Advertisement

Sabarimala: ಶಬರಿಮಲೆ- ಭಕ್ತರ ಸಂಖ್ಯೆ ಹೆಚ್ಚಳ; ವ್ಯಾಪಾರಿಗಳಿಗೆ 10.87 ಲಕ್ಷ ರೂ. ದಂಡ

12:55 PM Dec 25, 2024 | Team Udayavani |

ಶಬರಿಮಲೆ: ಇಲ್ಲಿನ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಡಿ.26ರಂದು ಮಧ್ಯಾಹ್ನ ಮಂಡಲ ಪೂಜೆ ನಡೆಯಲಿದ್ದು, ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಹದಿನೆಂಟು ಮೆಟ್ಟಲೇರಲು ಕಾದು ನಿಂತಿರುವ ಭಕ್ತರ ಸಾಲು ಮರಕೂಟ್ಟಂವರೆಗೆ ಇತ್ತು.

Advertisement

ವ್ಯಾಪಾರಿಗಳಿಗೆ 10.87 ಲಕ್ಷ ರೂ. ದಂಡ
ಶಬರಿಮಲೆಯಲ್ಲಿ ವ್ಯಾಪಾರಿಗಳು ನಡೆಸಿದ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿ ಲೀಗಲ್‌ ಮೆಟ್ರೋಲಜಿ ವಿಭಾಗವು ಮಂಡಲ ಋತು ಆರಂಭವಾದಾಗಿನಿಂದ ಡಿ.17ರ ವರೆಗೆ 181 ಕೇಸುಗಳಲ್ಲಿ 10,87,000 ರೂ. ದಂಡ ವಸೂಲಿ ಮಾಡಲಾಗಿದೆ.

ತೂಕದಲ್ಲಿ ವಂಚನೆ, ದುಬಾರಿ ದರ ವಸೂಲಿ ಮಾಡುವುದು ಮೊದಲಾದ ಅಕ್ರಮಗಳ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ. ತೂಕದಲ್ಲಿ ಕಡಿಮೆ ಸಾಮಗ್ರಿ ನೀಡಿ ವಂಚನೆ, ನಿಗದಿತ ದರಕ್ಕಿಂತ ಅಧಿಕ ದರ ವಸೂಲಿ ಮಾಡವುದರ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದಿದ್ದವು.

ಸನ್ನಿಧಾನಂ, ಪಂಪಾ, ನೀಲಯ್ಕಲ್‌, ಔಟರ್‌ ಪಂಪಾ ಎಂಬ ನಾಲ್ಕು ಸ್ಥಳಗಳನ್ನು ಕೇಂದ್ರೀಕರಿಸಿ ವಿವಿಧ ಸ್ಕ್ವಾಡ್‌ಗಳು ತಪಾಸಣೆ ನಡೆಸಿ ಅಕ್ರಮ ಪತ್ತೆಹಚ್ಚಲಾಗಿದೆ.

Advertisement

ಸನ್ನಿಧಾನದಲ್ಲಿ 91 ಪ್ರಕರಣಗಳಲ್ಲಿ 5,76,000 ರೂ., ಪಂಪಾದಲ್ಲಿ 53 ಪ್ರಕರಣಗಳಲ್ಲಿ 2,70,000 ರೂ. ನೀಲಯ್ಕಲ್‌ನಲ್ಲಿ 32 ಪ್ರಕರಣಗಳಲ್ಲಿ 2,22,000 ರೂ., ಔಟರ್‌ ಪಂಪಾದಲ್ಲಿ 5 ಪ್ರಕರಣಗಳಲ್ಲಿ 19,000 ರೂ. ದಂಡ ವಸೂಲಿ ಮಾಡಲಾಗಿದೆ.
ಡ್ನೂಟಿ ಮ್ಯಾಜಿಸ್ಟ್ರೇಟ್‌ ನೇತೃತ್ವದಲ್ಲಿ ಲೀಗಲ್‌ ಮೆಟ್ರೋಲಜಿ ಸ್ಕ್ವಾಡ್‌ ಅಂಗಡಿ, ಹೊಟೇಲ್‌, ಬಿರಿ ಮತ್ತು ಸ್ಟಾಲ್‌ಗ‌ಳಲ್ಲಿ ತಪಾಸಣೆ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next