಮೃದ್ಧಿ ಹೊಂದಲಿ ಎಂದರು.
Related Articles
Advertisement