Advertisement
17ರ ಹರೆಯದ ಸಾತ್ವಿಕ್ ರಾಂಕಿರೆಡ್ಡಿ ಮತ್ತು 20ರ ಹರೆಯದ ಚಿರಾಗ್ ಚಂದ್ರಶೇಖರ್ ಶೆಟ್ಟಿ 2016ರ ಟಾಟಾ ಓಪನ್ ಇಂಟರ್‌ನ್ಯಾಶನಲ್ ಚಾಲೆಂಜ್‌ನಲ್ಲಿ ಪ್ರಶಸ್ತಿ ಎತ್ತುವ ಮೂಲಕ ಬೆಳಕಿಗೆ ಬಂದಿದ್ದರು. ಇಬ್ಬರೂ ಮಾರಿಶಸ್ ಹಾಗೂ ಬಾಂಗ್ಲಾದೇಶ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನೂ ತಮ್ಮದಾಗಿಸಿ ಕೊಂಡಿದ್ದರು. ಇದಕ್ಕಿಂತ ಮಿಗಿಲಾದದ್ದು ಕಳೆದ ವರ್ಷ ಗೆದ್ದ ವಿಯೆಟ್ನಾಮ್ ಓಪನ್ ಇಂಟರ್‌ನ್ಯಾಶನಲ್ ಚಾಲೆಂಜ್ ಪ್ರಶಸ್ತಿ. ಇದರಲ್ಲಿ ಮಾಜಿ ಒಲಿಂಪಿಕ್ ಮತ್ತು ಮಾಜಿ ವಿಶ್ವ ಚಾಂಪಿ ಯನ್ ಮಾರ್ಕಿಸ್ ಕಿಡೊ ಹಾಗೂ ಅವರ ಜತೆಗಾರ ಹೆಂಡ್ರ ಗುನವಾನ್ ವಿರುದ್ಧ ಭಾರತದ ಜೋಡಿ ಜಯ ಸಾಧಿಸಿತ್ತು.
ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದ ಸಾತ್ವಿಕ್- ಚಿರಾಗ್, ಕೊರಿಯಾ ಓಪನ್ ಮತ್ತು ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್ ತಲುಪಿದ್ದರು. ಇದೇ ವರ್ಷ ಇಂಡೋನೇಶ್ಯ ಮಾಸ್ಟರ್ ಸೆಮಿಫೈನಲ್ ಹಾಗೂ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಕ್ವಾರ್ಟರ್ ಫೈನಲ್ ತನಕ ಸಾಗಿದ್ದರು. ಗೋಲ್ಡ್‌ಕೋಸ್ಟ್‌ನಲ್ಲಿ ಬೆಳ್ಳಿ ಪದಕದೊಂದಿಗೆ ಸ್ಮರಣೀಯ ಸಾಧನೆಗೈದರು.