Advertisement

Malpe: ಆಯತಪ್ಪಿ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ

07:11 PM Jan 08, 2025 | Team Udayavani |

ಮಲ್ಪೆ: ಮೀನುಗಾರಿಕೆಗೆ ತೆರಳಿದ ಜನಾರ್ದನ (41) ಅವರು ಆಯತಪ್ಪಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದಾರೆ.

Advertisement

ಜನಾರ್ದನ ಅವರು ಲಂಬೋದರ ಎಂಬ ಆಳಸಮುದ್ರ ಬೋಟಿನಲ್ಲಿ ದುಡಿಯುತ್ತಿದ್ದು ಜ. 5ರಂದು ಸುಮಾರು 10 ನಾಟಿಕಲ್‌ ಮೈಲು ದೂರ ಸಮುದ್ರದಲ್ಲಿ ಬಲೆ ಹಾಕಿ ಮೀನುಗಾರಿಕೆ ಮಾಡುತ್ತಿದ್ದಾಗ ರಾತ್ರಿ 12 ಗಂಟೆ ಸಮಯದಲ್ಲಿ ಇತರ ಕೆಲಸಗಾರರು ಸೇರಿ ಬಲೆಯನ್ನು ಎಳೆಯುವಾಗ ಜನಾರ್ದನ ಆಯತಪ್ಪಿ ಸಮುದ್ರಕ್ಕೆ ಬಿದ್ದು ಕಣ್ಮರೆಯಾದರು. ತತ್‌ಕ್ಷಣ ಇಬ್ಬರು ಕೆಲಸಗಾರರು ಸಮುದ್ರಕ್ಕೆ ಹಾರಿ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next