Advertisement

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

01:25 AM Jan 10, 2025 | Team Udayavani |

ಶಬರಿಮಲೆ: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ ಜ.14ರಂದು ರಾತ್ರಿ 8.55ಕ್ಕೆ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಜ.12ರಂದು ಸಂಜೆ 5ಕ್ಕೆ ತಂತ್ರಿವರ್ಯ ಕಂಠರಾರ್‌ ಬ್ರಹ್ಮದತ್ತನ್‌ ನೇತೃತ್ವದಲ್ಲಿ ಪ್ರಾಸಾದ ಶುದ್ಧಿ, 13ರಂದು ಬಿಂಬ ಶುದ್ಧಿ ಕ್ರಿಯೆ ನಡೆಯಲಿದೆ.

Advertisement

ಮಕರ ಸಂಕ್ರಮಣ ಸಮೀಪಿಸುತ್ತಿದ್ದಂತೆ ಸನ್ನಿಧಾನದಲ್ಲಿ ಭಕ್ತರ ದಟ್ಟಣೆ ವಿಪರೀತವಾಗಿ ಹೆಚ್ಚುತ್ತಿದೆ. ಪ್ರಸ್ತುತ ದಿನಂಪ್ರತಿ ಒಂದು ಲಕ್ಷದಷ್ಟು ಭಕ್ತರು ದೇವರ ದರ್ಶನ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದ್ದು, ಸೂಕ್ತ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ದೇವಸ್ವಂ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಕಾಡು ದಾರಿ ಮೂಲಕ ಭಕ್ತರ ಸಂಖ್ಯೆ ಹೆಚ್ಚಿದ ಕಾರಣ ಕರಿಮಲೆಯಲ್ಲಿ ಸರಕಾರಿ ಡಿಸ್ಪೆನ್ಸರಿ ಆರಂಭಿಸಲಾಗಿದೆ. ಸನ್ನಿಧಾನ ಹಾಗೂ ಪರಿಸರದಲ್ಲಿ ಹೆಚ್ಚುವರಿ ಪೊಲೀಸರನ್ನು ನೇಮಿಸಲಾಗಿದೆ. ಮಕರ ಜ್ಯೋತಿ ಉತ್ಸವ ಕಾಲದ ಪ್ರಮುಖ ಕಾರ್ಯಕ್ರಮವಾದ ಕಳ ಬರೆಯುವಿಕೆ ಜ.14ರಂದು ಆರಂಭಗೊಳ್ಳಲಿದೆ. ಜ.14ರಂದು ಬಾಲಕ ಮಣಿಕಂಠ, 15ರಂದು ವಿಲ್ಲಾಳಿವೀರ, 16ರಂದು ರಾಜಕುಮಾರ, 17ರಂದು ಹುಲಿ ಮೇಲೆ ಕುಳಿತ ಅಯ್ಯಪ್ಪ, 18ರಂದು ತಿರುವಾಭರಣ ಧರಿಸಿದ ಅಯ್ಯಪ್ಪ ರೂಪದಲ್ಲಿ ಕಳ ಬರೆಯಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next