Advertisement

Wrestling: ಪ್ರತಿಭಟನೆಗೆ ಉತ್ತೇಜಿಸಿದ್ದೇ  ಬಬಿತಾ: ಸಾಕ್ಷಿ ಮಲಿಕ್‌ ಆರೋಪ

11:06 PM Oct 22, 2024 | Team Udayavani |

ಹೊಸದಿಲ್ಲಿ: ಭಾರತೀಯ ಕುಸ್ತಿ ಸಂಸ್ಥೆ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಪ್ರತಿಭಟನೆ ನಡೆಸಲು ಕುಸ್ತಿಪಟುಗಳನ್ನು ಉತ್ತೇಜಿಸಿದ್ದೇ ಬಿಜೆಪಿ ನಾಯಕಿ ಬಬಿತಾ ಫೋಗಾಟ್‌ ಎಂಬುದಾಗಿ ಒಲಿಂಪಿಕ್ಸ್‌ ಕಂಚು ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್‌ ಭಾರೀ ಆರೋಪ ಮಾಡಿದ್ದಾರೆ.

Advertisement

ಭಾರತ ಕುಸ್ತಿ ಸಂಸ್ಥೆ ಮುಖ್ಯಸ್ಥೆ ಆಗುವ ಉದ್ದೇಶ ಬಬಿತಾ ಅವರದಾ ಗಿತ್ತು, ಎಲ್ಲರೂ ಅಂದುಕೊಂಡಂತೆ ಕಾಂಗ್ರೆಸ್‌ ನಾಯಕರು ಪ್ರೇರಣೆ ನೀಡಿದ್ದಲ್ಲ ಎಂದಿದ್ದಾರೆ.

ಪ್ರತಿಭಟನೆಗೆ ಕಾಂಗ್ರೆಸ್‌ ಬೆಂಬಲಿಸಿದೆ ಎಂದು ಸುದ್ದಿಗಳು ಹರಿದಾಡಿದ್ದವು. ಆದರೆ ಇದು ಸುಳ್ಳು. ಇಬ್ಬರು ಬಿಜೆಪಿ ನಾಯಕರಾದ ಬಬಿತಾ ಫೋಗಾಟ್‌ ಮತ್ತು ತೀರ್ಥ ರಾಣಾ ನಮಗೆ ಪ್ರತಿಭಟನೆ ನಡೆಸಲು ಅನುಮತಿ ದೊರಕಿಸಿಕೊಟ್ಟರು ಎಂದು ಸಾಕ್ಷಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next