Advertisement

ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗದಿರುವುದು ಬೇಸರ ತಂದಿದೆ: ದೇವೇಗೌಡ

05:50 PM Mar 08, 2023 | Team Udayavani |

ಬೆಂಗಳೂರು: ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಕೋರಿರುವ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರು, ‘ಮಹಿಳಾ ಮೀಸಲಾತಿ ಮಸೂದೆ’ ಇನ್ನೂ ಅಂಗೀಕಾರವಾಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.ಹೊಸ ತಲೆಮಾರಿನವರು ಇದನ್ನು ಕೈಗೆತ್ತಿಕೊಳ್ಳುತ್ತಾರೆ ಎಂಬ ಭರವಸೆಯನ್ನು ಜೆಡಿ ಎಸ್ ವರಿಷ್ಠ ನಾಯಕ ವ್ಯಕ್ತಪಡಿಸಿದರು.

Advertisement

“ನಾನು ಎಲ್ಲರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತೇನೆ. ಮಹಿಳೆಯರ ಸಬಲೀಕರಣವು ನಮ್ಮ ದೇಶದ ಪ್ರಗತಿಯ ಸಂಕೇತವಾಗಿದೆ. 1995ರಲ್ಲಿ ಸಿಎಂ ಆಗಿ, 1996ರಲ್ಲಿ ಪ್ರಧಾನಿಯಾಗಿ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತಂದಿದ್ದೆ. ಇದು ಇನ್ನೂ ಜಾರಿಯಾಗದಿರುವುದು ಬೇಸರದ ಸಂಗತಿ. ಹೊಸ ತಲೆಮಾರು ಇದನ್ನು ಕೈಗೆತ್ತಿಕೊಳ್ಳುತ್ತದೆ ಎಂದು ಭಾವಿಸುತ್ತೇವೆ ಎಂದುದೇವೇಗೌಡರು ಟ್ವೀಟ್ ಮಾಡಿದ್ದಾರೆ.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡಲು ಪ್ರಯತ್ನಿಸುವ ಮಸೂದೆಯನ್ನು ಮೊದಲು 1996 ರಲ್ಲಿ ಪರಿಚಯಿಸಲಾಯಿತು. ನಂತರ ಇದನ್ನು ಹಲವಾರು ಬಾರಿ ಪರಿಚಯಿಸಲಾಯಿತು. ಈ ಮಸೂದೆಯನ್ನು 2010ರಲ್ಲಿ ರಾಜ್ಯಸಭೆ ಅಂಗೀಕರಿಸಿತ್ತು, ಆದರೆ ಲೋಕಸಭೆಯಲ್ಲಿ ಇನ್ನೂ ಅಂಗೀಕಾರವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next