Advertisement

ರಾಜ್ಯಕ್ಕೇ ಮಾದರಿ ಲೇಔಟ್‌ ನಿರ್ಮಾಣ: ಕಿಣಿ

01:53 AM Jun 30, 2020 | Sriram |

ಉಡುಪಿ: ಉಡುಪಿ ನಗರದಲ್ಲಿ ಪ್ರಾಧಿಕಾರದ ವತಿಯಿಂದ ರಾಜ್ಯಕ್ಕೆ ಮಾದರಿ ಯಾಗಬಲ್ಲ ಯೋಜನಾಬದ್ಧ ಲೇಔಟ್‌ ನಿರ್ಮಾಣ ಮಾಡಲಾಗುವುದು ಎಂದು “ಊಡಾ’ ನೂತನ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ಹೇಳಿದ್ದಾರೆ.

Advertisement

ಪ್ರಾಧಿಕಾರದ ಮೂಲಕ ಜಾಗ ಖರೀದಿಸಿ ಅಲ್ಲಿ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಲೇ ಔಟ್‌ ನಿರ್ಮಾಣದ ಗುರಿ ಹೊಂದಿದ್ದೇವೆ. ಪ್ರಾಧಿಕಾರದ ಕಚೇರಿಯನ್ನು ಜನಸ್ನೇಹಿಯಾಗಿ ರೂಪಿಸಿ ಸಾರ್ವಜನಿಕರಿಗೆ ಸೇವೆ ನೀಡಲಾಗುವುದು ಎಂದರು.

ಶಾಸಕ ರಘುಪತಿ ಭಟ್‌ ಮಾತನಾಡಿ, ಉಡುಪಿ ನಗರಾಭಿವೃದ್ಧಿಯ ಮಾಸ್ಟರ್‌ ಪ್ಲಾನ್‌ ಇದುವರೆಗೆ ಅನುಮೋದನೆಗೊಂಡಿಲ್ಲ. ಇದರ ಅನುಮೋದನೆಗೆ ನೂತನ ಅಧ್ಯಕ್ಷರು ಮತ್ತು ಅವರ ತಂಡ ಪ್ರಯತ್ನಿಸಬೇಕು. ಪ್ರಾಧಿಕಾರದ ಮೂಲಕ ಜಾಗ ಖರೀದಿಸಿ, ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ವ್ಯವಸ್ಥಿತವಾದ ವಸತಿ ಸೌಲಭ್ಯ ಒದಗಿಸಬೇಕು. ಹೀಗೆ ಮಾಡದೆ ಇದ್ದರೆ ಪ್ರಾಧಿಕಾರವನ್ನು ಯೋಜನಾ ಪ್ರಾಧಿಕಾರವಾಗಿ ಮಾಡುವುದಾಗಿ ಎಚ್ಚರಿಕೆ ಇತ್ತು ಎಂದರು.

ಪ್ರಸ್ತುತ ಜೋನ್‌ ಬದಲಾವಣೆಗೆ ಸಮಸ್ಯೆ ಇದ್ದು ಅದನ್ನು ಸರಳಗೊಳಿಸಬೇಕು. 10 ಸೆಂಟ್ಸ್‌ ಕೃಷಿ ಭೂಮಿ ಇದ್ದರೂ ಇಲ್ಲಿ ಮನೆ ಕಟ್ಟಲು ಬೆಂಗಳೂರಿನ ಸಚಿವರ ಕಚೇರಿಗೆ ಹೋಗಬೇಕಾಗಿದೆ. ಇದನ್ನು ಪ್ರಾಧಿಕಾರದ ಕಚೇರಿಯಲ್ಲಿಯೇ ಕ್ಲಿಯರ್‌ ಮಾಡುವ ಪ್ರಸ್ತಾವವಿದೆ. ಪಿತ್ರಾರ್ಜಿತ ಆಸ್ತಿಯ ಪಾಲು ಆಗುವಾಗ ಲೇಔಟ್‌ ನಿಯಮಾವಳಿಗಳಿಂದ ವಿನಾಯಿತಿ ಸಿಗಬೇಕು. ಇವೆರಡು ವಿಷಯಗಳಿಗೂ ಅನುಮತಿ ದೊರಬೇಕಾಗಿದೆ ಎಂದು ಭಟ್‌ ಹೇಳಿದರು.

ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಜಿಲ್ಲಾಧಿಕಾರಿ ಜಿ. ಜಗದೀಶ್‌ ಮಾತನಾಡಿ, ಲೇಔಟ್‌ ಮಾಡುವಾಗ ಸರಕಾರದ ನಿಯಮಾವಳಿಯನ್ನು ಪಾಲಿಸಬೇಕು. ಅಲ್ಲಲ್ಲಿ ಸ್ವಲ್ಪ ಜಾಗ ಬಿಡುವ ಬದಲು ಒಂದೇ ಕಡೆ ಕಾದಿರಿಸಿದರೆ ಹೆಚ್ಚು ಅನುಕೂಲವಾಗುತ್ತದೆ. ನಾನು ಸಾರ್ವಜನಿಕ ದಾರಿಗೆ ಹೆಚ್ಚಿಗೆ ಆದ್ಯತೆ ಕೊಟ್ಟಿದ್ದೇನೆ. ನಿವೇಶನ ಖರೀದಿಸುವವರ ಹಿತದೃಷ್ಟಿಯಿಂದ ಕೆಲಸ ಮಾಡಬೇಕು ಎಂದರು.

Advertisement

ಉಡುಪಿ ನಗರದಲ್ಲಿ ಕೆರೆಗಳ ಅಭಿವೃದ್ಧಿಗಾಗಿ 5 ಕೋಟಿ ರೂ.ಗಳ ಕ್ರಿಯಾಯೋಜನೆ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದ್ದು ಶೀಘ್ರದಲ್ಲಿ ಅನುಮತಿ ದೊರೆಯುವ ನಿರೀಕ್ಷೆಯಿದೆ. ಪ್ರಾಧಿಕಾರದಲ್ಲಿ ಹಣದ ಕೊರತೆ ಇಲ್ಲ. ನಗರದಲ್ಲಿ ಕರೆ ಅಭಿವೃದ್ಧಿಪಡಿಸಿದರೆ ಜನರಿಗೆ ಉಪಯೋಗವಾಗುತ್ತದೆ. ಪಾರ್ಕ್‌, ವಾಕಿಂಗ್‌ ಪಾತ್‌ ಮತ್ತು ಓಪನ್‌ ಜಿಮ್‌ಗಳ ಸ್ಥಾಪನೆಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ(ಊಡಾ)ದ ನೂತನ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ಸೋಮವಾರ ಪ್ರಾಧಿಕಾರದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ಇದುವರೆಗೆ ಅಧ್ಯಕ್ಷರಾಗಿದ್ದ ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರು ಅಧಿಕಾರ ಹಸ್ತಾಂತರಿಸಿ ಶುಭ ಕೋರಿದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಲಾಲಾಜಿ ಮೆಂಡನ್‌, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ. ಸುರೇಶ ನಾಯಕ್‌, ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಬಿ. ಸುಧಾಕರ ಶೆಟ್ಟಿ, ಕೆ.ಟಿ. ಪೂಜಾರಿ ನೂತನ ಅಧ್ಯಕ್ಷರಿಗೆ ಶುಭ ಕೋರಿದರು.

ಪ್ರಾಧಿಕಾರದ ಪ್ರಭಾರ ಆಯುಕ್ತ, ಕುಂದಾಪುರದ ಸಹಾಯಕ ಕಮಿಷನರ್‌ ಕೆ. ರಾಜು, ಪ್ರಾಧಿಕಾರದ ಸದಸ್ಯರಾದ ಕಪ್ಪೆಟ್ಟು ದಿನಕರ ಪೂಜಾರಿ, ಕಿಶೋರ್‌ ಕುಮಾರ್‌ ಕರಂಬಳ್ಳಿ, ಪ್ರವೀಣ್‌ ಶೆಟ್ಟಿ, ಸುಮಾ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

ಪ್ರತಿದಿನ ಬೆಳಗ್ಗೆ 11ರಿಂದ 1 ಗಂಟೆ ವರೆಗೆ ಕಚೇರಿಯಲ್ಲಿ ಸಾರ್ವಜನಿಕರ ಭೇಟಿಗೆ ಲಭ್ಯವಿರುತ್ತೇನೆ. ಕೊರೊನಾದ ಈ ಸಮಯದಲ್ಲಿ ಸಾರ್ವಜನಿಕರು ತುರ್ತು ಅನಿವಾರ್ಯವಿದ್ದಲ್ಲಿ ಮಾತ್ರ ಕಚೇರಿಗೆ ಆಗಮಿಸಬೇಕು. ಇಲ್ಲವಾದರೆ ಸಾರ್ವಜನಿಕರು ದೂರವಾಣಿ ಕರೆ ಮಾಡಿ ಅಥವಾ ಇ ಮೇಲ್‌ಗೆ ದಾಖಲಾತಿಗಳನ್ನು ಕಳುಹಿಸಿದರೆ ಅದಕ್ಕೆ ಉತ್ತರ ಕೊಡುತ್ತೇವೆ.
ಕೆ.ರಾಘವೇಂದ್ರ ಕಿಣಿ

Advertisement

Udayavani is now on Telegram. Click here to join our channel and stay updated with the latest news.

Next