Advertisement
ನಾಗರಿಕ ವಿಮಾನ ಯಾನ ಸಚಿವಾಲಯದ ಅಧೀನ ಕಾರ್ಯದರ್ಶಿ ಕಳೆದ ನವೆಂಬರ್ 6ರಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಬರೆದು ಕೂಡಲೇ ಯೋಜನೆಗೆ ಅಗತ್ಯವಿರುವ 32. 97 ಎಕ್ರೆ ಪ್ರದೇಶವನ್ನು ಉಚಿತವಾಗಿ ಒದಗಿಸು ವಂತೆ ಕೋರಿದ್ದರು.
Related Articles
ಈ ನಿಲ್ದಾಣದಲ್ಲಿ 2010ರ ಮೇ 22ರಂದು ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಅಪಘಾತಕ್ಕೀಡಾಗಿ 158 ಮಂದಿ ಸಾವಿಗೀಡಾಗಿದ್ದರು. ಈ ಹಿನ್ನೆಲೆಯಲ್ಲಿ 9 ವರ್ಷಗಳ ಹಿಂದೆ ನಾಗರಿಕ ವಿಮಾನ ಯಾನ ಮಹಾನಿರ್ದೇಶಕರು ರೇಸಾ ನಿರ್ಮಾಣಕ್ಕೆ ಸೂಚಿಸಿದ್ದರು. ವಾಸ್ತವವಾಗಿ ಪ್ರಯಾಣಿಕರಿಗೆ ಸುರಕ್ಷತೆಯನ್ನು ಹೆಚ್ಚಿಸುವ ರೇಸಾವನ್ನುಕೇಂದ್ರ ಮತ್ತು ರಾಜ್ಯ ಸರಕಾರಗಳು ಇಷ್ಟರೊಳಗೇ ಮಾಡಿ ಮುಗಿಸಬೇಕಿತ್ತು.
Advertisement
ರೇಸಾ ನಿರ್ಮಾಣಕ್ಕೆ ಸಂಬಂಧಿಸಿ 32.97 ಎಕ್ರೆ ಜಮೀನು ಕೋರಿ 2015-16ರಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಪತ್ರ ಬರೆದಿತ್ತು. ಕಳೆದ ವರ್ಷ ಕೇಂದ್ರ ನಾಗರಿಕ ವಿಮಾನ ಯಾನ ಸಚಿವಾಲಯವು ರಾಜ್ಯ ಸರಕಾರದ ಮೂಲಸೌಕರ್ಯ ಇಲಾಖೆಗೆ ನಿರ್ದೇಶನ ನೀಡಿದ್ದು, ಮಂಗಳೂರು ವಿಮಾನ ನಿಲ್ದಾಣಕ್ಕೆ ಭೂಮಿಯನ್ನು ಕೂಡಲೇ ಭೂ ಸ್ವಾಧೀನ ಮಾಡಿ ಪ್ರಾಧಿಕಾರಕ್ಕೆ ಹಸ್ತಾಂತರಿಸುವಂತೆ ಸೂಚಿಸಿತ್ತು.
ವಿಸ್ತರಣೆಯೂ ವಿಳಂಬರನ್ವೇ ವಿಸ್ತರಣೆಗೆ ಕೊಳಂಬೆ, ಅದ್ಯಪಾಡಿ ಪ್ರದೇಶದಲ್ಲಿ ಜಮೀನು ಗುರುತಿಸಿ ಜಿಲ್ಲಾಡಳಿತ ರಾಜ್ಯ ಮೂಲಸೌಕರ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಹಲವು ಸಮಯ ಕಳೆದಿದೆ. ಆದರೆ ಈ ವಿಷಯದಲ್ಲೂ ಯಾವುದೇ ಪ್ರಗತಿ ಆಗಿಲ್ಲ. ಪಾಯಿಂಟ್ ಆಫ್ ಕಾಲ್
ಟೇಬಲ್‌ಟಾಪ್ ರನ್‌ವೇ ಆಗಿರುವುದರಿಂದ ಸಹಜವಾಗಿಯೇ ಬೃಹತ್ ವಿಮಾನಗಳೊಂದಿಗೆ ಕಾರ್ಯಾಚರಿಸುವ ಎತಿಹಾಡ್, ಎಮಿರೇಟ್ಸ್‌ನಂತಹ ಕಂಪೆನಿಗಳು ಇತ್ತ ಕಣ್ಣುಹಾಯಿಸುತ್ತಿಲ್ಲ. ಕಾರಣ ಅಷ್ಟು ವಿಶಾಲವಾದ ರನ್‌ವೇ ಕೊರತೆಯೂ ಇದೆ. ಹಾಗಾಗಿ ವಿದೇಶದ ಹಲವು ಭಾಗಗಳಿಗೆ ಸಂಪರ್ಕ ಇಲ್ಲಿಂದ ಸಾಧ್ಯವಾಗುತ್ತಿಲ್ಲ. ಪಾಯಿಂಟ್ ಆಫ್ ಕಾಲ್ ಸ್ಥಾನಮಾನವನ್ನು ಡಿಜಿಸಿಎ ಒದಗಿಸಿದರೆ ವಿದೇಶಿ ಕಂಪೆನಿಗಳು ಬರಬಹುದು.ಆದರೆ ಅದಕ್ಕೆ ಈ ರೇಸಾ ನಿರ್ಮಾಣ ಕೂಡ ಅಗತ್ಯ ಎನ್ನುತ್ತಾರೆ ಕ್ಷೇತ್ರ ಪರಿಣಿತರು. ರೇಸಾ ಎಂದರೆ..
ರನ್‌ವೇಯ ಎರಡೂ ತುದಿಗಳಲ್ಲೂ ಸುರಕ್ಷೆ ಉದ್ದೇಶದಲ್ಲಿ ತಲಾ 140 ಮೀಟರ್ ಉದ್ದದಲ್ಲಿ ರನ್‌ವೇ ಎಂಡ್ ಸೇಫ್ಟಿ ಏರಿಯಾ(ರೇಸಾ) ನಿರ್ಮಿಸಬೇಕು. ಇದರಿಂದ ಆಕಸ್ಮಿಕವಾಗಿ ಓವರ್‌ಶೂಟ್ ಆಗುವ ವಿಮಾನ ಹೆಚ್ಚು ಸುರಕ್ಷಿತವಾಗಿರುತ್ತದೆ. ರನ್ ವೇ ವಿಸ್ತರಣೆ ಆಗಿಲ್ಲ
ಮಂಗಳೂರು ವಿಮಾನ ನಿಲ್ದಾಣದ ರನ್‌ವೇ ಪ್ರಸ್ತುತ 8,038 ಅಡಿ ಉದ್ದವಿದೆ. 2013 ರಲ್ಲಿ ಇದನ್ನು 11,600 ಅಡಿಗೆ ವಿಸ್ತರಿಸುವ ಯೋಜನೆ ರೂಪಿಸಲಾಗಿತ್ತು. ಇದಕ್ಕೆ 280 ಎಕ್ರೆ ಜಾಗ ಹಾಗೂ 1,120 ಕೋಟಿ ರೂ. ವೆಚ್ಚ ಅಂದಾಜಿಸಲಾಗಿತ್ತು. ಭೂ ಸ್ವಾಧೀನಕ್ಕೆ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಆದರೆ ಅಧಿಕ ಮೊತ್ತ ಅಗತ್ಯವಿದ್ದ ಕಾರಣ ವಿಸ್ತರಣೆಯನ್ನು 10,500 ಅಡಿಗೆ ಇಳಿಸಲು ತೀರ್ಮಾನಿಸಲಾಯಿತು. ಅದೂ ಹೊರೆಯಾದದ್ದಕ್ಕೆ ಸದ್ಯ 32.97 ಎಕ್ರೆ ಭೂಸ್ವಾಧೀನಕ್ಕೆ ಇಳಿಸಲು ನಿರ್ಧರಿಸಲಾಗಿದೆ.
“ವಿಮಾನ ನಿಲ್ದಾಣಕ್ಕಾಗಿ ಅಂದಾಜು ಖರೀದಿ ವೆಚ್ಚ ಸಹಿತ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳಿಸಲಾಗಿದೆ. ಇದುವರೆಗೆ ಭೂಸ್ವಾಧೀನ ಅಧಿಸೂಚನೆ ಆಗಿಲ್ಲ. ಸರಕಾರದ ಸೂಚನೆಯನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು.” -ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ – ವೇಣುವಿನೋದ್ ಕೆ.ಎಸ್.