Advertisement

Sabarimala: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಮಕರ ಜ್ಯೋತಿ ವೀಕ್ಷಣೆ

10:08 PM Jan 14, 2025 | Team Udayavani |

ಪಟ್ಟನಂತಿಟ್ಟ: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಮಕರ ಸಂಕ್ರಮಣದ ದಿನ 3.5 ಕೋಟಿಗೂ ಅಧಿಕ ಮಂದಿ ಪವಿತ್ರ ಸ್ನಾನ ಮಾಡಿರುವಂತೆಯೇ ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ 2 ಲಕ್ಷಕ್ಕೂ ಅಧಿಕ ಭಕ್ತರು ಮಕರಜ್ಯೋತಿಯನ್ನು ವೀಕ್ಷಿಸಿದ್ದಾರೆ.

Advertisement

ಮಂಗಳವಾರ ಸಂಜೆಯಾಗುತ್ತಿದ್ದಂತೆಯೇ ಅಯ್ಯಪ್ಪ ದೇಗುಲ ದೇಗುಲದಿಂದ 4 ಕಿ.ಮೀ.ದೂರದಲ್ಲಿರುವ ಪೊನ್ನಂಬಲಮೇಡು ಪರ್ವತದಲ್ಲಿ ಮಕರಜ್ಯೋತಿ ಕಾಣಿಸಿಕೊಂಡಿತು. ಈ ವೇಳೆಗೆ, ಭಕ್ತರೆಲ್ಲರೂ ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಘೋಷಣೆ ಕೂಗಿದರು.

ಈ ಮೂಲಕ ಪ್ರಸಕ್ತ ಸಾಲಿಗಾಗಿ 41 ದಿನಗಳ ಅಯ್ಯಪ್ಪ ದೇಗುಲ ಯಾತ್ರೆ ಮುಕ್ತಾಯಗೊಂಡಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.