Advertisement

Bengaluru: 2023ಕ್ಕೆ ಹೋಲಿಸಿದ್ರೆ 2024ರಲ್ಲಿ ಶೇ.4 ಅಪಘಾತ ಇಳಿಕೆ

10:43 AM Jan 02, 2025 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ಕಳೆದ 2 ವರ್ಷಗಳಿಗೆ ಹೋಲಿಸಿದರೆ 2024ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗಿದೆ.

Advertisement

2023ಕ್ಕೆ ಹೋಲಿಸಿ ದರೆ 2024ರಲ್ಲಿ ಸಂಭವಿಸಿದ ಅಪಘಾತಗಳ ಸಂಖ್ಯೆಯಲ್ಲಿ ಶೇ 3.97ರಷ್ಟು ಇಳಿಕೆಯಾಗಿದೆ. ಆದರೆ, ಸ್ವಯಂ ಅಪಘಾತಗಳ ಸಂಖ್ಯೆಯಲ್ಲಿ ಶೇ.3.34ರಷ್ಟು ಪ್ರಮಾಣ ದಲ್ಲಿ ಏರಿಕೆಯಾಗಿರುವುದು ಅಂಕಿ-ಅಂಶ ಗಳಲ್ಲಿ ಕಂಡು ಬಂದಿದೆ.

ಮತ್ತೂಂದೆಡೆ ಸಂಚಾರ ನಿಯಮ ಉಲ್ಲಂಘಿಸಿದವರಿಂದ 2024ರಲ್ಲಿ 80.90 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ. ಗಂಭೀರ ಅಪಘಾತಗಳ ಪ್ರಮಾಣವು ಶೇ. 1.26ರಷ್ಟು ಇಳಿಕೆ ಕಂಡಿದೆ. ಈ ಅ‌ಪಘಾತಗಳಿಂದ ಉಂಟಾಗುವ ಸಾವುಗಳ ಪ್ರಮಾ ಣವು ಶೇ 1.9ರಷ್ಟು ಇಳಿಕೆಯಾಗಿದೆ. ಗಂಭೀ ರವಲ್ಲದ ಅಪಘಾತಗಳ ಪ್ರಮಾಣವು ಶೇ 4.57ರಷ್ಟು ಇಳಿಕೆ ಕಂಡಿದೆ. ಇನ್ನು ಪಾದಚಾರಿ ಅಪಘಾತಗಳ ಪ್ರಮಾಣ ಕಡಿಮೆಯಾಗಿದೆ.

2023ಕ್ಕೆ ಹೋಲಿಸಿದರೆ 2024ರಲ್ಲಿ ಶೇ. 23.17ರಷ್ಟು ಕಡಿಮೆಯಾಗಿದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಆರೋಪದ ಮೇರೆಗೆ ಒಟುc 12.25 ಲಕ್ಷ ವಾಹನಗಳ ಪರಿಶೀಲಿಸಿದ್ದು, 23,574 ಪ್ರಕರಣ ದಾಖಲಿಸಲಾಗಿದೆ. ಒಟ್ಟು ಶೇ. 1.87 ರಷ್ಟು ಪಾಸಿಟಿವ್‌ ಬಂದಿದೆ. ಶಾಲಾ ವಾಹನ ಚಾಲಕರ ವಿರುದ್ಧ 201, ಖಾಸ ಗಿ ಬಸ್‌ ಚಾಲಕರ ವಿರುದ್ಧ 83 ಹಾಗೂ ವಾ ಟರ್‌ ಟ್ಯಾಂಕರ್‌ಗಳ ಚಾಲಕರ ವಿರುದ್ಧ 67 ಕೇಸ್‌ ಗಳನ್ನು 2024ರಲ್ಲಿ ದಾಖಲಿಸಲಾಗಿದೆ.

ವ್ಹೀಲಿಂಗ್‌ ಪ್ರಕರಣಗಳು: ನಗರದಲ್ಲಿ ಅಪ ಯಕಾರಿ ವ್ಹೀಲಿಂಗ್‌ ಮಾಡುತ್ತಿದ್ದ ಪುಂಡರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ. 2024ರಲ್ಲಿ 532 ಪ್ರಕರಣ ದಾಖ ಲಿಸ ಲಾಗಿದ್ದು, 520 ವಾಹನಗಳ ಜಪ್ತಿ ಮಾಡಿ, 456 ಮಂದಿ ಬಂಧಿಸಲಾಗಿದೆ. 121 ಮಂದಿ ಅಪ್ರಾಪ್ತರ ವಿರುದ್ಧ ಕ್ರಮಕೈಗೊಳ್ಳ ಲಾಗಿದೆ. ಹಾಗೆಯೇ 79 ಮಂದಿ ಅಪ್ರಾಪ್ತ ಪೋಷಕರ ವಿರುದ್ಧ ಕ್ರಮಕೈಗೊಂಡಿದ್ದು,146 ಮಂದಿ ಯ ಡಿಲ್‌ ರದ್ದುಗೊಳಿಸಲು ಸಾರಿಗೆ ಇಲಾಖೆಗೆ ಪತ್ರ ಬರೆಯಲಾಗಿದೆ. 246 ಆರ್‌.ಸಿ ಕಾರ್ಡ್‌ ರದ್ದುಗೊಳಿಸಲು ಸಾರಿಗೆ ಇಲಾಖೆಗೆ ಶಿಫಾರಸು ಮಾಡಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next