Advertisement

ಶೂಟೌಟ್‌ ತಡೆಯಲು ಶಾಲೆಗಳಲ್ಲಿ ರೋಬೋ

08:22 PM Jul 09, 2023 | Team Udayavani |

ನ್ಯೂಯಾರ್ಕ್‌: ಅಮೆರಿಕದ ಶಾಲೆಗಳಲ್ಲಿ ವಿದ್ಯಾರ್ಥಿಗಳು ಶೂಟೌಟ್‌ ನಡೆಸುವುದು ಸಾಮಾನ್ಯ. ಅದನ್ನು ತಡೆಯುವ ನಿಟ್ಟಿನಲ್ಲಿ ಟೀಮ್‌ ಫ‌ಸ್ಟ್‌ ಟೆಕ್ನಾಲಜೀಸ್‌ ಎಂಬ ಸಂಸ್ಥೆ ಶೂಟೌಟ್‌ ತಡೆಯುವ ಸಾಮರ್ಥ್ಯ ಇರುವ ರೋಬೋಟನ್ನು ಪರಿಚಯಿಸಲು ಮುಂದಾಗಿದೆ.

Advertisement

ನ್ಯೂ ಮೆಕ್ಸಿಕೋದ ಶಾಲೆಯೊಂದರಲ್ಲಿ ಮೊದಲ ಬಾರಿಗೆ ಪ್ರಯೋಗಾರ್ಥವಾಗಿ ಅದನ್ನು ಅಳವಡಿಸಲಾಗಿದೆ. ಒಂದು ರೋಬೋಟ್‌ಗೆ 60 ಸಾವಿರ ಅಮೆರಿಕನ್‌ ಡಾಲರ್‌ನಿಂದ 70 ಸಾವಿರ ಅಮೆರಿಕನ್‌ ಡಾಲರ್‌ ವೆಚ್ಚವಾಗಲಿದೆ. ಶಾಲೆಯಲ್ಲಿನ ವಿದ್ಯಾರ್ಥಿಗಳನ್ನು ಗಮನಿಸಿ, ಅಧ್ಯಯನ ನಡೆಸುತ್ತದೆ. ಜತೆಗೆ ವ್ಯಗ್ರರಾಗಿ ವರ್ತಿಸುವ ವಿದ್ಯಾರ್ಥಿಗಳನ್ನು ಅದು ನಿಕಟವಾಗಿ ಗಮನಿಸಲಾಗಿದೆ. ಒಂದು ವೇಳೆ ವಿದ್ಯಾರ್ಥಿ ಗುಂಡು ಹಾರಿಸುವ ಅಥವಾ ಹಿಂಸಾ ಪ್ರವೃತ್ತಿಯನ್ನು ವ್ಯಕ್ತಪಡಿಸುತ್ತಾನೆ ಎಂದಾದರೆ ಅದು ಭದ್ರತಾ ವ್ಯವಸ್ಥೆಗೆ ಸೂಚನೆ ನೀಡುತ್ತದೆ. ಜತೆಗೆ ಆತನ ವಿಡಿಯೋವನ್ನೂ ಕೂಡ ರವಾನಿಸುತ್ತದೆ. ಅದರಲ್ಲಿ ಇರುವ ಮುಖ ಗುರುತಿಸುವ ತಂತ್ರಜ್ಞಾನದ ವ್ಯವಸ್ಥೆ ಹೊಂದಿರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next