Advertisement

ಮೂಡುಬಿದಿರೆ: ಆಳ್ವಾಸ್‌ನಲ್ಲಿ ಹಲಸು, ಹಣ್ಣು, ಆಹಾರೋತ್ಸವಗಳ ಸಮೃದ್ಧಿ

04:05 PM Jun 15, 2024 | Team Udayavani |

ಮೂಡುಬಿದಿರೆ: ಮೂಡುಬಿದಿರೆ ವಿದ್ಯಾಗಿರಿಯ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿ ಸಿರಿ) ವೇದಿಕೆಯಲ್ಲಿ ಕೃಷಿಋಷಿ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ಏರ್ಪಡಿಸಲಾಗಿರುವ ಎರಡನೇ ವರ್ಷದ “ಸಮೃದ್ಧಿ’-ಹಲಸು ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಹಾಗೂ ಕೃಷಿ ಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮಹಾಮೇಳ ಶುಕ್ರವಾರ ಪ್ರಾರಂಭವಾಗಿದೆ. ರವಿವಾರ ಸಂಜೆಯವರೆಗೆ ಮಹಾಮೇಳ ನಡೆಯಲಿದೆ.

Advertisement

ಹಲಸು, ಮಾವು ಪ್ರಧಾನವಾಗಿದ್ದು ರಂಬುಟಾನ್‌, ಮೆಂಗೋಸ್ಟಿನ್‌, ಅಬಿಯೂ, ಮಚ್ಚೋವಾ ಮೊದಲಾದ ದೇಶೀಯ, ವಿದೇಶಿಯ ಹಣ್ಣಿನ ಗಿಡಗಳ ಮಹಾ ಸಂಗ್ರಹವೇ ಇಲ್ಲಿದೆ. ವಿಶೇಷವಾಗಿ ಜಾಕ್‌ ಅನಿಲ್‌ ಅವರ ಸಂಶೋಧನೆ “ನಿನ್ನಿತಾಯ್‌’ ಹಲಸು, ಗಿಡ್ಡನೆ ತಳಿ, ಒಂದೂವರೆ ವರ್ಷ ದಲ್ಲಿಯೇ ಫಲವೀಯುವ ತಳಿ ಸೇರಿದಂತೆ ಬಹು ವಿಧ ಹಣ್ಣು ಹಂಪಲುಗಳ ಕಸಿಕಟ್ಟಿದ ಗಿಡಗಳು ಜನಮನ ಸೆಳೆಯುತ್ತಿವೆ. ಸಾಕುವ ವಿಧಾನವನ್ನೂ ಎಚ್ಚರಿಕೆಯ ಕ್ರಮಗಳನ್ನೂ ಅವರು, ಅವರ ಸಿಬಂದಿ ತಿಳಿಸಿಕೊಡುತ್ತಿದ್ದಾರೆ.

ನೇತ್ರಾವತಿ ಮತ್ತಿತರ ಹೆಸರಿನ ನರ್ಸರಿಗಳಿಂದಲೂ ಹಣ್ಣು, ಹೂವುಗಳ ವೈವಿಧ್ಯಮಯ ಗಿಡಗಳು ಸ್ಟಾಲ್‌ಗ‌ಳಲ್ಲಿವೆ. ಸಾಯಿ ಎಂಟರ್‌ ಪ್ರೈಸಸ್‌ನವರ ಕೃಷಿ ಸಲಕರಣೆಗಳು, ಹೊಸ ಹೊಸ ಸಾಮಗ್ರಿಗಳು ಗಮನ ಸೆಳೆಯುತ್ತಿವೆ. ಹತ್ತಿರದ ಮಳಿಗೆಗಳಲ್ಲಿ ಜೋನಿ ಬೆಲ್ಲ, ಸಾವಯವ ಬೆಲ್ಲದಿಂದ ಹಿಡಿದು ಆಯುರ್ವೇದ ಔಷಧಗಳ ಸಹಿತ ಆರೋಗ್ಯಪೂರ್ಣ ಆಹಾರ ವಸ್ತುಗಳು
ಪ್ರದರ್ಶನಾಂಗಣದಲ್ಲಿವೆ.

ಆಳ್ವಾಸ್‌ ಪ್ರಕೃತಿ ಚಿಕಿತ್ಸೆ ಯೋಗವಿಜ್ಞಾನ ಕಾಲೇಜಿನವರು ಹಲಸು ಮತ್ತು ಇತರ ಹಣ್ಣುಗಳಿಂದ ತಯಾರಿಸಿದ ಹಲ್ವ, ಬರ್ಫಿ, ಹೋಳಿಗೆ, ಹಲಸಿನ ಬೀಜದ ಖಾದ್ಯ ವಸ್ತುಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ.

ತಯಾರಿಕೆಯ ವಿಧಾನಗಳನ್ನು ಆಸಕ್ತರಿಗೆ ತಿಳಿಸುತ್ತಿದ್ದಾರೆ. ನಾಡಿನೆಲ್ಲೆಡೆಯಿಂದ ತರಿಸ ಲಾದ ಬಹುಬಗೆಯ ಹಲಸು ಮಾರಾಟವೂ ನಡೆಯುತ್ತಿದೆ. ಉಳಿದಂತೆ ತಿಂಡಿ, ತಿನಿಸುಗಳ ಆಹಾರೋತ್ಸವ, ಗೃಹೋಪಯೋಗಿ ವಸ್ತುಗಳು, ಬಟ್ಟೆ ಬರೆ, ಫ್ಯಾನ್ಸಿ ಸಾಮಗ್ರಿಗಳು ಸೇರಿ ಇದೊಂದು ಸಮಗ್ರ ದೇಸೀ ಸಂಸ್ಕೃತಿಯನ್ನು ಪರಿಚಯಿಸುವ ಮಹಾ ಮೇಳ “ಸಮೃದ್ಧಿ’ ಎನ್ನುವ ಕಾರಣ ದಿಂದಾಗಿ ದೂರದೂರಿನ ಜನರನ್ನೂ ಇತ್ತ ಸೆಳೆಯುತ್ತಲಿದೆ. ಎಂದಿನಂತೆ ಆಳ್ವಾಸ್‌ ಕ್ಯಾಂಪಸ್‌ನ ವಿದ್ಯಾರ್ಥಿಗಳು, ಸಿಬಂದಿಗಳ ಸಹಿತ 25,000ಕ್ಕೂ ಅಧಿಕ ಮಂದಿಯ ಆಡುಂಬೊಲವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next