Advertisement
ಶ್ರೀಮಠದ ಪರಂಪರೆಯಂತೆ ಇಲ್ಲಿನ ವೀರನಾರಾಯಣ ದೇವಸ್ಥಾನದ ರಸ್ತೆಯಲ್ಲಿರುವ ಕಳಸಾಪುರ ಶೆಟ್ಟರ್ ಮನೆಯಿಂದ ಮಠದ ಪೀಠಾಧಿಪತಿ ಡಾ|ಸಿದ್ಧರಾಮ ಸ್ವಾಮೀಜಿ ಅವರನ್ನು ಸಾಂಪ್ರದಾಯಿಕವಾಗಿ ಕಲಾ ಮೇಳಗಳು, ಮಂಗಳ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಶ್ರೀಮಠಕ್ಕೆ ಬರಮಾಡಿಕೊಳ್ಳುವ ಮೂಲಕ ಚಿತ್ತಾ ನಕ್ಷತ್ರದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
Related Articles
Advertisement
ಮಳೆಯಲ್ಲೇ ಶ್ರೀಗಳ ಮೆರವಣಿಗೆ: ಶನಿವಾರ ಬೆಳಗ್ಗೆಯಿಂದ ಬಿರುಬಿಸಲಿನಿಂದ ತಾಪ ಹೆಚ್ಚಿತ್ತು. ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತಾವರಣ ಆವರಿಸಿತ್ತು. ಸಂಜೆ 4 ಗಂಟೆ ವೇಳೆಗೆ ಗುಡುಗು, ಸಿಡಿಲು ಸಹಿತ ಬಿರುಸಿನ ಮಳೆ ಆರಂಭವಾಯಿತು. ಹೀಗಾಗಿ, ಕಳಸಾಪುರ ಶೆಟ್ಟರ್ ಮನೆಯಿಂದ ಮೆರವಣಿಗೆ ಕೆಲಕಾಲ ವಿಳಂಬವಾಯಿತು. ಬಳಿಕ ಮಳೆಯಲ್ಲೇ ಪೂಜ್ಯರ ಮೆರವಣಿಗೆ ನಡೆಯಿತು. ಜಿಲ್ಲೆ ಹಾಗೂ ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಜಾನಪದ ಕಲಾ ತಂಡಗಳು ಮಳೆಯನ್ನು ಲೆಕ್ಕಿಸದೇ, ಕಲಾ ಸೇವೆ ಪ್ರದರ್ಶಿಸಿದರು.