Advertisement

Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ

01:08 AM Dec 26, 2024 | Team Udayavani |

ಶಬರಿಮಲೆ: ಶಬರಿಮಲೆಯಲ್ಲಿ ಡಿ. 26ರಂದು ಮಂಡಲ ಮಹೋತ್ಸವ ಸಂಪನ್ನಗೊಳ್ಳಲಿದೆ. ಡಿ. 25ರಂದು ಸಂಜೆ ಶಬರಿಮಲೆ ಅಯ್ಯಪ್ಪನಿಗೆ “ತಂಗ ಅಂಗಿ’ ಆಭರಣ ತೊಡಿಸಿ ದೀಪಾರಾಧನೆ ನಡೆಯಿತು. ಡಿ.26ರ ಸಂಜೆ ಮಂಡಲಪೂಜೆ ನಡೆಯಲಿದೆ.

Advertisement

ಅಯ್ಯಪ್ಪನಿಗೆ “ತಂಗ ಅಂಗಿ’ ಆಭರಣ ತೊಡಿಸಲಾಗುತ್ತದೆ. ರಾತ್ರಿ 11ಕ್ಕೆ ಹರಿವರಾಸನಂ ಗಾಯನದೊಂದಿಗೆ ನಡೆ ಮುಚ್ಚುವುದರೊಂದಿಗೆ ಈ ಬಾರಿಯ ಮಂಡಲ ಕಾಲ ತೀರ್ಥಾಟನೆ ಸಂಪನ್ನಗೊಳ್ಳಲಿದೆ. ಡಿ. 31ರ ಮುಂಜಾನೆ 3ರಿಂದ ಮಕರಜ್ಯೋತಿ ಪೂಜೆಗಳು ಆರಂಭವಾಗಲಿದೆ.

ಆರನ್ಮುಳ ಪಾರ್ಥ ಸಾರಥಿ ದೇಗುಲದಿಂದ ವಿಶೇಷವಾಗಿ ಸಿದ್ಧಪಡಿಸಿದ ರಥದಲ್ಲಿ ಪೊಲೀಸ್‌ ಭದ್ರತೆಯಲ್ಲಿ ಡಿ. 22ರಂದು ಬೆಳಗ್ಗೆ ಹೊರಟ “ತಂಗ ಅಂಗಿ’ ಮೆರವಣಿಗೆಯನ್ನು ನಾನಾ ಕ್ಷೇತ್ರಗಳಲ್ಲಿ ಸ್ವಾಗತಿಸಲಾಯಿತು. ಸನ್ನಿಧಾನದಲ್ಲಿ ಸಂಜೆ ದೇಗುಲದಲ್ಲಿ ಪೂಜಿಸಿದ ಹೂಮಾಲೆಗಳನ್ನು ತಂಗ ಅಂಗಿಗೆ ಅರ್ಪಿಸಿ ಮೆರವಣಿಗೆಯನ್ನು ಸ್ವಾಗತಿಸಲಾಯಿತು.

ಹದಿನೆಂಟು ಮೆಟ್ಟಿಲ ಮೂಲಕ ಬಂದ ಮೆರವಣಿಗೆಯನ್ನು ಕೊಡಿ ಮರದ ಬುಡದಲ್ಲಿ ದೇವಸ್ವಂ ಮಂಡಳಿ ಅಧ್ಯಕ್ಷರು, ಸದಸ್ಯರು ಸ್ವಾಗತಿಸಿದರು. ದೇಗುಲದ ಮುಂಭಾಗ ತಲುಪಿದಾಗ ತಂತ್ರಿ ಮತ್ತು ಪ್ರಧಾನ ಅರ್ಚಕರು ತಂಗ ಅಂಗಿ ಆಭರಣಗಳನ್ನು ಸ್ವೀಕರಿಸಿ ಗರ್ಭಗುಡಿಗೆ ಕೊಂಡೊಯ್ದು ಅಯ್ಯಪ್ಪ ಸ್ವಾಮಿಗೆ ತೊಡಿಸಿದರು. ಬಳಿಕ ದೀಪಾರಾಧನೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next