Advertisement

Education Revolution: ಪದವಿ, ಪಿಜಿಯಲ್ಲಿ ಇಷ್ಟದ ಕೋರ್ಸ್‌ ಆಯ್ಕೆ ಅವಕಾಶ: ಯುಜಿಸಿ

02:16 AM Dec 07, 2024 | Team Udayavani |

ಹೊಸದಿಲ್ಲಿ: ಪಿಯುಸಿಯಲ್ಲಿ ಯಾವುದೇ ವಿಷಯ ಓದಿದ್ದರೂ ಪದವಿಯಲ್ಲಿ ಅಥವಾ ಸ್ನಾತಕೋತ್ತರ ಪದವಿಯಲ್ಲಿ ತಮ್ಮಿಷ್ಟದ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬಹುದು. ಕಾಲೇಜುಗಳು ಅವಕಾಶ ನೀಡಿದರೆ ವರ್ಷಕ್ಕೆ 2 ಬಾರಿ ಪ್ರವೇಶ ಪಡೆದುಕೊಳ್ಳಬಹುದು. ಒಂದೇ ಬಾರಿ ಒಬ್ಬ ವಿದ್ಯಾರ್ಥಿ 2 ಪದವಿ ಪಡೆಯಬಹುದು.

Advertisement

ಇವೆಲ್ಲಕ್ಕೂ ಅವಕಾಶ ಒದಗಿಸಿಕೊಡಲು ದೇಶದ ಉನ್ನತ ಶಿಕ್ಷಣದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಮುಂದಾಗಿರುವ ಯುಜಿಸಿ, ಹೊಸ ನಿಯಮಗಳ ಕರಡನ್ನು ಗುರುವಾರ ಬಿಡುಗಡೆ ಮಾಡಿದೆ. ಭಾರತದ ಶಿಕ್ಷಣವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಿರುವ ಯುಜಿಸಿ ಈ ಹೊಸ ನಿಯಮಗಳ ಜಾರಿಗೆ ಮುಂದಾಗಿದೆ. ಕೇಂದ್ರ, ರಾಜ್ಯ ಸರ್ಕಾರಗಳು, ವಿವಿಗಳಿಂದ ಪ್ರತಿಕ್ರಿಯೆ ಕೇಳಿದೆ.

“ವಿಶ್ವ ವಿದ್ಯಾಲಯಗಳು ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ, ಕಲಿಕಾ ಹಿನ್ನೆಲೆ ಯಾವುದೇ ಇದ್ದರೂ ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ತಮ್ಮಿಷ್ಟದ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬಹುದು. ಉದಾಹರಣೆಗೆ- ಮಾನವಿಕ ವಿಭಾಗದಲ್ಲಿ ಪದವಿ ಪಡೆದ ವಿದ್ಯಾರ್ಥಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌, ಗಣಿತ (ಸ್ಟೆಮ್‌) ವಿಷಯದಲ್ಲಿ ಪಿಜಿ ಮಾಡಬಹುದು.

ವರ್ಷಕ್ಕೆ 2 ಬಾರಿ ಪ್ರವೇಶ ನೀಡಲು ಈಗಾಗಲೇ 6 ವಿಶ್ವವಿದ್ಯಾಲಯಗಳು ಒಪ್ಪಿಗೆ ಕೊಟ್ಟಿವೆ. ಇದು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುತ್ತದೆ’ ಎಂದು ಯುಜಿಸಿ ಮುಖ್ಯಸ್ಥ ಜಗದೀಶ್‌ ಕುಮಾರ್‌ ಹೇಳಿದ್ದಾರೆ.

ಏನೆಲ್ಲಾ ಬದಲಾವಣೆ?:
– ಕಾಲೇಜುಗಳು ಅವಕಾಶ ಕೊಟ್ಟರೆ ವರ್ಷಕ್ಕೆ 2 ಬಾರಿ ಪ್ರವೇಶ

Advertisement

– ಒಂದೇ ಬಾರಿ 2 ಪದವಿ/ಸ್ನಾತಕೋತ್ತರ ಪದವಿ ಗಳಿಸಬಹುದು

– ಕಲಿಕಾ ಹಿನ್ನೆಲೆ ಭಿನ್ನವಾಗಿದ್ದರೂ ಇಷ್ಟದ ಕೋರ್ಸ್‌ ಆಯ್ಕೆ

– ವಿದ್ಯಾರ್ಥಿಗಳ ಹಾಜರಿ ನಿರ್ಧರಿಸುವ ಅವಕಾಶ ಕಾಲೇಜಿಗೆ

– ಒಂದು ವಿಭಾಗದಲ್ಲಿ ಕನಿಷ್ಠ 50 ಅಂಕಗಳನ್ನು ಪಡೆದರೆ ಸಾಕು

Advertisement

Udayavani is now on Telegram. Click here to join our channel and stay updated with the latest news.

Next