Advertisement

ಶಬರಿಮಲೆ: ಭೂಮಿ ಸ್ವಾಧೀನಕ್ಕೆ ಚಿಂತನೆ

12:17 PM Jul 20, 2020 | mahesh |

ತಿರುವನಂತಪುರ: ಶಬರಿಮಲೆ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಚೆರುವಾಲಿ ಎಸ್ಟೇಟ್‌ ಸ್ವಾಧೀನ ಪಡಿಸಿಕೊಳ್ಳುವ ಸಲುವಾಗಿ ರಾಜ್ಯ ಸರಕಾರ ಹೊಸ ಕಾನೂನಿನ ಪ್ರಕಾರ, ಮಾಲಕತ್ವ ವಿವಾದದಲ್ಲಿದ್ದರೂ ಪರಿಹಾರ ಪಾವತಿಸುವ ಮೂಲಕ ಭೂಮಿಯನ್ನು ವಶ ಪಡಿಸಿಕೊಳ್ಳಲು ಮುಂದಾಗಿದೆ.

Advertisement

ಚೆರುವಾಲಿ ಎಸ್ಟೇಟ್‌ ದೃಷ್ಟಿಯಿಂದ ಕಾನೂನು ರೂಪಿಸಲಾಗಿದ್ದರೂ, ಈ ಹಿಂದೆ ಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ಸರಕಾರ ಪರಿಹಾರ ಪಾವತಿಸಬೇಕಾಗ ಬಹುದು. ಭೂ ಸುಧಾರಣ ಕಾಯ್ದೆ ಪ್ರಕಾರ, 15 ಎಕರೆಗೂ ಹೆಚ್ಚು ಭೂಮಿಯನ್ನು ತೋಟವಾಗಿ ಪರಿಗಣಿಸಬಹುದು.

ಭೂಮಿಯನ್ನು ಇತರ ಉದ್ದೇಶಗಳಿ ಗಾಗಿ ಬಳಸಿದರೆ, 15 ಎಕರೆ ಮಿತಿಯನ್ನು ಮೀರಿದ ಭೂಮಿಯನ್ನು “ಮೈಚಾ ಭೂಮಿ’ (ಹೆಚ್ಚುವರಿ ಭೂಮಿ) ಎಂದು ಪರಿಗಣಿಸಲಾಗುತ್ತದೆ. ಭೂಮಿಗೆ ಮತ್ತು ನಿರ್ಮಾಣಗಳಿಗೆ ಪರಿಹಾರ ನೀಡಲು ಕಾನೂನು ಪ್ರಸ್ತಾವಿ ಸಿದೆ. ಸೀಮಿತ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡಿದ್ದರೂ ಮಾಲಕತ್ವಕ್ಕೆ ಸಂಬಂಧಿಸಿದ ಒಪ್ಪಂದ ಇಡೀ ಭೂಮಿಗೆ ಅನ್ವಯವಾಗುತ್ತದೆ ಎಂದು ಕಾನೂನು ಹೇಳುತ್ತದೆ.ಸ್ವಾಧೀನಪಡಿಸಿಕೊಂಡ ಭೂಮಿ ಸೇರಿದಂತೆ ಉಳಿದ ಜಮೀನಿನ ಮಾಲಕತ್ವವೂ ಆ ವ್ಯಕ್ತಿಯದ್ದಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next