Advertisement
ಇಲ್ಲಿ ಸುಮಾರು 1938ರಲ್ಲಿ ನಿರ್ಮಾಣ ಆಗಿರಬಹುದಾದ ಹಳೆ ಕಟ್ಟಡದಲ್ಲಿ ಬಿಇಒ ಕಚೇರಿ ಕಾರ್ಯ ನಿರ್ವಹಿಸುತಿತ್ತು. ಪುತ್ತೂರು, ಕಡಬ ತಾಲೂಕಿನ 23 ಸರಕಾರಿ ಪ್ರೌಢಶಾಲೆಗಳು, 181 ಸರಕಾರಿ ಪ್ರಾ. ಶಾಲೆಗಳು, 22 ಅನುದಾನಿತ ಪ್ರೌಢ ಶಾಲೆಗಳು, 13 ಅನುದಾನಿತ ಪ್ರಾಥಮಿಕ ಶಾಲೆಗಳು, 36 ಅನುದಾನ ರಹಿತ ಪ್ರೌಢಶಾಲೆಗಳು ಹಾಗೂ 39 ಅನುದಾನರಹಿತ ಪ್ರಾಥಮಿಕ ಶಾಲೆಗಳ ಕೇಂದ್ರವಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಇತ್ತೀಚೆಗಿನ ದಿನದಲ್ಲಿ ಒಂದು ರೀತಿಯಲ್ಲಿ ಸಮಸ್ಯೆಯ ಗೂಡಾಗಿತ್ತು.
ಹಿಂದಿನ ಶಾಸಕ ಮಠಂದೂರು ಅವಧಿ ಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಂಕೀರ್ಣ (ತಾಲೂಕು ಶಿಕ್ಷಣ ಸೌಧ) ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದರು. ಮೊದಲ ಹಂತದಲ್ಲಿ 80 ಲಕ್ಷ ರೂ. ಬಿಡುಗಡೆಗೊಂಡಿತ್ತು. ಕಳೆದ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲೇ ನೆಲ್ಲಿಕಟ್ಟೆ ಶಿಕ್ಷಣ ಸಂಪನ್ಮೂಲ ಕೇಂದ್ರದ ಹಿಂಭಾಗದ ಸರಕಾರಿ ಶಾಲೆಯ ಜಮೀನಿನ ಒಂದು ಪಾರ್ಶ್ವದಲ್ಲಿ ನೂತನ ಶಿಕ್ಷಣ ಸೌಧ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದಿತ್ತು. 3 ಮಹಡಿಗಳ ಶಿಕ್ಷಣ ಸೌಧದ ನಕಾಶೆ ರೂಪಿಸಲಾಗಿತ್ತು. ಇದರಲ್ಲಿ ಬಿಇಒ ಕಚೇರಿ, ಬಿಆರ್‌ಸಿ ಕಚೇರಿಗಳು, ತರಬೇತಿ ಕೊಠಡಿ, ಸಭಾಂಗಣ ಇತ್ಯಾದಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. 80 ಲಕ್ಷ ರೂ.ನಲ್ಲಿ ನೆಲ ಮಹಡಿ ಮಾತ್ರ ನಿರ್ಮಿಸಲು ಉದ್ದೇಶಿಸಲಾಗಿತ್ತು. ಶಾಸಕರು ಬದಲಾದರು ಜಾಗವೂ ಬದಲಾಯಿತು
ಚುನಾವಣೆಯ ಅನಂತರ ಪುತ್ತೂರಿಗೆ ಹೊಸ ಶಾಸಕರು ಬಂದರು. ಶಾಸಕ ಅಶೋಕ್ ಕುಮಾರ್ ಅವರು ತನ್ನ ಯೋಜನೆಯ ಪ್ರಕಾರ ನೆಲ್ಲಿಕಟ್ಟೆಯಲ್ಲಿ ನಿರ್ಮಾಣವಾಗಬೇಕಿದ್ದ ಬಿಇಒ ಕಚೇರಿಯನ್ನು ಹಳೆಯ ಬಿಇಒ ಕಚೇರಿ ಇದ್ದ ಸ್ಥಳಕ್ಕೆ ಬದಲಾಯಿಸಿದರು. ಹೀಗಾಗಿ ತಾತ್ಕಾಲಿಕ ನೆಲೆಯಲ್ಲಿ ಡಾ|ಶಿವರಾಮ ಕಾರಂತ ಪ್ರೌಢಶಾಲೆಯ ಕಟ್ಟಡಕ್ಕೆ ಬಿಇಒ ಕಚೇರಿಯನ್ನು ಸ್ಥಳಾಂತರಿಸಲಾಯಿತು. ಹಳೆಯ ಬಿಇಒ ಕಟ್ಟಡವನ್ನು ಕೆಡವಲಾಯಿತು. ಅಲ್ಲಿ ಹೊಸ ಕಟ್ಟಡಕ್ಕೆ ಮತ್ತೂಮ್ಮೆ ಶಿಲಾನ್ಯಾಸ ನಡೆಸಲಾಯಿತು. ಆರಂಭಿಕ ಯೋಜನೆಯಂತೆ 80 ಲಕ್ಷ ರೂ.ಬಜೆಟ್‌ನಲ್ಲಿ ನೆಲ ಮಹಡಿ ನಿರ್ಮಾಣಗೊಂಡು ಉದ್ಘಾಟನೆ ನೆರವೇರಿಸಿ ಅನಂತರ ಅನುದಾನ ಲಭ್ಯವಾದಂತೆ ಉಳಿದ 2 ಅಂತಸ್ತು ನಿರ್ಮಾಣದ ಯೋಜನೆಯು ಇಲ್ಲಿದೆ.
Related Articles
– ಅಶೋಕ್ ಕುಮಾರ್ ರೈ, ಶಾಸಕ, ಪುತ್ತೂರು
Advertisement
ಬಿಇಒ ಕಚೇರಿ ಕಟ್ಟಡ ನಿರ್ಮಾಣ ಪ್ರಗತಿಯ ಲ್ಲಿದೆ. ಡಿಸೆಂಬರ್ ವೇಳೆ ಕಟ್ಟಡದ ಬಹುತೇಕ ಕೆಲಸ ಪೂರ್ಣಗೊಳಿಸುವ ಬಗ್ಗೆ ಗುತ್ತಿಗೆದಾರರು ತಿಳಿಸಿದ್ದಾರೆ.– ಲೋಕೇಶ್ ಎಸ್.ಆರ್., ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು