Advertisement

ಕರ್ನಾಟಕ ರಾಜ್ಯಪಾಲರ ನಿರ್ಧಾರದ ತುರ್ತು ವಿಚಾರಣೆಗೆ ನಿರಾಕರಣೆ

04:22 PM May 22, 2018 | Team Udayavani |

ಹೊಸದಿಲ್ಲಿ : ಕರ್ನಾಟಕ ರಾಜ್ಯಪಾಲ ವಜೂಭಾಯಿ ವಾಲಾ ಅವರು ಕಾಂಗ್ರೆಸ್‌ – ಜೆಡಿಎಸ್‌ ಮೈತ್ರಿಕೂಟವನ್ನು ಸರಕಾರ ರಚಿಸುವಂತೆ ಆಹ್ವಾನಿಸಿರುವುದನ್ನು ಪ್ರಶ್ನಿಸಿ “ತುರ್ತು ವಿಚಾರಣೆ’ ನಡೆಸಬೇಕೆಂಬ ಅಖೀಲ ಭಾರತ ಹಿಂದೂ ಮಹಾಸಭಾ (ಎಬಿಎಚ್‌ಎಂ) ಕೋರಿಕೆಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ.

Advertisement

ಎಬಿಎಚ್‌ಎಂ ಅರ್ಜಿಯ ತುರ್ತು ವಿಚಾರಣೆಗಾಗಿ ಜಸ್ಟಿಸ್‌ ಎ ಎಂ ಖಾನ್‌ವಿಲ್ಕರ್‌ ಮತ್ತು ನವೀನ್‌ ಸಿನ್ಹಾ ಅವರನ್ನು ಒಳಗೊಂಡ ಸುಪ್ರೀಂ ಪೀಠದ ಮುಂದೆ ಮಂಡಿಸಲಾಗಿತ್ತು. ಆದರೆ ತುರ್ತು ವಿಚಾರಣೆಯ ಕೋರಿಕೆಯನ್ನು ತಿರಸ್ಕರಿಸಿದ ಪೀಠ, ಸರದಿ ಪ್ರಕಾರ ಅರ್ಜಿಯ ವಿಚಾರಣೆ ಕೈಗೊಳ್ಳುವುದಾಗಿ ಹೇಳಿತು. 

“ಅರ್ಜಿಯ ತುರ್ತು ವಿಚಾರಣೆಯನ್ನು ನೀವು ಕೋರಿದ್ದೀರಿ; ಆದರೆ ನಾವದನ್ನು ಸ್ವೀಕರಿಸಿಲ್ಲ; ಕಾಲಕ್ರಮದಲ್ಲಿ ನಾವದನ್ನು ವಿಚಾರಣೆಗೆ ಎತ್ತಿಕೊಳ್ಳುವೆವು’ ಎಂದು ಪೀಠ ಸ್ಪಷ್ಟಪಡಿಸಿತು.

Advertisement

Udayavani is now on Telegram. Click here to join our channel and stay updated with the latest news.

Next