Advertisement
ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಮಂಗಳವಾರ “ವಿಶ್ವ ಕೊಂಕಣಿ ಸಮಾರೋಹ್’ ಉದ್ಘಾಟಿಸಿ ಅವರು ಮಾತನಾಡಿದರು.ಒಂದು ಸಂಸ್ಥೆಯನ್ನು ಕಟ್ಟುವುದು ಸುಲಭದ ಕೆಲಸವಲ್ಲ. ಕಟ್ಟಿದ ಸಂಸ್ಥೆಯನ್ನು ಮುನ್ನಡೆಸುವ ಜವಾಬ್ದಾರಿ ಮುಖ್ಯವಾಗಿದೆ. ವಿಶ್ವ ಕೊಂಕಣಿ ಕೇಂದ್ರವನ್ನು ಕಟ್ಟಿ ಯುವ ಜನತೆಯನ್ನು ಸಂಘಟಿತರನ್ನಾಗಿಸಿ ಸಂಸ್ಥೆ ಅತ್ಯುತ್ತಮವಾಗಿ ಮುನ್ನಡೆಸುತ್ತಿರುವುದು ಎಲ್ಲರಿಗೂ ಮಾರ್ಗದರ್ಶಿ ಎಂದರು.
Related Articles
Advertisement
ಎಲ್ಲರಿಗೂ ಶಿಕ್ಷಣ ದೊರೆತಲ್ಲಿ ಮಾತ್ರ ದೇಶದ ಅಭಿವೃದ್ಧಿಸ್ವಾತಂತ್ರೊéàತ್ತರ ಭಾರತದ ಶಿಕ್ಷಣದಲ್ಲಿ ಕೊಂಕಣಿ ವಿಷಯದ ಬಗ್ಗೆ ನಡೆದ ಗೋಷ್ಠಿಯಲ್ಲಿ ವಿಚಾರ ಮಂಡಿಸಿದ ಶಿಕ್ಷಣಾಧಿಕಾರಿ ಡಾ| ಅಶೋಕ್ ಕಾಮತ್ ಅವರು, ಶಿಕ್ಷಣ ಕ್ಷೇತ್ರ ಬೆಳೆದರೆ ದೇಶ ಅಭಿವೃದಿ§ ಹೊಂದುತ್ತದೆ. ದೇಶದಲ್ಲಿ ಶೇ. 80ರಷ್ಟು ಮಂದಿ ಉನ್ನತ ಶಿಕ್ಷಣ ಪಡೆದಿಲ್ಲ. ಶೇ. 70ರಷ್ಟು ಮಕ್ಕಳು ಮಾತ್ರವೇ ದೇಶದಲ್ಲಿ ಪ್ರಸ್ತುತ ಶಿಕ್ಷಣ ಪಡೆಯುತ್ತಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ದೇಶದಲ್ಲಿ ಕ್ರಾಂತಿ ತರಲಿದ್ದು, ರಾಜ್ಯದಲ್ಲೂ ಅದರ ಅನುಷ್ಠಾನವಾಗಬೇಕಿದೆ ಎಂದರು. ಫ್ಲೋರಾ ಕ್ಯಾಸ್ತಲಿನೋ ಮಾತನಾಡಿ, ಶಾಲೆ ಕಾಲೇಜಿನಲ್ಲಿ ಶಿಕ್ಷಣ ಪಡೆದದ್ದೇ ಸಂಪೂರ್ಣ ಶಿಕ್ಷಣವಲ್ಲ. ನಿತ್ಯ ಜೀವನದಲ್ಲಿ ನಾವು ಕಲಿಯುತ್ತಿರಬೇಕಾದ ವಿಚಾರಗಳು ಸಾಕಷ್ಟಿವೆ. ಶಿಕ್ಷಣಕ್ಕೆ ಮಿತಿ ಇರಿಸದೆ ಜೀವನ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು. ಪ್ರಕಾಶ್ ಡಿ., ನಾಗರಾಜ್ ಖಾರ್ವಿ, ಪ್ರಶಾಂತ್ ಶೇಟ್, ಸರಸ್ವತಿ ಪ್ರಭು, ಡಾ| ಪಾಂಡುರಂಗ ನಾಯಕ್ ತಮ್ಮ ವಿಚಾರಗಳನ್ನು ಮಂಡಿಸಿದರು. ವೆಂಕಟೇಶ್ ಎನ್. ಬಾಳಿಗಾ ಗೋಷ್ಠಿ ನಡೆಸಿಕೊಟ್ಟರು.