Advertisement

Ullal: ಕೃಷಿ ಮೇಳಗಳಿಂದ ಕೃಷಿಕರ ಅಭಿವೃದ್ಧಿ ಸಾಧ್ಯ: ಡಾ| ಎಂ. ಎನ್‌. ರಾಜೇಂದ್ರ ಕುಮಾರ್‌

12:37 AM Dec 07, 2024 | Team Udayavani |

ಉಳ್ಳಾಲ: ಹವಾಮಾನ ವೈಪರೀತ್ಯದಿಂದ ಕೃಷಿ ಅತಂತ್ರ ಸ್ಥಿತಿಯಲ್ಲಿದ್ದು, ಇಂದಿನ ಹವಾಮಾನಕ್ಕೆ ಅನುಗುಣವಾಗಿ ಕೃಷಿಯಲ್ಲಿ ಹೊಸ ಸಾಧ್ಯತೆಗಳ ಚರ್ಚೆ ಮತ್ತು ಮಾಹಿತಿ ಇಂತಹ ಕೃಷಿ ಮೇಳಗಳಿಂದ ಕೃಷಿಕರಿಗೆ ಸಿಕ್ಕಾಗ ಕೃಷಿಕರು ಆರ್ಥಿಕವಾಗಿ ಅಭಿವೃದ್ಧಿಯಾಗಲು ಸಾಧ್ಯ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ. ಎನ್‌. ರಾಜೇಂದ್ರ ಕುಮಾರ್‌ ಅಭಿಪ್ರಾಯಪಟ್ಟರು.

Advertisement

ಉಳ್ಳಾಲ ತಾಲೂಕಿನ ಕೈರಂಗಳ ಪುಣ್ಯಕೋಟಿ ನಗರದ ಶಾರದಾ ಗಣಪತಿ ವಿದ್ಯಾಕೇಂದ್ರದ ಆಶ್ರಯದಲ್ಲಿ ಶುಕ್ರವಾರ ಡಿ. 8ರ ರವಿವಾರದವರೆಗೆ ಮೂರು ದಿನಗಳ ಕಾಲ ನಡೆಯಲಿರುವ ರಾಜ್ಯಮಟ್ಟದ ಶಿಕ್ಷಣ, ಉದ್ಯೋಗ, ಕೃಷಿ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಒಂದೆಡೆ ಕೃಷಿ ಸಂಸ್ಕೃತಿ ನಶಿಸುತ್ತಿದೆ. ಗೇರುಬೀಜ ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ, ಭತ್ತದ ಕೃಷಿ ನಷ್ಟದಲ್ಲಿದೆ. ಅಡಿಕೆ ಕೃಷಿ ಅತಂತ್ರದಲ್ಲಿದ್ದು, ವಿಷಕಾರಿ ಅಂಶವಿದೆ ಎನ್ನುವ ಮಾಹಿತಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕೃಷಿ ಮೇಳ ಏರ್ಪಡಿಸುವ ಮೂಲಕ ಟಿ.ಜಿ. ರಾಜಾರಾಮ ಭಟ್‌ ಅವರು ನಗರದಲ್ಲಿ ಏರ್ಪಡಿಸುವ ಶಿಕ್ಷಣ ಮತ್ತು ಉದ್ಯೋಗ ಮೇಳವನ್ನು ಗ್ರಾಮೀಣ ಪ್ರದೇಶದಲ್ಲಿ ಆರಂಭಿಸುವ ಮೂಲಕ ಸಾಧನೆಯನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.

ವಿಶ್ರಾಂತ ಪ್ರಾಂಶುಪಾಲ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಕೃಷಿ ಆರ್ಥಿಕ ತಜ್ಞ ಡಾ| ವಿN°àಶ್ವರ ವರ್ಮುಡಿ ಮಾತನಾಡಿ ಯುವ ಜನತೆಗೆ ಕೃಷಿಗೆ ಬೇಕಾದ ರಸಗೊಬ್ಬರ ಬಳಸುವ ಮಾಹಿತಿ ನೀಡುವ ಕೃಷಿ ಕ್ಲಿನಿಕ್‌ ಪ್ರತೀ ಪ್ರದೇಶದಲ್ಲಿ ಆಗಬೇಕು.

ಪ್ರಾದೇಶಿಕ ಕೃಷಿ ನೀತಿಯೊಂದಿಗೆ ಉತ್ಪಾದಕ ಮಾರಾಟಗಾರನಾಗುವ ನಿಟ್ಟಿನಲ್ಲಿ ಶಿಕ್ಷಣ ನೀಡುವ ಕಾರ್ಯ ಆಗಬೇಕು ಮತ್ತು ಮೌಲ್ಯವರ್ಧನೆಗೆ ಒತ್ತು ನೀಡಬೇಕು ಎಂದರು.

Advertisement

ದ.ಕ. ಕೃಷಿ ಅಭಿವೃದ್ಧಿ ಸಹಕಾರಿ ಸಂಘ ನಿ.( ಸ್ಕ್ವಾಡ್ಸ್‌) ಅಧ್ಯಕ್ಷ ರವೀಂದ್ರ ಕಂಬಳಿ ಅಧ್ಯಕ್ಷತೆ ವಹಿಸಿದ್ದರು. ಅದಾನಿ ಸಮೂಹ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್‌ ಆಳ್ವ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮೈಸೂರು ಎಲೆಕ್ಟ್ರಿಕಲ್‌ ಇಂಡಸ್ಟ್ರಿಯಲ್‌ ಪ್ರೈ.ಲಿ. ಇದರ ಮಾಜಿ ಅಧ್ಯಕ್ಷ ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌, ಬಾಳೆಪುಣಿ ಗ್ರಾ. ಪಂ. ಅಧ್ಯಕ್ಷೆ ಸುಕನ್ಯಾ ರೈ, ಎಸ್‌ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಶಶಿಕುಮಾರ್‌ ರೈ ಬಾಲೊÂಟ್ಟು, ಕ್ಯಾಂಪ್ಕೋ ನಿರ್ದೇಶಕ ಮಹೇಶ್‌ ಚೌಟ, ಶಾಲಾ ಪ್ರಾಂಶುಪಾಲ ಅರುಣ್‌ ಪ್ರಕಾಶ್‌ ಶೆಟ್ಟಿ ಉಪಸ್ಥಿತರಿದ್ದರು.

ವಿದ್ಯಾಕೇಂದ್ರದ ಸಂಚಾಲಕ ಟಿ. ಜಿ. ರಾಜಾರಾಮ ಭಟ್‌ ಸ್ವಾಗತಿಸಿದರು. ಕೃಷಿ ಮೇಳದ ಅಧ್ಯಕ್ಷ ಜಯರಾಮ ಶೆಟ್ಟಿ ವಂದಿಸಿದರು. ಚಂದ್ರಕುಮಾರ್‌ ಕಾರ್ಯಕ್ರಮ ನಿರೂಪಿಸಿದರು.

ಮೌಲ್ಯಾಧಾರಿತ ಶಿಕ್ಷಣ ಅಗತ್ಯ
ಶಾಲಾ ಕಾಲೇಜುಗಳಲ್ಲಿ ಕೌಶಲಧಾರಿತ ಶಿಕ್ಷಣದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಶಿಕ್ಷಣ ನೀಡಬೇಕು. ಆದಾಯ ಆಧಾರಿತ ಶಿಕ್ಷಣದ ಬದಲು ಮೌಲ್ಯಾಧಾರಿತ ಶಿಕ್ಷಣ ನೀಡುವ ಕಾರ್ಯ ಆಗಬೇಕು. ಈ ಕಾರ್ಯ ಶಾರದಾ ಗಣಪತಿ ವಿದ್ಯಾ ಕೇಂದ್ರದಲ್ಲಿ ಟಿ. ಜಿ. ರಾಜಾರಾಮ ಭಟ್‌ ನೀಡುತ್ತಿರುವುದು ಶ್ಲಾಘನೀಯ. ಶಾಲಾ ಕಾಲೇಜುಗಳಲ್ಲಿ ಕೃಷಿ ಶಿಕ್ಷಣಕ್ಕೆ ಆದ್ಯತೆಯೊಂದಿಗೆ ಜೀವನಾಧಾರಿತ ಉದ್ಯೋಗದ ಬದಲು ಮೌಲ್ಯಾಧಾರಿತ ಉದ್ಯೋಗಕ್ಕೆ ಆದ್ಯತೆ ನೀಡಬೇಕು ಎಂದು ಕೃಷಿ ಆರ್ಥಿಕ ತಜ್ಞ ಡಾ| ವಿN°àಶ್ವರ ವರ್ಮುಡಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next