Advertisement

ಮುಂದಾಲೋಚನೆ ಇಲ್ಲದ ರಸ್ತೆ ಕಾಮಗಾರಿ: ಆಕ್ರೋಶ

06:10 PM Nov 11, 2021 | Team Udayavani |

ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 150 ಎ. ರಸ್ತೆ ಕಾಮಗಾರಿ ಕೆಳಭಾಗದಲ್ಲಿ ಪುರಸಭೆ ವ್ಯಾಪ್ತಿಯ ಕುಡಿಯುವ ನೀರಿನ ಪೈಪ್‌ ಅಳವಡಿಸಲಾಗುತ್ತಿದ್ದು, ಮುಂದೊಂದು ದಿನ ಪೈಪ್‌ ಒಡೆದು ಹೋದರೆ ತೀವ್ರ ಸಮಸ್ಯೆ ಉಂಟಾಗುತ್ತದೆ.

Advertisement

ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ. ಕಳೆದ ಕೆಲ ತಿಂಗಳಿಂದ ಪಟ್ಟಣದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 150ಎ ರಸ್ತೆ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ ಅಭಿವೃದ್ಧಿ ಸಾರ್ವಜನಿಕರ ವಲಯದಲ್ಲಿ ಖುಷಿ ಉಂಟುಮಾಡಿದೆ.

ಇದನ್ನೂ ಓದಿ:- “ಹಲಾಲ್‌’ ಹಣ ದೇಶ ವಿರೋಧಿ ಕೃತ್ಯಗಳಿಗೆ ಬಳಕೆ

ಅದೇ ಸಾರ್ವಜನಿಕರು ಅವೈಜ್ಞಾನಿಕ ಪೈಪ್‌ಲೈನ್‌ ಅಳವಡಿಕೆಯನ್ನು ಕಂಡು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕಾಮಗಾರಿಯಲ್ಲಿ ಆಧುನಿಕತೆ ಅಷ್ಟೊಂದು ಅಭಿವೃದ್ಧಿ ಯಾಗಿದ್ದರೂ, ದೂರದೃಷ್ಟಿಯಿಲ್ಲದೆ ಪೈಪ್‌ ಲೈನ್‌ ಅಳವಡಿಸುತ್ತಿರುವುದು ವಿಷಾದ ನೀಯ. ಸಾಮಾನ್ಯ ಸಾರ್ವಜನಿಕರಿಗೆ ತಿಳಿಯುತ್ತಿರುವ ಸಾಮಾನ್ಯ ಸಂಗತಿ, ರಸ್ತೆಯ ಎಂಜಿನಿಯರ್‌ಗೆ ತಿಳಿಯುತ್ತಿಲ್ಲವೇ ಎಂಬ ಪ್ರಶ್ನೆ ಮೂಡಿದೆ. ಪುರಸಭೆ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕಾಗಿದೆ.

ರಸ್ತೆ ಮಧ್ಯಭಾಗದಲ್ಲಿ ಪೈಪ್‌ಲೈನ್‌: ರಸ್ತೆ ಕೆಳ ಭಾಗದಲ್ಲಿ ಇರುವ ಪೈಪ್‌ ಕಾಲ ಕಳೆದಂತೆ ತನ್ನ ಗುಣಮಟ್ಟವನ್ನು ಕಳೆದುಕೊಂಡು ಒಡೆದು ಹೋದರೆ ಅದನ್ನು ಸರಿಪಡಿಸುವುದು ಹೇಗೆ ಹಾಗೂ ಅದನ್ನು ಸರಿಪಡಿಸಲು ಮತ್ತೆ ರಸ್ತೆಯನ್ನು ಕೀಳ ಬೇಕಾಗುತ್ತದೆ. ಇದರಿಂದ ರಸ್ತೆ ಹಾಳಾಗಿ ಹೋಗುತ್ತದೆ. ಒಂದು ವೇಳೆ ರಸ್ತೆ ಕೆಳಭಾಗದಲ್ಲಿ ಪೈಪ್‌ ನಲ್ಲಿ ನೀರು ಸೋರಿಕೆಯಾದರೂ ರಸ್ತೆಯ ಗುಣಮಟ್ಟ ಕಳೆದುಕೊಳ್ಳುತ್ತದೆ. ಇದರ ಬಗ್ಗೆ ಸಾಮಾನ್ಯ ತಿಳವಳಿಕೆ ಸಂಬಂಧಪಟ್ಟ ಎಂಜಿನಿಯರ್‌ಗಳಿಗೆ ಇಲ್ಲಾವಾಗಿದೆಯೇ ಎಂಬ ಆಶ್ಚರ್ಯ ಉಂಟಾಗುತ್ತಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next