ನೋಯ್ಡಾ: ವಿಜಯ್ ಮಲಿಕ್ ಅವರ ಅಮೋಘ ಆಟದಿಂದಾಗಿ ತೆಲುಗು ಟೈಟಾನ್ಸ್ ತಂಡವು ಗುರುವಾರ ನಡೆದ ಪ್ರೊ ಕಬಡ್ಡಿಯ ಮೊದಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ ತಂಡವನ್ನು 31-29 ಅಂಕಗಳಿಂದ ರೋಚಕವಾಗಿ ಸೋಲಿಸಿತು.
ಈ ಗೆಲುವಿನಿಂಧ ತೆಲುಗು ತಾನಾ ಡಿದ 12 ಪಂದ್ಯಗಳಲ್ಲಿ ಎಂಟರಲ್ಲಿ ಜಯ ಸಾಧಿಸಿ 42 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.ಬೆಂಗಳೂರಿಗೆ ಸೋಲು: ದಿನದ ಎರಡನೇ ಪಂದ್ಯದಲ್ಲಿ ಹರಿ ಯಾಣ ಸ್ಟೀಲರ್ ತಂಡವು ಬೆಂಗಳೂರು ಬುಲ್ಸ್ ತಂಡವನ್ನು 32-26 ಅಂಕಗಳಿಂದ ಸೋಲಿಸಿದೆ. ಹರಿಯಾಣ ತಂಡ ರೈಡಿಂಗ್‌ನಲ್ಲಿ 19 ಅಂಕ ಗಳಿಸಿ ಮೇಲುಗೈ ಸಾಧಿಸಿತು. ತಂಡದ ವಿನಯ್ ರೈಡ್‌ನಲ್ಲಿ 12 ಅಂಕ ಪಡೆದರು.
ಪಂದ್ಯದ ಆರಂಭದಿಂದಲೇ ಭರ್ಜರಿ ಆಟದ ಪ್ರದರ್ಶನ ನೀಡಿದ ತೆಲುಗು ತಂಡವು ಭಾರೀ ಮುನ್ನಡೆ ಸಾಧಿಸಿತು. ವಿಜಯ್ ಮಲಿಕ್ ರೈಡಿಂಗ್‌ನಲ್ಲಿ ಭಾರೀ ಯಶಸ್ಸು ಕಂಡರು. ತೆಲುಗು ಒಟ್ಟಾರೆ ರೈಡ್‌ನಲ್ಲಿ 18 ಅಂಕ ಪಡೆದರೆ ಟ್ಯಾಕಲ್‌ನಲ್ಲಿ 9 ಅಂಕ ಗಳಿಸಿತು. ವಿಜಯ್ ರೈಡ್‌ನಲ್ಲಿ 10 ಅಂಕ ಸಹಿತ ಒಟ್ಟು 14 ಅಂಕ ಪಡೆದು ಮಿಂಚಿದರು. ಮನ್‌ಜಿàತ್ ಮೂರಂಕ ಪಡೆದರು.
ಪಂದ್ಯ ಸಾಗುತ್ತಿದ್ದಂತೆ ಮೇಲುಗೈ ಸಾಧಿಸಲು ಬೆಂಗಾಲ್ ವಾರಿಯರ್ ಶಕ್ತಿಮೀರಿ ಪ್ರಯತ್ನಿಸಿತ್ತು. ಬೆಂಗಾಲ್ ಕೂಡ ರೈಡಿಂಗ್‌ನಲ್ಲಿ 18 ಅಂಕ ಪಡೆದಿದ್ದರೆ ಟ್ಯಾಕಲ್‌ನಲ್ಲಿ ಏಳಂಕ ಗಳಿಸಿತ್ತು. ತಂಡದ ಪ್ರಣಯ್ ವಿನಯ್ ರಾಣೆ 9 ಅಂಕ ಗಳಿಸಿದರು.
ಶುಕ್ರವಾರದ ಪಂದ್ಯಗಳು
1. ತಮಿಳ್ ಯುಪಿ
ಆರಂಭ: ರಾತ್ರಿ 8 ಗಂಟೆ
2. ಜೈಪುರ ಡೆಲ್ಲಿ
ಆರಂಭ: ರಾತ್ರಿ 9 ಗಂಟೆ