Advertisement

ಉಡುಪಿಯಲ್ಲಿ ಶ್ರೀಕೃಷ್ಣ ಕಾರಿಡಾರ್‌ ಚಿಂತನೆ

01:12 AM Jan 10, 2025 | Team Udayavani |

ಉಡುಪಿ: ಕಾಶಿ, ಅಯೋಧ್ಯೆ ಮಾದರಿಯಲ್ಲಿ ಉಡುಪಿಯಲ್ಲಿ ಶ್ರೀಕೃಷ್ಣ ಕಾರಿಡಾರ್‌ ಯೋಜನೆ ಮೂಲಕ ನಗರದ ಅಭಿವೃದ್ಧಿಗೆ ಆದ್ಯತೆ ಚಿಂತಿಸಲಾಗಿದೆ.

Advertisement

ಈ ಬಗ್ಗೆ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದ ರೊಂದಿಗೂ ಚರ್ಚಿಸಿ ದ್ದೇವೆ. ರೂಪುರೇಷೆ ಸಿದ್ಧಪಡಿಸಿ, ಕೇಂದ್ರ ಸರಕಾರದಿಂದ ಸುಮಾರು 300ರಿಂದ 400 ಕೋ.ರೂ. ಅನುದಾನಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಗುಂಡಿಬೈಲು ತಿಳಿಸಿದರು.

ಪತ್ರಿಕಾಭವನದಲ್ಲಿ ಜರಗಿದ ಸಂವಾದದಲ್ಲಿ ಮಾತನಾಡಿದ ಅವರು, ಸುಸಜ್ಜಿತ ರಿಂಗ್‌ರೋಡ್‌ ನಿರ್ಮಾಣ, ಸುವ್ಯವಸ್ಥಿತ ಸಂಚಾರ ವ್ಯವಸ್ಥೆ, ಅತ್ಯಾಧುನಿಕ ಸಿಸಿಟಿವಿ ಅಳವಡಿಕೆ, ಮಲ್ಟಿಲೆವೆಲ್‌ ಪಾರ್ಕಿಂಗ್‌ ವ್ಯವಸ್ಥೆಗಳು ಇದರಲ್ಲಿರಲಿವೆ. ವಿಶೇಷವಾಗಿ ಕರಾವಳಿ ಬೈಪಾಸ್‌- ಕಲ್ಸಂಕ- ಮಣಿಪಾಲ ಮಾರ್ಗದಲ್ಲಿ ಫ್ಲೈಓವರ್‌ ನಿರ್ಮಾಣ ಮಾಡಲಾಗುವುದು. ಸಂಚಾರದಟ್ಟಣೆ ನಿಯಂತ್ರಿಸಲು ಪರ್ಯಾಯ ರಸ್ತೆಗಳ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಪತ್ರಿಕಾಭವನಕ್ಕೆ ತೆರಳುವ ರಸ್ತೆಗೆ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಹೆಸರಿಡಲಾಗುವುದು ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next