Advertisement
ನಾವೂರು ನಿವಾಸಿ ಜಯಂತ ಬಂಧಿತ ಆರೋಪಿ. ನಾವೂರು ಶಾಲೆಯ ವಾರ್ಷಿಕೋತ್ಸವ ಡಿ. 14ರಂದು ನಡೆದಿದ್ದು, ಯುವತಿಯು ಮನೆಯವರ ಜತೆಗೆ ಕಾರ್ಯಕ್ರಮ ನೋಡಲು ಆಗಮಿಸಿದ್ದು, ಈ ವೇಳೆ ಆರೋಪಿ ಆಕೆಯನ್ನು ಬಲತ್ಕಾರವಾಗಿ ಎಳೆದೊಯ್ದು ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ.ಸಂತ್ರಸ್ತ ಯುವತಿ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.