Advertisement
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಸನ್ ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ಸಾಮರ್ಥ್ಯ ಮೆರೆದು ಬರೋಬ್ಬರಿ 287 ರನ್ ಬೃಹತ್ ಮೊತ್ತ ಕಲೆ ಹಾಕುವ ಮೂಲಕ ತನ್ನದೇ ದಾಖಲೆ ಮುರಿದು ಹೊಸ ಇತಿಹಾಸ ಬರೆಯಿತು. ಹೈದರಾಬಾದ್ ತಂಡ ಈ ಐಪಿಎಲ್ ನಲ್ಲಿ ಮುಂಬೈ ಎದುರು 277/3 ಇದುವರೆಗಿನ ಐಪಿಎಲ್ ಗರಿಷ್ಠ ದಾಖಲೆಯ ಸ್ಕೋರ್ ಆಗಿತ್ತು.
Related Articles
Advertisement
ಅಬ್ಬರಿಸಿದ ಟ್ರಾವಿಸ್ ಹೆಡ್ ಭರ್ಜರಿ ಶತಕ ಸಿಡಿಸಿ ಔಟಾದರು. 41 ಎಸೆತಗಳಲ್ಲಿ 102 ರನ್ ಗಳಿಸಿದರು.9 ಬೌಂಡರಿ ಮತ್ತು 8 ಭರ್ಜರಿ ಸಿಕ್ಸರ್ ಚಚ್ಚಿ ಆರ್ ಸಿಬಿ ಬೌಲರ್ ಗಳಿಗೆ ಕಂಟಕವಾಗಿ ಕಾಡಿದರು. ಅಭಿಷೇಕ್ ಶರ್ಮ 34(22ಎಸೆತ), ಗಳಿಸಿ ಔಟಾದರು. ಮತ್ತೆ ಅಬ್ಬರಿಸಿದ ಹೆನ್ರಿಕ್ ಕ್ಲಾಸೆನ್ 31 ಎಸೆತಗಳಲ್ಲಿ 67 ರನ್ ಚಚ್ಚಿದರು. 2ಬೌಂಡರಿ ಮತ್ತು 7 ಸಿಕ್ಸರ್ ಗಳ ಮೂಲಕ ಚೆಂಡನ್ನು ಕ್ರೀಡಾಂಗಣದ ಮೂಲೆ ಮೂಲೆಗೆ ತಲುಪಿಸಿದರು. ಏಡನ್ ಮಾರ್ಕ್ರಾಮ್ ಬ್ಯಾಟಿಂಗ್ 32 ರನ್ ಮತ್ತು ಅಬ್ದುಲ್ ಸಮದ್ 10 ಎಸೆತಗಳಲ್ಲಿ 37 ರನ್ ಗಳಿಸಿ ಔಟಾಗದೆ ಉಳಿದರು.
ಬೌಲಿಂಗ್ ಸಾಮರ್ಥ್ಯ ಇರದೇ ಇರುವುದು ಆರ್ ಸಿಬಿ ಪಾಲಿಗೆ ಮುಳುವಾಗಿದೆ.