ಗಂಗಾವತಿ: ತಾಲೂಕಿನ ಬಸಾಪಟ್ಟಣದ ಶ್ರೀ ನಂಜುಂಡೇಶ್ವರ ಮಠದ ನೂತನ ಮಹಾರಥೋತ್ಸವ ಮಹಾಶಿವರಾತ್ರಿಯಂದು ಶ್ರದ್ಧೆ ಭಕ್ತಿಯಿಂದ ಸಹಾಸ್ರಾರು ಭಕ್ತರ ಜಯಘೋಷದ ಮಧ್ಯೆ ಜರಿಗಿತು.
ಶ್ರೀ ನಂಜುಂಡೇಶ್ವರ ಮಠದ ಮಹಾರಥೋತ್ಸವ ನಿಮಿತ್ತ ಬೆಳ್ಳಿಗ್ಗೆ 11 ಉಚಿತ ಸಾಮೂಹಿಕ ವಿವಾಹಗಳು ಜರುಗಿದವು.
ತಾಲೂಕಿನ ಸಮಸ್ತ ಜನಪ್ರತಿನಿಧಿಗಳು ಸಮಾಜದ ಆರ್ಥಿಕ ನೆರವಿನೊಂದಿಗೆ ಸುಮಾರು 25 ಲಕ್ಷ ರೂ.ಗಳ ವೆಚ್ಚದಲ್ಲಿ ರಥವನ್ನು ಬನಾಪೂರದ ಯಲ್ಲಪ್ಪ ಬಡಿಗೇರ್ ನಿರ್ಮಿಸಿದ್ದಾರೆ. ಮೊದಲ ಭಾರಿಗೆ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಮಹಾರಥೋತ್ಸವದ ನೇತೃತ್ವವನ್ನು ನಂಜುಂಡಿಶ್ವರ ಮಠದ ಸಿದ್ದರಾಮಯ್ಯ, ಸಿದ್ದಯ್ಯ ಗುರುವಿನ್ ವಹಿಸಿದ್ದರು.
ಮಹಾರಥೋತ್ಸವದಲ್ಲಿ ಶಾಸಕ ಪರಣ್ಣ ಮುನವಳ್ಳಿ, ಮುಖಂಡರಾದ ಮಲ್ಲಿಕಾರ್ಜುನ ನಾಗಪ್ಪ, ಇಕ್ಬಾಲ್ ಅನ್ಸಾರಿ, ಎಚ್.ಆರ್.ಶ್ರೀನಾಥ, ಎಚ್.ಆರ್.ಚನ್ನಕೇಶವ ಹಾಗೂ ಎಚ್.ಸಿ.ಅಖಿಲೇಶ ಸೇರಿ ಅನೇಕ ಗಣ್ಯರು ಗ್ರಾಮದ ಮುಖಂಡರಿದ್ದರು.