Advertisement

Decision Awaited: 2025ಕ್ಕೆ ನೀಟ್‌ ಆನ್‌ಲೈನ್‌: ಶೀಘ್ರವೇ ನಿರ್ಧಾರ

03:30 AM Dec 18, 2024 | Team Udayavani |

ಹೊಸದಿಲ್ಲಿ: ಮುಂಬರುವ ವರ್ಷದಿಂದ ವೈದ್ಯಕೀಯ ಪ್ರವೇಶಕ್ಕಾಗಿರುವ ನೀಟ್‌ ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸಬೇಕೇ ಅಥವಾ ಪೆನ್‌-ಪೇಪರ್‌ ಮಾದರಿಯಲ್ಲೇ ಮುಂದುವರಿಸಬೇಕೇ ಎಂಬ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಮಂಗಳವಾರ ಹೇಳಿದ್ದಾರೆ.

Advertisement

ಈ ಬಗ್ಗೆ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರೊಂದಿಗೂ 2 ಬಾರಿ ಸಭೆ ನಡೆಸಿ ಚರ್ಚಿಸಲಾಗಿದೆ ಎಂದು ಹೇಳಿರುವ ಅವರು, ಯಾವುದೇ ನಿರ್ಧಾರ ಕೈಗೊಂಡ ರೂ ಅದು 2025ರಿಂದಲೇ ಜಾರಿಯಾಗುತ್ತದೆ ಎಂದಿದ್ದಾರೆ. ಭಾರತದಲ್ಲಿ ಅತೀ ಹೆಚ್ಚು ಮಂದಿ ಬರೆಯುವ ಪರೀಕ್ಷೆ ನೀಟ್‌. 2024ರಲ್ಲಿ 24 ಲಕ್ಷ ಮಂದಿ ಪರೀಕ್ಷೆ ಬರೆದಿದ್ದರು.

ದೇಶದಲ್ಲಿ ಒಟ್ಟು 1,08,000 ವೈದ್ಯಕೀಯ ಸೀಟುಗಳಿದ್ದು, ಈ ಪೈಕಿ 56 ಸಾವಿರ ಸರಕಾರಿ ಕಾಲೇಜುಗಳಲ್ಲಿದ್ದರೆ, 52 ಸಾವಿರ ಖಾಸಗಿ ಕಾಲೇಜುಗಳಲ್ಲಿವೆ. ಕಳೆದ ವರ್ಷ ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ಉಂಟಾದ ಹಿನ್ನೆಲೆಯಲ್ಲಿ ನೀಟ್‌ಗೂ ಆನ್‌ಲೈನ್‌ ಪರೀಕ್ಷೆ ಜಾರಿ ಮಾಡುವ ಬಗ್ಗೆ ಚಿಂತನೆ ಆರಂಭವಾಗಿದೆ. ಪ್ರಸ್ತುತ ಪೆನ್‌-ಪೇಪರ್‌ ಮೂಲಕ ಪರೀಕ್ಷೆ ಮಾದರಿ ಜಾರಿಯಲ್ಲಿದೆ.

ಎನ್‌ಟಿಎಯಿಂದ ಉನ್ನತ ಶಿಕ್ಷಣಕ್ಕಷ್ಟೇ ಪರೀಕ್ಷೆ
ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ 2025ರಲ್ಲಿ ಕೇವಲ ಉನ್ನತ ಶಿಕ್ಷಣಕ್ಕೆ ಮಾತ್ರ ಪರೀಕ್ಷೆಗಳನ್ನು ನಡೆಸುತ್ತದೆ. ಯಾವುದೇ ಉದ್ಯೋಗ ಭರ್ತಿ ಪರೀಕ್ಷೆಗಳನ್ನು ನಡೆಸುವುದಿಲ್ಲ ಎಂದು ಪ್ರಧಾನ್‌ ಹೇಳಿದ್ದಾರೆ.

2025ರಿಂದ ಎನ್‌ಸಿಇಆರ್‌ಟಿ ಪುಸ್ತಕಗಳ ಬೆಲೆಯಲ್ಲಿ ಇಳಿಕೆ
2025ರಿಂದ ಕೆಲವು ಎನ್‌ಸಿಆರ್‌ಇಟಿ ತರಗತಿಗಳ ಪುಸ್ತಕಗಳ ಬೆಲೆ ಕಡಿಮೆಯಾಗಲಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ. ಪ್ರಸ್ತುತ ನಾವು 5 ಕೋಟಿ ಪುಸ್ತಕಗಳನ್ನು ಮುದ್ರಣ ಮಾಡುತ್ತಿದ್ದೇವೆ. ಇದು ಮುಂದಿನ ವರ್ಷಕ್ಕೆ 15 ಕೋಟಿಗೆ ಏರಿಕೆಯಾಗಲಿದೆ. ಹೀಗಾಗಿ ಪುಸ್ತಕಗಳ ದರವೂ ಇಳಿಕೆ ಯಾ ಗುವ ನಿರೀಕ್ಷೆಯಿದೆ. ಅಲ್ಲದೆ 9 ಮತ್ತು 12ನೇ ತರಗತಿಗಳಿಗೆ 2026ಕ್ಕೆ ಹೊಸ ಪುಸ್ತಕಗಳು ದೊರೆಯಲಿವೆ ಎಂದು ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next