Advertisement

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

01:06 AM Dec 21, 2024 | Team Udayavani |

“ನಾನೊಬ್ಬ ಮನುಷ್ಯ’ ಎಂದು ಎಲ್ಲರಿಗೂ ಅನುಭವವಿದೆಯಲ್ಲ? ಇದು ಭ್ರಮೆಯೋ? ಸತ್ಯವೋ? ಇದು ಭ್ರಮೆ. ಮನುಷ್ಯ ಇದ್ದದ್ದು ದೇಹದಲ್ಲಿ. ನಾಳೆ ಬೇರೆ ಪ್ರಾಣಿಯಾಗಿ ಜನಿಸಬಹುದು. ಮನುಷ್ಯತ್ವ ಇರುವುದು ದೇಹದಲ್ಲಿ. “ನಾನು’ ಇದ್ದರೂ ದೇಹದಲ್ಲಿರುವ ಮನುಷ್ಯತ್ವ ಇನ್ನೊಂದು ಪ್ರಾಣಿ ದೇಹದಲ್ಲಿರುವುದಿಲ್ಲ. ಆದ್ದರಿಂದ ನಾವು ಮನುಷ್ಯತ್ವವನ್ನು ಆತ್ಮನಲ್ಲಿ ಅನುಸಂಧಾನ ಮಾಡಿಕೊಳ್ಳಬೇಕು. ಆತ್ಮನಿಗೇ ಸ್ವಾಮಿತ್ವ ಇರುವುದು. ನಾವು ದೇಹದಲ್ಲಿ ಮನುಷ್ಯತ್ವವನ್ನು ಅನುಸಂಧಾನ ಮಾಡಿಕೊಂಡಿರುತ್ತೇವೆ. ಇದು ತಪ್ಪು. ಆತ್ಮನೂ ದೇಹದಲ್ಲಿರುವುದು. ಆತ್ಮತ್ವ ದೇಹದಲ್ಲಿದೆ. ನಾವು ಮಾಡುವ ತಪ್ಪೆಂದರೆ ದೇಹವೇ ಆತ್ಮ ಎಂದು ತಿಳಿಯುವುದು.

Advertisement

“ನನ್ನ’ ಶಬ್ದ ಉಪಯೋಗಿಸಬೇಕಾದರೆ ನಾನು ಬೇರೆ, ದೇಹ ಬೇರೆ ಎಂದಾಯಿತು. “ನನ್ನ ಜೀವಕ್ಕೆ ಹೆಚ್ಚು ಕಡಿಮೆಯಾದರೆ ನಾನು ಬಿಡುವುದಿಲ್ಲ’ ಎಂದು ಹೇಳುವುದುಂಟು. “ಜೀವ’ ಎಂದರೆ “ದೇಹ’ ಎಂದು ತಿಳಿದು ಹೀಗೆನ್ನುವುದು. ನಾನು ಕೃಶನಾಗಿದ್ದೇನೆ, ನಾನು ದಷ್ಟಪುಷ್ಟನಾಗಿದ್ದೇನೆ ಎನ್ನುವಾಗಲೂ ದೇಹವನ್ನೇ ಆತ್ಮವೆಂದು ಭಾವಿಸುತ್ತೇವೆ. ಆತ್ಮ ಕೃಶನೂ ಅಲ್ಲ, ದಷ್ಟಪುಷ್ಟನೂ ಅಲ್ಲ. ದೇಹದ ವ್ಯತ್ಯಾಸವನ್ನು ನಮ್ಮಲ್ಲಿ ಅಂಗೀಕರಿಸುವುದು ಹೀಗೆ. ಆತ್ಮ ಮತ್ತು ದೇಹದಲ್ಲಿ ಭೇದವನ್ನು ಇಲ್ಲಿ ಒಪ್ಪಿಕೊಳ್ಳಲೇಬೇಕು. ಕೆಂಡ, ಬೆಂಕಿ ಅನ್ನುತ್ತೇವೆ. ವಾಸ್ತವದಲ್ಲಿ ಅದು ಕಟ್ಟಿಗೆ. ಇದ್ದಿಲಿನಲ್ಲಿ ಬೆಂಕಿ ಇದ್ದಾಗ ಕೆಂಪಾಗಿ ಇರುತ್ತದೆ. ನಾವು ಇದ್ದಿಲನ್ನು ಬೆಂಕಿ ಎನ್ನುವುದು.

– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ

-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811

 

Advertisement
Advertisement

Udayavani is now on Telegram. Click here to join our channel and stay updated with the latest news.

Next