Advertisement

2025ಕ್ಕೆ 25 ಆಪ್ತ ಸಲಹೆಗಳು: ಸಣ್ಣ ಪುಟ್ಟ ಸಂಗತಿಗಳನ್ನು ಆಸ್ವಾದಿಸೋಣ…

11:07 AM Jan 01, 2025 | Team Udayavani |

ಅಲೆಗಳು ಹರಿಯುತ್ತಿವೆ ಕೃಷ್ಣಾ ನನ್ನ ಮನಸ್ಸು ಅಲೆಯಂತೆ ಹರಿಯುತ್ತಿದೆ ನಿನ್ನ ಕೊಳಲಿನ ಸಂಗೀತವನ್ನು ಕೇಳುತ್ತಿದೆ.ಚಲನರಹಿತ, ದೃಢವಾದ ಬಂಡೆಯಂತೆ, ನಾನು ನಿಂತಿದ್ದೇನೆ,ಸಮಯ ಕಳೆದಂತೆ ಅರ್ಥವಾಗುತ್ತಿಲ್ಲ,ಓ ಮಹಾನ್ ಮನೋರಂಜಕನೇ, ಓ ಕೊಳಲು ಧಾರಕನೇ ! (ಅಲೈಪಾಯುದೆ ಕಣ್ಣ , ಎನ್ ಮನಮಿಗ ಅಲೈಪಾಯುದೆ, ಉನ್ ಆನಂದ ಮೋಹನ ವೇಣುಗಾನಮದಿಲ್) ಎಂದು ಕೃಷ್ಣನನ್ನು ಭಜಿಸಿದಂತೆ ನಮ್ಮ ಮನಸ್ಸಿನ ಆಳದಲ್ಲಿ ಇನ್ನೂ ಹಳೆ ವರ್ಷದ ನೆನಪುಗಳ ಸರಣಿ ಜೀಕುತ್ತಿದ್ದರೂಹೊಸ ವರ್ಷಕ್ಕೆ ನಮ್ಮ ಮನಸ್ಸನ್ನು ತೆರೆದುಕೊಳ್ಳಬೇಕಾದ್ದು ಅನಿವಾರ್ಯ. ನಮ್ಮಲ್ಲಿನ ಬದಲಾವಣೆ ನಮಗಷ್ಟೇ ಅಲ್ಲ ನಮ್ಮ ಆಪ್ತರಿಗೂ ಸಂತೋಷ ತರಲಿ ಎಂಬ ಹಾರೈಕೆಯೊಂದಿಗೆ 2025 ಇಸವಿಗೆ 25 ಆಪ್ತ ಸಲಹೆಗಳು ಇಲ್ಲಿವೆ.

Advertisement

2025ಕ್ಕೆ 25 ಆಪ್ತ ಸಲಹೆಗಳು.
1. ಸಣ್ಣ ಪುಟ್ಟ ಸಂಗತಿಗಳನ್ನು ಆಸ್ವಾದಿಸೋಣ. ಖುಷಿ ಪಡೋಣ.
2. ಇತರರು ಮಾಡಿದ ಚಿಕ್ಕ ಸಹಾಯಕ್ಕೂ ಕೃತಜ್ಞತೆ, ಒಂದು ಥ್ಯಾಂಕ್ಸ್ ಸಲ್ಲಿಸೋಣ.
3. ಅಪ್ರಜ್ಞಾಪೂರ್ವಕವಾಗಿ ನಡೆದ ತಪ್ಪ್ಪುಗಳಿಗೆ ಕ್ಷಮೆ ಕೇಳುವುದರಿಂದ ನಾವು ಸಣ್ಣವರಾಗುವುದಿಲ್ಲ.4. ಪರಿಚಯಸ್ಥರು ಎದುರು ಸಿಕ್ಕಾಗ ನಾವು ನೀಡುವ ಸಣ್ಣ ಮುಗುಳ್ನಗೆ ನಮ್ಮ ಹಾಗೂ ಅವರ ದಿನವನ್ನು ಹಿತವಾಗಿ ಇರಿಸುತ್ತದೆ.
5. ಸಹವರ್ತಿಗಳು ಅಥವಾ ಪರಿಚಯಸ್ಥರು ಮಾಡುವ ಒಳ್ಳೆಯ ಕೆಲಸಗಳಿಗೆ ಒಂದು ಸಣ್ಣ ಅಭಿನಂದನೆ ನಮ್ಮನ್ನು ಇನ್ನಷ್ಟು ಆಪ್ತರನ್ನಾಗಿಸುತ್ತದೆ.
6. ಆಪ್ತರ ಜತೆಗೆ ಒಂದು ಗುಡ್ ಮಾರ್ನಿಂಗ್ ಅಥವಾ ಒಂದು ಗುಡ್ ನೈಟ್ ನಿಮ್ಮ ಹಾಗೂ ಅವರ ಬೆಳಗು ಅಥವಾ ರಾತ್ರಿಗೆ ನೆಮ್ಮದಿ ನೀಡುತ್ತದೆ.
7. ಹಿರಿಯ ಜೀವಗಳಿಗೆ ನಾವು ಮಾಡುವ ಅಪರೂಪದ ಕರೆ ಅವರ ಆಯುಷ್ಯ ಹೆಚ್ಚಿಸುತ್ತದೆ.
8. ಅಸಹಾಯಕರಿಗೆ ನಾವು ಮಾಡುವ ಪುಟ್ಟ ಸಹಾಯ ಅವರ ಪಾಲಿಗೆ ದೊಡ್ಡದೇ ಆಗಿರುತ್ತದೆ.
9. ಅಪರೂಪಕ್ಕೆ ಮನೆಯಲ್ಲಿ , ಆಪ್ತರಿಗೆ ನೀಡುವ ಸರ್‌ಪ್ರೈಸ್ ಖುಷಿಯನ್ನು ಇಮ್ಮಡಿಗೊಳಿಸುತ್ತದೆ.
10.ಯಾವುದೇ ಕಾರಣಕ್ಕೂ ಯಾರನ್ನೂ ಅಳೆದು ತೂಗಿ ಅವರಿಷ್ಟೇ ಎಂದು ನಿರ್ಧರಿಸುವುದು ಬೇಡ. ಅವರು ಹೇಗಿದ್ದಾರೋ ಹಾಗೆಯೇ ಅವರನ್ನು ಒಪ್ಪಿಕೊಳ್ಳೋಣ. ಹಾಗಿದ್ದಾಗ ಸಂಘರ್ಷ ಕಡಿಮೆಯಾಗುತ್ತದೆ.
11. ಪ್ರತಿ ಮನುಷ್ಯನಿಗೂ ಬದಲಾಗುವ ಮತ್ತು ತನ್ನನ್ನೇ ತಾನು ಉತ್ತಮ ಪಡಿಸಿಕೊಳ್ಳುವ ಅವಕಾಶವಿದೆ. ಆದರೆ ಆತನ ಬದಲಾವಣೆಗೆ ನಾವು ಹೊಣೆಗಾರರಲ್ಲ.
12. ಲಘುಹಾಸ್ಯ ಪ್ರಜ್ಞೆ ಬೆಳೆಸಿಕೊಳ್ಳೋಣ. ನಮ್ಮದೇ ದೌರ್ಬಲ್ಯಗಳ ಬಗ್ಗೆ ನಕ್ಕುಬಿಡುವ. ಬೇರೆಯವರದ್ದರ ಬಗ್ಗೆ ಗೌರವವಿರಲಿ.
13. ಮನಸ್ಸಿನ ಮೂಲೆಯಲ್ಲಿಯೂ ಯಾರ ಬಗ್ಗೆಯೂ ಹಾನಿ ಮಾಡುವ ಚಿಂತನೆ ಬರದಿರಲಿ. ಆಗ ನಾವೇ ತಿಳಿಯಾಗುತ್ತಾ ಹೋಗುತ್ತೇವೆ.
14. ಬೇರೆಯವರ ವಸ್ತುವಿಗೆ ಆಸೆಪಡುವುದು ಬೇಡ.
15. ಏನನ್ನೋ ಪಡೆಯಬೇಕೆಂಬ ಭಾವದಿಂದ ಯಾರನ್ನೂ ನೋಡುವುದು ಬೇಡ. ಅಂತಹ ಕನ್ನಡಕ ತೊಟ್ಟಾಗ ಆ ವ್ಯಕ್ತಿಯನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆಯಿದೆ.
16. ಸದಾ ಸತ್ಯ ಮತ್ತು ಪ್ರಾಮಾಣಿಕತೆ ನಮ್ಮ ಅಸ್ತಿತ್ವದ ಭಾಗವಾಗಿರಲಿ.
17. ಯಾರದ್ದೋ ಹುಳುಕುಗಳನ್ನು ಎತ್ತಿ ಆಡುವುದು ಬೇಡ. ‘ನಾನಾಗಿದ್ದರೆ ಎಂದೂ ಹಾಗೆ ಮಾಡುತ್ತಿರಲಿಲ್ಲ’ ಎಂದೂ ಬೇಡ. ಯಾರಿಗೆ ಗೊತ್ತು ಅಂಥ ಪರಿಸ್ಥಿತಿಯಲ್ಲಿ ನಾವೂ ಹಾಗೆಯೇ ನಡೆದುಕೊಳ್ಳಬಹುದು.
18. ಯಾರಾದರೂ ಬಿದ್ದಾಗ ಅವರನ್ನು ನೋಡಿ ನಗುಯವುದು ಬೇಡ. ನಾವು ಬಿದ್ದಾಗಲೂ ಯಾರಾದರೂ ನಕ್ಕಾರು ಎಂಬ ಎಚ್ಚರವಿರಲಿ. ಅವರು ಎದ್ದು ನಿಲ್ಲಲು ನೆರವು ಕೊಡೋಣ.
19. ಯಾರಾದರೂ ಕಷ್ಟಗಳನ್ನು ತೋಡಿಕೊಂಡಾಗ ಕಿವಿಗೊಡೋಣ. ಅವರಿಗೆ ಕನಿಷ್ಟ ಸಮಾಧಾನವಾದರೂ ದೊರೆಯುತ್ತದೆ. ಸಾಧ್ಯವಾದರೆ ಪರಿಹಾರ ಹೇಳೋಣ.
20. ನಮ್ಮಲ್ಲಿರುವ ಶಕ್ತಿಯನ್ನು ಹೂಡಿಕೆ ಮಾಡಬೇಕು. ಅದರಿಂದ ಹಣ ವೃದ್ಧಿಯಾಗಲು ತಾಳ್ಮೆಯಿಂದ ಕಾಯಬೇಕು. ಆತುರದಿಂದ ಅನ್ಯ ಮಾರ್ಗದ ಮೂಲಕ ಸಂಪಾದನೆ ಬೇಡ.
21. ನಮ್ಮ ಜೀವನದಲ್ಲಿ ಬರುವ ತಾತ್ಕಾಲಿಕ ಸಂಗತಿಗಳಿಗೆ ಅಂಟಿಕೊಳ್ಳದೆ, ಸದಾ ನಿಷ್ಕಲ್ಮಶವಾಗಿ ಜೀವನವನ್ನು ಆನಂದಿಸುತ್ತಾ ಜ್ಞಾನದ ಕಡೆಗೆ ಮುನ್ನುಗ್ಗಬೇಕು.
22. ಜಲಪಾತದಿಂದ ಕೆಳಗೆ ಬಿದ್ದ ಬೀಳುತ್ತಿರುವ ನದಿ ವೇಗ ಪಡೆದುಕೊಳ್ಳುವಂತೆ, ಜೀವನದಲ್ಲಿ ಕೆಳಗೆ ಬಿದ್ದಾಗ ಮೈ ಕೊಡವಿ, ಇನ್ನಷ್ಟು ಉತ್ಸಾಹದಿಂದ ಮುನ್ನುಗ್ಗಬೇಕು.
23. ಹೊಸತನವಿಲ್ಲದ ಜೀವನಕ್ಕೆ ಮನೋಬಾಧೆ ಅಂಟಿಕೊಳ್ಳುತ್ತದೆ. ಸದಾ ಹೊಸತನ್ನು ಕಲಿಯುತ್ತಾ, ಹೊಸ ವಿಷಯಗಳನ್ನು ಅಧ್ಯಯನ ಮಾಡುತ್ತಾ, ಹೊಸಬರ ಜತೆ ಬೆರೆಯುತ್ತಾ ಇದ್ದರೆ ಮನಸ್ಸು ಉಲ್ಲಸಿತವಾಗಿರುತ್ತದೆ.
24. ದಿಣ್ಣೆ, ಪರ್ವತಗಳು ಎದುರು ಬಂದಾಗ ಹರಿಯುವ ನೀರು ತಮ್ಮ ಪಥವನ್ನು ಬದಲಿಸುವಂತೆ, ನಮ್ಮ ಜೀವನದಲ್ಲಿಯು ಅನಿವಾರ್ಯದ ಸಂದರ್ಭದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳಬೇಕು.
25. ನಮ್ಮಲ್ಲಿ ಇರುವ ಹಣ, ವಿದ್ಯೆ, ಅಽಕಾರ ಅಹಂಭಾವ ಹುಟ್ಟುಹಾಕದಿರಲಿ. ಇದು ವಿನಯದಿಂದ ಮಾತ್ರ ಸಾಧ್ಯ.

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next