Advertisement

Theatre stampede case: ಅಲ್ಲು ಅರ್ಜುನ್ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ನ್ಯಾಯಾಲಯ

07:49 PM Dec 30, 2024 | Team Udayavani |

ಹೈದರಾಬಾದ್:  ಪುಷ್ಪ-2 ರ ಪ್ರಥಮ ಪ್ರದರ್ಶನದಲ್ಲಿ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ಅಲ್ಲು ಅರ್ಜುನ್ ಅವರ ಜಾಮೀನು ಅರ್ಜಿಯ ಆದೇಶವನ್ನು ಇಲ್ಲಿನ ನ್ಯಾಯಾಲಯ ಸೋಮವಾರ(ಡಿ30) ಕಾಯ್ದಿರಿಸಿದೆ.

Advertisement

ಪ್ರತಿ-ಅರ್ಜಿ ಸಲ್ಲಿಸಿದ ಪೊಲೀಸರು ಮತ್ತು ನಟ ಅಲ್ಲು ಅರ್ಜುನ್ ಅವರ ವಕೀಲರ ವಾದಗಳನ್ನು ಆಲಿಸಿದ ನಂತರ ಹೆಚ್ಚುವರಿ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಧೀಶರು ತಮ್ಮ ತೀರ್ಪನ್ನು 2025,ಜನವರಿ 3ಕ್ಕೆ ಮುಂದೂಡಿದ್ದಾರೆ.

ಪ್ರಕರಣದ ಆರೋಪಿ ನಂ.11 ಎಂದು ಹೆಸರಿಸಲಾದ ಅಲ್ಲು ಅರ್ಜುನ್ ಈ ಹಿಂದೆ ನ್ಯಾಯಾಲಯದಲ್ಲಿ ಸಾಮಾನ್ಯ ಜಾಮೀನು ಅರ್ಜಿ ಸಲ್ಲಿಸಿದ್ದರು ಮತ್ತು ಡಿಸೆಂಬರ್ 27 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next