Advertisement

ಮುದ್ದಳ್ಳಿ ಕೈಗಾರಿಕಾ ಪ್ರದೇಶಕ್ಕೆ ಮರುಜೀವ

05:04 AM Jun 14, 2020 | Lakshmi GovindaRaj |

ನಂಜನಗೂಡು: ಹದಿನೇಳು ವರ್ಷಗಳ ಹಿಂದೆ ಕೈಗಾರಿಕಾ ಬಡಾವಣೆ ಮಾಡಲು ಉದ್ದೇಶಿಸಿದ್ದ ಮುದ್ದಳ್ಳಿ ಕೈಗಾರಿಕಾ ಪ್ರದೇಶಕ್ಕೆ ಮರುಜೀವ ನೀಡಲು ಉದ್ದೇಶಿಸಿಲಾಗಿದೆ ಎಂದು ಶಾಸಕ ಹರ್ಷವರ್ಧನ್‌ ತಿಳಿಸಿದರು.

Advertisement

ರಾಜ್ಯ ಕೈಗಾರಿಕಾ  ಅಭಿವೃದಿ ಮಂಡಳಿಯ ಅಧಿಕಾರಿ ಸುರೇಶ್‌ ಕುಮಾರ್‌ ಹಾಗೂ ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು ಅವರೊಂದಿಗೆ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. 2003ರಲ್ಲಿ ಈ  ಪ್ರದೇಶದಲ್ಲಿ ಟಿವಿಎಸ್‌ ಕಾರ್ಖಾನೆ ಆರಂಭಿಸಲು ಸಿದ್ದತೆ ನಡೆದಿತ್ತು.

ಆಗ ಗುರುತಿಸಲಾಗಿದ್ದ 475 ಎಕರೆ ಪ್ರದೇಶವನ್ನು ಬಳಸಿಕೊಂಡು ಇಲ್ಲೊಂದು ಕೈಗಾರಿಕಾ ಬಡಾವಣೆ ಸ್ಥಾಪಿಸಲು ಸಿದ್ದತೆ ಮಾಡಲಾಗಿದೆ ಎಂದು ಹೇಳಿದರು. ಹತ್ತು  ದಿನಗಳೊಳಗೆ ಮತ್ತೂಮ್ಮೆ ಸರ್ವೆ ಮಾಡಿ ವಿದ್ಯುತ್‌ ಹಾಗೂ ನೀರಿನ ಸಂಪರ್ಕ ಸೇರಿದಂತೆ ಬಡಾವಣೆಯ ನೀಲನಕ್ಷೆ ಸಿದಟಛಿಪಡಿಸಿ ಕೊಡಬೇಕು. ಯೋಜನಾ ವರದಿ ಸಲ್ಲಿಸಿದ ಕೂಡಲೇ ರಾಜ್ಯ ಕೈಗಾರಿಕಾ ಸಚಿವ ರೊಂದಿಗೆ ಚರ್ಚಿಸಿ ಅನುಮತಿ ಪಡೆಯಲು ಪ್ರಯತ್ನಿಸಲಾಗುವುದು.

ಇದರಿಂದ  ಸ್ಥಳೀಯರ ನಿರುದ್ಯೋಗ ಸಮಸ್ಯೆಯೂ ಬಗೆಹರಿಯಲಿದೆ ಎಂದು ಶಾಸಕ ಹರ್ಷವರ್ಧನ್‌ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ  ನಿರ್ದೇಶಕ ಲಿಂಗರಾಜು, ಕೆಐಡಿಬಿ ಅಭಿವೃದಿ ಅಧಿಕಾರಿ ಶ್ರೀಧರ್‌, ಸರ್ವೆಯರ್‌ ನರಸಯ್ಯ, ನಂಜನಗೂಡು ತಾಪಂ ಅಧ್ಯಕ್ಷ ಮಹದೇವಪ್ಪ, ಇಒ ಶ್ರೀಕಂಠರಾಜ್‌ ಅರಸು, ರಾಜಸ್ವ ನಿರೀಕ್ಷಕ ಪ್ರಕಾಶ, ಜಿಪಂ ಮಾಜಿ ಸದಸ್ಯ ಸಿಂಧುವಳ್ಳಿ  ಕೆಂಪಣ್ಣ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next