Advertisement

ಹೊಸ ಶಿಕ್ಷಣ ನೀತಿ ಹಿಂಪಡೆಯಿರಿ

12:16 PM Aug 10, 2020 | Suhan S |

ಕೊಪ್ಪಳ: ರಾಷ್ಟ್ರೀಯ ಶಿಕ್ಷಣ ನೀತಿ-2020 ಕಾರ್ಪೊರೇಟ್‌ ಪರವಾಗಿದೆ. ಬಡವರ ವಿರೋಧಿ  ಹಾಗೂ ತಾರತಮ್ಯ ಧೋರಣೆಯನ್ನು ಹೊಂದಿದೆ. ಇದನ್ನು ಕೂಡಲೇ ಹಿಂಪಡೆಯಬೇಕು ಎಂದು ಎಐಎಸ್‌ಇಸಿ ರಾಜ್ಯಾಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಒತ್ತಾಯಿಸಿದರು.

Advertisement

ಈ ಕುರಿತು ಪ್ರಕಟಣೆ ನೀಡಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಫ್ಯಾಸೀಸ್‌ವಾದಿ ಕೇಂದ್ರೀಕರಣದ ಗುರಿ ಹೊಂದಿದ್ದು, ದೇಶದ ಪ್ರಜಾತಾಂತ್ರಿಕ, ವೈಜ್ಞಾನಿಕ, ಮತ್ತು ಧರ್ಮ ನಿರಪೇಕ್ಷ ಶಿಕ್ಷಣ ಪದ್ಧತಿಯ ಮೇಲಿನ ದಾಳಿಯಾಗಿದೆ. ನಮ್ಮ ದೇಶದ ಶಿಕ್ಷಣ ತಜ್ಞರ, ವಿಜ್ಞಾನಿಗಳ, ಬುದ್ಧಿಜೀವಿಗಳ, ಶಿಕ್ಷಕರ, ಪೋಷಕರ ಮತ್ತು ವಿದ್ಯಾರ್ಥಿಗಳ ವಿರೋಧ ಹಾಗೂ ಮೌಲ್ಯಯುತ ಅಭಿಪ್ರಾಯಗಳನ್ನು ಕಡೆಗಣಿಸಿ, ಕೇಂದ್ರ ಸರಕಾರವು ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ಜಾರಿಗೊಳಿಸಿದೆ. ಇಡೀ ದೇಶವೇ ಕೋವಿಡ್‌ ಮಹಾಮಾರಿಯ ವಿರುದ್ಧ ಹೋರಾಡುತ್ತಿರಬೇಕಾದರೆ ಸರಕಾರವು ಇದನ್ನು ದುರುಪಯೋಗ ಮಾಡಿಕೊಂಡು ನಾಡಿನ ಜನರೊಂದಿಗೆ ಹಾಗೂ ಸಂಸತ್ತಿನಲ್ಲಿ ಚರ್ಚಿಸದೆ, ಶಿಕ್ಷಣ ವಿರೋಧಿ ನೀತಿ ಜಾರಿಗೊಳಿಸಿರುವುದು ಖಂಡನಾರ್ಹ ಎಂದರು.

ಅತೀವ ಖಾಸಗೀಕರಣ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಶಿಕ್ಷಣದ ವ್ಯಾಪಾರೀಕರಣ. ಬಜೆಟ್‌ನಲ್ಲಿ ಶಿಕ್ಷಣಕ್ಕೆ ಮೀಸಲಿಡುತ್ತಿರುವ ಹಣಕಾಸಿನಲ್ಲಿ ಕುಸಿತ, ಮೂಲ ಸೌಕರ್ಯ ಮತ್ತು ಶಿಕ್ಷಕರ ಕೊರತೆ, ಸರ್ಕಾರಿ ಸಂಸ್ಥೆಗಳಲ್ಲಿ ಹೆಚ್ಚುತ್ತಿರುವ ಶಿಕ್ಷಣದ ವೆಚ್ಚ. ಶೈಕ್ಷಣಿಕ ಹಾಗೂ ಆಡಳಿತಾತ್ಮಕ ವಿಷಯಗಳಲ್ಲಿ ಸರ್ಕಾರದ ಹಸ್ತಕ್ಷೇಪ, ಅಧಿಕಾರದಲ್ಲಿರುವ ಪಕ್ಷದ ಸಿದ್ಧಾಂತಕ್ಕೆ ಅನುಗುಣವಾಗಿ ಪಠ್ಯಕ್ರಮದಲ್ಲಿ, ಪಠ್ಯಪುಸ್ತಕಗಳಲ್ಲಿ ಮಾರ್ಪಾಡುಗಳು. ಎನ್‌ಇಪಿ ಇದ್ಯಾವುದೇ ಸಮಸ್ಯೆಗಳಿಗೆ ಪರಿಹಾರ ಸೂಚಿಸಿಲ್ಲ. ಬದಲಿಗೆ ಈ ನೀತಿ ಜಾರಿಯಾದರೆ ಎಲ್ಲ ಸಮಸ್ಯೆಗಳು ಮತ್ತಷ್ಟು ಉಲ್ಬಣಗಳ್ಳಲಿವೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next