Advertisement
ಪಟ್ಟಣದ ಜವಳಿ ಕೂಟದಿಂದ ಹರ, ಹರ ಮಹಾದೇವ, ಬಸವೇಶ್ವರ ಮಹಾರಾಜಕೀ ಜೈ ಎಂಬ ಜಯ ಘೋಷಗಳೊಂದಿಗೆ ಆರಂಭವಾದ 80 ಅಡಿ ಎತ್ತರದ ಮಹಾರಥೋತ್ಸವ ಬಜಾರ ರಸ್ತೆ, ಬೆಲ್ಲದ ಕೂಟ, ಉಪ್ಪಿನ ಕೂಟ ನಂತರ ಮೇದಾರ ಗಲ್ಲಿ ಮಾರ್ಗವಾಗಿ 2 ಕೀ.ಮೀ. ಸಂಚರಿಸಿ ದೇವಸ್ಥಾನಕ್ಕೆ ಬಂದು ತಲುಪಿತು. ದಾರಿಯುದ್ದಕ್ಕೂ ಭಕ್ತ ಸಮೂಹ ತುಂಬಿ ತುಳುಕುತ್ತಿತ್ತು. ಕರೊನಾ ಹಾವಳಿ ಇಳಿಮುಖವಾಗಿದ್ದರಿಂದ ಜಾತ್ರೆಯ ವೈಭವ ಇಮ್ಮಡಿಸಿತ್ತು.
ಇರಿಸಲಾಗಿತ್ತು. ಜಿಲ್ಲೆ, ರಾಜ್ಯ, ಹೊರ ರಾಜ್ಯಗಳಿಂದ ದೇವಸ್ಥಾನಕ್ಕೆ ಬಂದ ಅಪಾರ ಸಂಖ್ಯೆಯ ಭಕ್ತರು ಬೆಳಗ್ಗೆಯಿಂದ ರಾತ್ರಿಯವರಿಗೆ ದೇವಸ್ಥಾನಕ್ಕೆ ತೆರಳಿ ಶ್ರೀ ಮರಡಿಬಸವೇಶ್ವರರ ದರ್ಶನ ಪಡೆದುಕೊಂಡರು. ಗಾಳಿಮರಡಿ ಕುಟುಂಬದ ಅರ್ಚಕರಾದ ರುದ್ರಯ್ಯ, ಶಿವಲಿಂಗಯ್ಯ ಪೂಜಾ ವಿಧಿ ವಿಧಾನ ನಡೆಸಿದರು. ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಶಿವಲಿಂಗ ದೇವರು, ವೇದಮೂರ್ತಿ ವಿಶ್ವನಾಥ ಹಿರೇಮಠ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
Related Articles
ವೀರುಪಾಕ್ಷ ವಾಲಿ, ಅಜ್ಜಪ್ಪ ಹೊಸೂರ, ಮಹಾಂತೇಶ ತೋಟಗಿ, ಶಿವಾನಂದ ಇಂಚಲ, ಮಲ್ಲಿಕಾರ್ಜುನ ಕಮತಗಿ, ಬಸವರಾಜ ಇಂಚಲ, ರವಿ ಲಕ್ಕನ್ನವರ, ಬಸವರಾಜ ಜವಳಿ, ಬಾಬುಸಾಬ ಸುತಗಟ್ಟಿ ಸೇರಿದಂತೆ ಸಹಸ್ರಾರು ಜನ ಸಂಖ್ಯೆಯಲ್ಲಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
Advertisement
ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಉಳವಪ್ಪ ಸಾತೆನಹಳ್ಳಿ ನೇತೃತ್ವದಲ್ಲಿ ಬೈಲಹೊಂಗಲ: ಶ್ರೀ ಮರಡಿ ಬಸವೇಶ್ವರ ಜಾತ್ರಾ ಮಹೋತ್ಸವದ ಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು. 50 ಸಿಬ್ಬಂದಿ ಬಿಗಿ ಪೊಲೀಸ್ ಬಂದೊಬಸ್ತಿ ಮಾಡಿದ್ದರು.