Advertisement

“ತುಳುನಾಡ ಸಂಸ್ಕೃತಿಯನ್ನು ಉಳಿಸಿ’

07:00 AM Aug 08, 2017 | Team Udayavani |

ಕಾರ್ಕಳ: ತುಳುನಾಡ ಗ್ರಾಮೀಣ ಆಹಾರೋತ್ಸವ ಸಂತುಲಿತ ಆಹಾರ ಜಾಗೃತಿ ಕಾರ್ಯಕ್ರಮ, 24ನೇ ವರ್ಷದ ಸಂಭ್ರಮದಲ್ಲಿ  ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜನೆಯೊಂದಿಗೆ 80ಕ್ಕೂ ಅಧಿಕ ಬಗೆಯ ತಿಂಡಿ ತಿನಿಸುಗಳ -ಬೊಂಬಾಟ್‌ ಭೋಜನ ಕಾರ್ಯಕ್ರಮ ಆ. 6ರಂದು ಶ್ರೀ ರಾಧಾಕೃಷ್ಣ ಸಭಾ ಭವನದಲ್ಲಿ ಜರಗಿತು.

Advertisement

ಆಹಾರೋತ್ಸವದ ಉದ್ಘಾಟನೆ ನೆರವೇರಿಸಿದ ಮುನಿಯಾಲು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್‌ ಟ್ರಸ್ಟ್‌ ಕಾರ್ಕಳ ಇದರ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ ಮಾತನಾಡಿ, ತುಳುನಾಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಆಹಾರೋತ್ಸವ ಹಮ್ಮಿಕೊಂಡಿರುವುದು ಶ್ಲಾಘನೀಯ.ಇಂತಹ ಕಾರ್ಯಕ್ರಮಗಳು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿರಿಯ ಲೇಖಕ ಡಾ| ಜಯಪ್ರಕಾಶಮಾವಿನಕುಳಿ ಹಾಗೂ ಜಾನ್‌ ಆರ್‌. ಡಿ’ಸಿಲ್ವ ಆಹಾರೋತ್ಸವಕ್ಕೆ ಶುಭ ಹಾರೈಸಿದರು.

ಕಾರ್ಕಳ ಪುರಸಭೆಯ ಅಧ್ಯಕ್ಷೆ  ಅನಿತಾ ಅಂಚನ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಜಾಗೃತಿ ಬಳಗದ ಅಧ್ಯಕ್ಷ ಸಾಣೂರು ಸತೀಶ ಸಾಲಿಯಾನ್‌ ಪ್ರಸ್ತಾವನೆಗೈದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಲಾಕೇಂದ್ರ ಬೊಳುವಾರು, ಪುತ್ತೂರು ಇವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.ಆಹಾರೋತ್ಸವದಲ್ಲಿ 80ಕ್ಕೂ ಅಧಿಕ ಬಗೆಯ ವಿವಿಧ ತುಳುನಾಡ ತಿಂಡಿಗಳು ಗಮನ ಸೆಳೆದವು.

Advertisement

Udayavani is now on Telegram. Click here to join our channel and stay updated with the latest news.

Next