Advertisement
ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ಸುಶೀಲ್ ಕುಮಾರ್ ಮತ್ತು ಸಾಕ್ಷಿ ಅವರಿಗೆ ಅರ್ಹತಾ ಸುತ್ತಿನಲ್ಲಿ ಭಾಗಿಯಾಗಲು ತಿಳಿಸಿತ್ತು. ಆದರೆ ಕಳಪೆ ಫಾರ್ಮ್ನಿಂದಾಗಿ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಸುಶೀಲ್ ಕುಮಾರ್ ಹಿಂದೆ ಸರಿದಿದ್ದಾರೆ. ಸುಶೀಲ್ ಏಶ್ಯಾಡ್ ಪ್ರಥಮ ಸುತ್ತಿನಲ್ಲೇ ಸೋತು ನಿರಾಸೆ ಮೂಡಿಸಿದ್ದರು.“4 ವಿಭಾಗದ ಅರ್ಹತಾ ಸುತ್ತು ಉಳಿದಿತ್ತು. ಅವುಗಳಲ್ಲಿ ಭಜರಂಗ್ ಪೂನಿಯ, ವಿನೇಶ್ ಪೋಗಟ್ ಅವರಿಗೆ ತೊಂದರೆ ನೀಡಬಾರದೆಂದು ನಿರ್ಧರಿಸಿದ್ದೇವೆ. ಅರ್ಹತಾ ಸುತ್ತಿನಲ್ಲಿ ಸಾಕ್ಷಿಗೆ ಸರಿತಾ ಪ್ರತಿಸ್ಪರ್ಧಿಯಾಗಿದ್ದರು. ಆದರೆ ಗಂಟು ನೋವಿನಿಂದಾಗಿ ಸರಿತಾ ಈ ಸುತ್ತಿನಲ್ಲಿ ಪಾಲ್ಗೊಳ್ಳದ ಕಾರಣ ಸಾಕ್ಷಿಗೆ ವಿಶ್ವ ಚಾಂಪಿಯನ್‌ಶಿಪ್ ತಂಡದಲ್ಲಿ ಸ್ಥಾನ ನೀಡಲಾಗಿದೆ’ ಎಂದು ಡಬ್ಲ್ಯುಎಫ್ಐ ಉಪ ಕಾರ್ಯದರ್ಶಿ ವಿನೋದ್ ತೋಮರ್ ತಿಳಿಸಿದ್ದಾರೆ.
ರವಿವಾರ ಬೆಲರೂಸ್‌ನಲ್ಲಿ ನಡೆದ ಯುಡಬ್ಲ್ಯು ಡಬ್ಲ್ಯು ರ್‍ಯಾಂಕಿಂಗ್ ಸ್ಪರ್ಧೆಯ ಪೈನಲ್‌ನಲ್ಲಿ ಸೋತ ಸಾಕ್ಷಿ ಮಲಿಕ್ ಬೆಳ್ಳಿ ಪದಕ ಗೆದ್ದಿದ್ದರು.
ಮಂಗಳವಾರ ವನಿತೆಯರ 53 ಕೆಜಿ ವಿಭಾಗದಲ್ಲಿ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯಲು ರೀತು ಪೋಗಟ್ ಮತ್ತು ಪಿಂಕಿ ನಡುವೆ ಸ್ಪರ್ಧೆ ನಡೆಯಲಿದೆ.